ಶೀಟ್‌ ಮೇಲಿತ್ತು ಪ್ರತಿಷ್ಠಿತ ಕಂಪನಿಯ ಹೆಸರು, ಪೊಲೀಸ್‌ ದಾಳಿ ಬಳಿಕ ಹೊರಬಿತ್ತು ಅಸಲಿ ವಿಷಯ

ಶಿವಮೊಗ್ಗ: ಬೇರೆ ಕಂಪನಿಯ ಕಬ್ಬಿಣದ ಶೀಟ್ ಮೇಲೆ JSW ಕಂಪನಿಯ ಹೆಸರು ಮುದ್ರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಿಂಟ್ ಮಾಡಲು ಬಳಸುತ್ತಿದ್ದ ಯಂತ್ರ ಸಹಿತ ಹೊಳೆಬೆನವಳ್ಳಿ ಗ್ರಾಮದ ಲೋಹಿತ್ ಬಿ.ನಾಯ್ಕ (34) ಎಂಬುವರನ್ನು ವಶಪಡಿಸಿಕೊಳ್ಳಲಾಗಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಎಂಜಿನಿಯರಿಂಗ್‌ ವರ್ಕ್ಸ್‌ವೊಂದರಲ್ಲಿ ತಮ್ಮ ಬ್ರ್ಯಾಂಡ್‌ನ ನಕಲು ಮಾಡಿ ಕಬ್ಬಿಣ ಮಾರಾಟ ಮಾಡುತ್ತಿರುವ ಬಗ್ಗೆ ಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಡಿವೈಎಸ್‌ಪಿ ಸಂಜೀವ್ ಕುಮಾ‌ರ್ ಮಾರ್ಗದರ್ಶನದಲ್ಲಿ ಠಾಣೆಯ ಪಿಐ ಸಿದ್ದನಗೌಡ, ಪಿಎಸ್‌ಐ ಕೆ.ಎನ್. ಹಳ್ಳಿಯವರ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು.

ಇದನ್ನೂ ಓದಿ » ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ನವೆಂಬರ್‌ 21ರಂದು ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಬಡಾವಣೆಗಳ‌ ಲಿಸ್ಟ್

ಬ್ರ್ಯಾಂಡ್‌ ನಕಲು ಮಾಡುವ ಜಾಗದ ಬಗ್ಗೆ ಮಾಹಿತಿ ನೀಡಿದ್ದು, ಅದರ ಆಧಾರದ ಮೇಲೆ ಆರೋಪಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Comment