ಶಿವಮೊಗ್ಗ ನಗರ ಕೇಸರಿಮಯ, ಹೇಗಿದೆ ಈ ಭಾರಿಯ ಅಲಂಕಾರ?

 SHIVAMOGGA LIVE NEWS 

SHIMOGA | ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಪೂರ್ವ ಮೆರವಣಿಗೆ ಹಿನ್ನೆಲೆ ನಗರ ಕೇಸರಿಮಯವಾಗಿದೆ (KESARI). ಮೆರವಣಿಗೆ ಸಾಗುವ ಮಾರ್ಗದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಅಲಂಕಾರ ಆರಂಭಿಸಿದ್ದಾರೆ. ಅಲ್ಲದೆ ಕುಟುಂಬ ಸಹಿತ ಬಂದು ಅಲಂಕಾರವನ್ನ ಕಣ್ತುಂಬಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Shimoga Nanjappa Hospital

ಗಾಂದಿ ಬಜಾರ್’ನಲ್ಲಿ ಗೀತೋಪದೇಶ ಕಾನ್ಸೆಪ್ಟ್’ನ ಬೃಹತ್ ಮಹಾದ್ವಾರ ನಿರ್ಮಿಸಲಾಗಿದೆ. ಇದರ ಬಹುತೇಕ ಕೆಲಸ ಪೂರ್ಣಗೊಂಡಿದೆ. ಈಗಾಗಲೇ ಜನರು ಮಹಾದ್ವಾರದ ಬಳಿ ಬಂದು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಕೇಸರಿಮಯ ಗಾಂಧಿ ಬಜಾರ್

ಇನ್ನು, ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಗಾಂಧಿ ಬಜಾರ್ ರಸ್ತೆ ಸಂಪೂರ್ಣ ಕೇಸರಿಮಯವಾಗಿದೆ. ಕೇಸರಿ ಹಿಂದೂ ಅಲಂಕಾರ ಸಮಿತಿ ವತಿಯಿಂದ ಗಾಂಧಿ ಬಜಾರ್’ನಲ್ಲಿ ರಸ್ತೆ ಉದ್ದಕ್ಕೂ ಕೇಸರಿ (KESARI) ಬಂಟಿಂಗ್ಸ್ ಕಟ್ಟಲಾಗಿದೆ. ಇನ್ನಷ್ಟು ಅಲಂಕಾರ ಬಾಕಿ ಉಳಿದಿದ್ದು, ಇವತ್ತು ಸಂಪರ್ಣಗೊಳ್ಳಲಿದೆ ಎಂದು ಕೇಸರಿ ಹಿಂದೂ ಅಲಂಕಾರ ಸಮಿತಿ ಮುಖ್ಯಸ್ಥ ದೀನದಯಾಳು ತಿಳಿಸಿದ್ದಾರೆ.

Kalleshwara-Enterprises.webp

ಏನೇನೆಲ್ಲ ಅಲಂಕಾರವಾಗುತ್ತಿದೆ?

ಮೆರವಣಿಗೆ ಸಾಗುವ ಪ್ರತಿ ಸರ್ಕಲ್’ನಲ್ಲಿಯು ವಿಭಿನ್ನವಾಗಿ ಅಲಂಕಾರ ಮಾಡಲಾಗುತ್ತಿದೆ. ರಾಮಣ್ಣ ಶ್ರೇಷ್ಠಿ ಪಾರ್ಕ್, ಶಿವಪ್ಪನಾಯಕ ವೃತ್ತ, ಶಿವಪ್ಪನಾಯಕ ಹಳೆ ಮಾರುಕಟ್ಟೆ ವೃತ್ತ (ಎಎ ಸರ್ಕಲ್), ಗೋಪಿ ವೃತ್ತದಲ್ಲಿ ವಿಶೇಷ ಅಲಂಕಾರ ಮಾಡಲಾಗುತ್ತಿದೆ.

ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಆದ್ದರಿಂದ ಯುವಕರಿಗೆ ದೈವ ಭಕ್ತಿ ಮತ್ತು ರಾಷ್ಟ್ರಭಕ್ತಿಯನ್ನು ಮೂಡಿಸುವಂತೆ ಅಲಂಕಾರ ಮಾಡಲಾಗುತ್ತಿದೆ. ಛತ್ರಪತಿ ಶಿವಾಜಿ, ರಾಣ ಪ್ರತಾಪ್ ಸಿಂಗ್ ಪ್ರತಿಮೆಗಳನ್ನು ಇರಿಸಲಾಗುತ್ತಿದೆ.ದೀನದಯಾಳ್, ಕೇಸರಿ ಹಿಂದೂ ಅಲಂಕಾರ ಸಮಿತಿ

50 ಸಾವಿರಕ್ಕಿಂತಲೂ ಹೆಚ್ಚು ಜನರು

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಭಾರಿಯೂ 50 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆ ಜನರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿ ಮಹಾದ್ವಾರ, ನಿರ್ಮಿಸಿದ್ದು ಯಾರು?

50 ಸಾವಿರಕ್ಕಿಂತಲೂ ಹೆಚ್ಚು ಜನರು ಮೆರವಣಿಗೆಯಲ್ಲಿ ಇರಲಿದ್ದಾರೆ. 5 ಸಾವಿರಕ್ಕಿಂತಲೂ ಹೆಚ್ಚು ಮಹಿಳೆಯರು, ಮಾತೆಯರು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ.ದೀನದಯಾಳ್, ಕೇಸರಿ ಹಿಂದೂ ಅಲಂಕಾರ ಸಮಿತಿ

ಕುಟುಂಬದೊಂದಿಗೆ ಬನ್ನಿ

ಇವತ್ತು ನಗರ ಸಂಪುರ್ಣ ಅಲಂಕಾರಗೊಳ್ಳಲಿದೆ. ಸಂಜೆ ವೇಳೆಗೆ ನಗರದ ನಾಗರಿಕರು ಕುಟುಂಬದೊಂದಿಗೆ ಬಂದು ಅಲಂಕಾರವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದು ಕೇಸರಿ ಹಿಂದೂ ಅಲಂಕಾರ ಸಮಿತಿ ಮನವಿ ಮಾಡಿದೆ.

TODAY NEWS PARAGRAPH

ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ವಾಹನ ಸವಾರರಿಗೆ ಗೊತ್ತಿರಬೇಕು ಈ 8 ಪಾಯಿಂಟ್

Ganesh Birthday

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment