ಶಿವಮೊಗ್ಗ LIVE
ಶಿವಮೊಗ್ಗ: ಈ ಬೀದಿ ದೀಪದ ಕೆಳಗೆ ಸದಾ ಕತ್ತಲು. ಯಾಕಂದರೆ ಇವು ಆನ್ ಆಗಿದ್ದೇ ಇಲ್ಲ. ಅಂಗಡಿ ಮುಂಗಟ್ಟುಗಳ ಮುಂದಿನ ಲೈಟ್‌ಗಳಿಂದಲೇ ಈ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸ್ವಲ್ಪ ಬೆಳಕು ಕಾಣಿಸುತ್ತದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಇಂತಹ ದುಸ್ಥಿತಿ ಇರುವುದು ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿ. ಹೆದ್ದಾರಿಯಾದರು ಹಲವು ತಿಂಗಳಿಂದ ಈ ಬೀದಿ ದೀಪಗಳು ಕಾರ್ಯನಿರ್ವಹಿಸಿಲ್ಲ. ಶಂಕರ ಮಠ ರಸ್ತೆಯ ಸುಪ್ರೀಂ ಬಜಾಜ್ ಶೋ ರೂಂ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಬೀದಿ ದೀಪ ಅಳವಡಿಸಲಾಗಿದೆ. ಅಲ್ಲಿಂದ ಶಂಕರಮಠ ಸರ್ಕಲ್‌ವರೆಗೆ 9 ಬೀದಿ ದೀಪಗಳ ಕಂಬಗಳನ್ನು ಹಾಕಲಾಗಿದೆ.
ಅಂಗಡಿಗಳ ಲೈಟ್‌ನಿಂದಲೇ ರಸ್ತೆಗೆ ಬೆಳಕು
ಶಂಕರ ಮಠ ರಸ್ತೆಯ ಒಂದು ಬದಿಯಲ್ಲಿ ಈ ಹೈಟೆಕ್ ಬೀದಿ ದೀಪಗಳಿವೆ. ಮತ್ತೊಂದು ಬದಿಯಲ್ಲಿ ವಿದ್ಯುತ್ ಕಂಬಗಳಲ್ಲಿ ಲೈಟ್‌ಗಳನ್ನು ಹಾಕಲಾಗಿದೆ. ಇವುಗಳಿಂದಾಗಿ ರಸ್ತೆಯ ಒಂದು ಬದಿಗೆ ಮಾತ್ರ ಬೆಳಕು ಕಾಣಲಿದೆ. ಆದರೆ ಮತ್ತೊಂದು ಬದಿಗೆ ಶೋ ರೂಂಗಳ ಲೈಟ್‌ಗಳೇ ಆಸರೆಯಾಗಿದೆ. ಶೋ ರೂಂಗಳು, ಅಂಗಡಿ ಮುಂಗಟ್ಟು ಬಂದ್ ಆದರೆ ರಸ್ತೆಯಲ್ಲಿ ಬೆಳಕಿನ ಕೊರತೆ ಉಂಟಾಗುತ್ತದೆ.
ರೈಲ್ವೆ ನಿಲ್ದಾಣಕ್ಕೆ ಇದು ಪ್ರಮುಖ ಸಂಪರ್ಕ ರಸ್ತೆ. ಇನ್ನು ಭದ್ರಾವತಿ ಕಡೆಯಿಂದ ಹೊನ್ನಾಳಿ, ದಾವಣಗೆರೆ ಕಡೆಗೆ ತೆರಳುವುದಕ್ಕು ಇದೇ ಮುಖ್ಯ ರಸ್ತೆ. ಹಾಗಾಗಿ ರಾತ್ರಿ ವೇಳೆಯು ಇಲ್ಲಿ ಜನ ಮತ್ತು ವಾಹನಗಳ ಸಂಚಾರ ಇರುತ್ತದೆ. ಇನ್ನೊಂದೆಡೆ ಇಲ್ಲಿರುವ ಡಿವೈಡರ್ ತಕ್ಷಣಕ್ಕೆ ವಾಹನ ಸವಾರರಿಗೆ ಗೊತ್ತಾಗುವುದಿಲ್ಲ. ಬೀದಿ ದೀಪ ಇದ್ದರೆ ಸಂಭಾವ್ಯ ಅಪಘಾತ ತಪ್ಪಲಿದೆ.
ಇದನ್ನೂ ಓದಿ » ಶಿವಮೊಗ್ಗಕ್ಕೆ ಬರ್ತಿದ್ದಾರೆ ಮಹಿಳಾ ಆಯೋಗದ ಅಧ್ಯಕ್ಷೆ, ಸಾಲು ಸಾಲು ಸಭೆ, ಸಮಾರಂಭದಲ್ಲಿ ಭಾಗಿ
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






