SHIVAMOGGA LIVE NEWS | 24 FEBRURARY 2023
SHIMOGA : ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಇದೆ ಸಮಯವನ್ನು ದುರ್ಬಳಕೆ ಮಾಡಿಕೊಂಡು ಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ ಮುಂದುವರೆದಿದೆ. ಹಲವು ಆಕಾಂಕ್ಷಿಗಳಿಗೆ ಕರೆ ಮಾಡಿ, ಆನ್ ಲೈನ್ ಇಂಟರ್ ವ್ಯೂ (Interview) ನಡೆಸಲಾಗುತ್ತಿದೆ.
ಶಿವಮೊಗ್ಗದ ವಿದ್ಯಾರ್ಥಿನಿಗೆ ಇಂಟರ್ ವ್ಯೂ
ವಿಮಾನ ನಿಲ್ದಾಣದಲ್ಲಿ ಉದ್ಯೋಗವಿದೆ ಎಂದು ಶಿವಮೊಗ್ಗದ ವಿದ್ಯಾರ್ಥಿನಿಯೊಬ್ಬರಿಗೆ ಆನ್ ಲೈನ್ ಮೂಲಕ ಸಂದರ್ಶನ (Interview) ನಡೆಸಲಾಗಿದೆ. ‘ಗ್ರೌಂಡ್ ಸ್ಟಾಫ್ ಆಗಿ ನೀವು ಆಯ್ಕೆಯಾಗಿದ್ದೀರ. ತರಬೇತಿ ನೀಡಲಾಗುತ್ತದೆ’ ಎಂದು ಸಂದರ್ಶನಕಾರರು ತಿಳಿಸಿದ್ದಾರೆ. ಬಳಿಕ 11 ಸಾವಿರ ರೂ. ಡಾಕ್ಯೂಮೆಂಟ್ ವೆರಿಫಿಕೇಷನ್ ಚಾರ್ಜ್ ಕಟ್ಟಬೇಕು ಎಂದು ಸೂಚಿಸಿದ್ದಾರೆ. ಗೂಗಲ್ ಪೇ ನಂಬರ್ ಕೂಡ ಕಳುಹಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಿದ್ಯಾರ್ಥಿನಿ ಹೇಳಿದ್ದೇನು?
ಶಿವಮೊಗ್ಗ ಲೈವ್.ಕಾಂಗೆ ಜೊತೆಗೆ ಮಾತನಾಡಿದ ವಿದ್ಯಾರ್ಥಿನಿ, ‘ಗೂಗಲ್ ನಲ್ಲಿ ಶಿವಮೊಗ್ಗ ಏರ್ ಪೋರ್ಟ್ ಜಾಬ್ಸ್ ಎಂದು ಸರ್ಚ್ ಕೊಟ್ಟರೆ ಹಲವು ಆಯ್ಕೆಗಳು ಬರುತ್ತಿವೆ. ಕ್ಲಿಕ್ ಮಾಡಿ, ನಂಬರ್ ರಿಜಿಸ್ಟರ್ ಮಾಡಿದಾಕ್ಷಣ ಆನ್ ಲೈನ್ ಮೂಲಕ ಸಂದರ್ಶನ ನಡೆಸಿದರು. ಬಳಿಕ ನೀವು ಆಯ್ಕೆಯಾಗಿದ್ದೀರ. ಡಾಕ್ಯೂಮೆಂಟ್ ವೆರಿಫಿಕೇಷನ್ ಗೆ 11,050 ರೂ. ಪಾವತಿಸಿ ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.
ಈ ಮೇಲ್ ಮೂಲಕ ಆಫರ್ ಲೆಟರ್
ಸಂದರ್ಶನ ಮುಗಿಯುತ್ತಿದ್ದಂತೆ ಈ ಮೇಲ್ ಗೆ ಆಫರ್ ಲೆಟರ್ ಕೂಡ ಕಳುಹಿಸುತ್ತಿದ್ದಾರೆ. ವಿಮಾನ ನಿಲ್ದಾಣದ ಗ್ರೌಂಡ್ ಸ್ಟಾಫ್ ಆಗಿ ನಿಮ್ಮನ್ನು ಆಯ್ಕೆ ಮಾಡಲಾಗಿದೆ. ತರಬೇತಿ ಮುಗಿಯುತ್ತಿದ್ದಂತೆ ನಿಮ್ಮ ವೇತನ ಶೇ.30ರಷ್ಟು ಹೆಚ್ಚಳ ಮಾಡುತ್ತೇವೆ. ಅಲ್ಲದೆ ವಿಳಾಸ ದೃಢೀಕರಣ ಪತ್ರ, ಬಯೋಡೇಟಾ, 1 ಪಾಸ್ ಪೋರ್ಟ್ ಸೈಸ್ ಫೋಟೊ, 1 ಫುಲ್ ಫೋಟೋ, ಡಾಕ್ಯೂಮೆಂಟ್ ವೆರಿಫಿಕೇಷನ್ ಚಾರ್ಜ್ ಪಾವತಿಸಿ ಎಂದು ಆಫರ್ ಲೆಟರ್ ನಲ್ಲಿ ಸೂಚಿಸಲಾಗುತ್ತಿದೆ.
