ಶಿವಮೊಗ್ಗ – ಬೆಂಗಳೂರು ವಿಮಾನ, ಸಂಸದ ರಾಘವೇಂದ್ರ ಹೇಳಿದ್ದೇನು? ಯಾವಾಗ ಶುರುವಾಗುತ್ತೆ ಹಾರಾಟ?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE NEWS | 27 APRIL 2023

SHIMOGA : ಸದ್ಯದಲ್ಲೇ ಶಿವಮೊಗ್ಗ ಬೆಂಗಳೂರು ವಿಮಾನ (Flight) ಹಾರಾಟ ಆರಂಭವಾಗಲಿದೆ. ಇದಕ್ಕೆ ಬೇಕಾದ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಚುನಾವಣೆ ಮೊದಲೆ ವಿಮಾನ ಹಾರಾಟ ಶುರುವಾಗಬಹುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

MP-BY-raghavendra-about-Shimoga-Airport-Flight

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಇನ್ನೊಂದು ವಾರದಲ್ಲಿ ವಿಮಾನ (Flight) ಹಾರಾಟ ಆರಂಭವಾಗಲಿದೆ ಎಂದು ಈ ಹಿಂದೆ ತಿಳಿಸಿದ್ದೆ. ಒಂದು ವಾರದ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಇಂಡಿಗೋ ವಿಮಾನಯಾನ ಸಂಸ್ಥೆಯವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೇಂದ್ರ ವಿಮಾನಯಾನ ಪ್ರಾಧಿಕಾರದ (ಡಿಜಿಸಿಎ) ಜೊತೆಗೆ ಇಂಡಿಗೋ ಒಪ್ಪಂದ ಮಾಡಿಕೊಂಡಿದೆ. ಇಂಡಿಗೋ ಸಂಸ್ಥೆ ತನ್ನ ವೆಬ್‌ಸೈಟಿನಲ್ಲಿ ವಿಮಾನ ಸೇವೆಯ ಟೈಮಿಂಗ್‌ ಅಪ್‌ಲೋಡ್‌ ಮಾಡುವುದನ್ನು ಕಾಯುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಏ.28ಕ್ಕೆ ಬರಲಿದೆ ವಿಶೇಷ ವಿಮಾನ, ಬರ್ತಿರೋದ್ಯಾರು?

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅತ್ಯಾಧುನಿಕ ಫೈರ್‌ ಇಂಜಿನ್‌ ಅಗತ್ಯವಿತ್ತು. ದುಬೈನಿಂದ ಮೂರು ಫೈರ್‌ ಇಂಜಿನ್‌ ತರಿಸಲಾಗಿದೆ. ಇನ್ನೊಂದೆರಡು ದಿನದಲ್ಲಿ ಅವುಗಳು ವಿಮಾನ ನಿಲ್ದಾಣ ತಲುಪಲಿವೆ. ಇಂಡಿಗೋ ಸಂಸ್ಥೆಗೆ 2 ಕೋಟಿ ರೂ. ಸಬ್ಸಿಡಿ ನೀಡಬೇಕಿದೆ. ಅದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು.

shivamogga live news whatsappa number

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಏಪ್ರಿಲ್ 27, 2023

Leave a Comment