ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ರಾಗಿಗುಡ್ಡ ಸಮೀಪದ ಶಾಂತಿನಗರಕ್ಕೆ ಖಾಸಗಿ ಸಿಟಿ ಬಸ್‌ಗಳನ್ನು ನಿಷೇಧಿಸಬೇಕು. ಸಿಟಿ ಬಸ್ ಡಿಕ್ಕಿಯಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನ.16ರ ರಾತ್ರಿ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ನಡೆದ ಅಪಘಾತ ಖಾಸಗಿ ಬಸ್‌ಗಳ ಯಮಸ್ವರೂಪಿ ವೇಗಕ್ಕೆ ಸಾಕ್ಷಿಯಾಗಿದೆ. ಶಾಂತಿನಗರದ ಯುವಕ ಜೀವ ಕಳೆದುಕೊಂಡು, ಮೂರ್ನಾಲ್ಕು ಬೈಕ್ ಸವಾರರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರ್ಘಟನೆಗೆ ಖಾಸಗಿ ಸಿಟಿ ಬಸ್‌ಗಳ ಬೇಜವಾಬ್ದಾರಿತನ ಹಾಗೂ ಫ್ಲೈ ಓವರ್ ಬಳಿ ಕೆಲಸ ಮಾಡುತ್ತಿರುವ ಗುತ್ತಿಗೆದಾರರು ಕಾರಣರಾಗಿದ್ದಾರೆ ಎಂದು ದೂರಿದರು.
ಬಸ್ ಮಾಲೀಕರು ಮತ್ತು ಗುತ್ತಿಗೆದಾರರಿಂದ ಯುವಕನ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು. ಶಾಂತಿನಗರಕ್ಕೆ ಖಾಸಗಿ ಸಾರಿಗೆ ಬಸ್ ನಿಷೇಧಿಸಿ ಸರ್ಕಾರಿ ನಗರ ಸಾರಿಗೆ ಬಸ್ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಯದ್ವಾತದ್ವ ಚಲಿಸಿದ ಸಿಟಿ ಬಸ್, ನವ ವಿವಾಹಿತ ಸಾವು, ಬೈಕುಗಳು ಜಖಂ
ವೇದಿಕೆ ಅಧ್ಯಕ್ಷ ಸೈಯದ್ ಮುಜೀಬುಲ್ಲಾ, ರಾಮು, ನಾಸೀರುದ್ದೀನ್, ಫಯಾಜ್‌ಖಾನ್, ಅಬ್ರಾರ್, ಪ್ರಸನ್ನ, ಜಬೀವುಲ್ಲಾ, ರಿಜ್ವಾನ್, ಅನ್ವರ್ ಪ್ರತಿಭಟನೆಯಲ್ಲಿದ್ದರು.
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