ಇನ್ನೂ ನಿಂತಿಲ್ಲ ನಕಲಿ ಇಂಟರ್ ವ್ಯೂ
ಇದು ಶಿವಮೊಗ್ಗದ ವಿದ್ಯಾರ್ಥಿನಿಯೊಬ್ಬಳ ಕಥೆಯಲ್ಲ. ಇನ್ನು ಹಲವರು ವಿಮಾನ ನಿಲ್ದಾಣದ ಉದ್ಯೋಗದ ಹೆಸರಲ್ಲಿ ವಂಚನೆಗೊಳಗಾಗುತ್ತಿದ್ದಾರೆ. ಆನ್ ಲೈನ್ ಮೂಲಕ ಸಂದರ್ಶನ ನಡೆಸಿ, ಆನ್ ಲೈನ್ ಪೇಮೆಂಟ್ ಪಡೆಯಲಾಗುತ್ತಿದೆ. ಕೊನೆಗೆ ಉದ್ಯೋಗವು ಇಲ್ಲದೆ, ಹಣವು ಮರಳಿ ಬಾರದ ಪೇಚಿಗೆ ಸಿಲುಕಿತ್ತಿದ್ದಾರೆ.
ಗೂಗಲ್ ನಲ್ಲಿ ವಂಚಕರ ಜಾಲ
ಗೂಗಲ್ ಸರ್ಚ್ ಬಳಸಿಕೊಂಡು ವಂಚಕರು ಉದ್ಯೋಗಕಾಂಕ್ಷಿಗಳಿಗೆ ಬಲೆ ಬೀಸುತ್ತಿದ್ದಾರೆ. 65 ಸಾವಿರ ರೂ.ವರೆಗೂ ವೇತನ ಎಂದು ನೋಟಿಫಿಕೇಷನ್ ಪ್ರಕಟಿಸಿ, ಆಕಾಂಕ್ಷಿಗಳ ಗಮನ ಸೆಳೆಯುತ್ತಿದ್ದಾರೆ. ಲಿಂಕ್ ಕ್ಲಿಕ್ ಮಾಡಿ, ನಂಬರ್ ಎಂಟ್ರಿ ಮಾಡುತ್ತಿದ್ದಂತೆ ನೇರವಾಗಿ ಆನ್ ಲೈನ್ ಸಂದರ್ಶನಕ್ಕೆ ಕರೆ ಬರುತ್ತಿದೆ.
ಎರಡು ಪ್ರಕರಣ ದಾಖಲು
ವಿಮಾನ ನಿಲ್ದಾಣದಲ್ಲಿ ಉದ್ಯೋಗದ ನೆಪದಲ್ಲಿ ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ಈತನಕ ಎರಡು ಪ್ರಕರಣ ದಾಖಲಾಗಿದೆ. ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದೆ ರೀತಿ ಹಲವರಿಗೆ ಮೋಸ ಆಗಿದೆ. ಆದರೆ ‘ಹಣ ಹೋದರೆ ಹೋಯಿತು, ಮರ್ಯಾದೆ ಉಳಿಯಲಿ’ ಎಂದು ಹಲವರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡು ವಂಚಕರು ಉದ್ಯೋಗಾಕಾಂಕ್ಷಿಗಳಿಂದ ಹಣ ಕೀಳುತ್ತಿದ್ದಾರೆ.
ಇದನ್ನೂ ಓದಿ – ವಿಮಾನ ನಿಲ್ದಾಣ ಉದ್ಘಾಟನೆ, ಶಿವಮೊಗ್ಗದಲ್ಲಿ ಮಾರ್ಗ ಬದಲಾವಣೆ, ಯಾವ್ಯಾವ ಊರಿನವರಿಗೆ ಎಲ್ಲೆಲ್ಲಿದೆ ಪಾರ್ಕಿಂಗ್?
ವಿಮಾನ ನಿಲ್ದಾಣದಲ್ಲಿ ಕೆಲಸ ಇದ್ಯಾ?
ಫೆ.27ರಂದು ವಿಮಾನ ನಿಲ್ದಾಣ ಉದ್ಘಾಟನೆಯಾಗುತ್ತಿದೆ. ಈಗಾಗಲೇ ತಾಂತ್ರಿಕ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಹೊರತು ಹೌಸ್ ಕೀಪಿಂಗ್ ಉದ್ಯೋಗಗಳಿವೆ. ಆದರೆ ಅದಕ್ಕೆ ಈತನಕ ಅರ್ಜಿ ಆಹ್ವಾನಿಸಿಲ್ಲ. ಹೀಗಿದ್ದೂ, ಗ್ರೌಂಡ್ ಸ್ಟಾಫ್ ಬೇಕು ಎಂಬ ನೆಪದಲ್ಲಿ ಸಂದರ್ಶನ ನಡೆಸಿ, ವಂಚಿಸಲಾಗುತ್ತಿದೆ. ಈ ಕುರಿತು ಉದ್ಯೋಗಕಾಂಕ್ಷಿಗಳು ಎಚ್ಚರ ವಹಿಸಬೇಕಿದೆ. ಇಲ್ಲವಾದಲ್ಲಿ ಹಣವು ಇಲ್ಲದೆ, ಉದ್ಯೋಗವು ಸಿಗದ ಪರಿತಪಿಸಬೇಕಾಗುತ್ತದೆ.