ಶಿವಮೊಗ್ಗ : ಹೈಕೋರ್ಟ್ ಕಲಾಪಗಳ ಮಾದರಿಯಲ್ಲೇ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಕಲಾಪಗಳನ್ನು ಇನ್ಮುಂದೆ ಲೈವ್ (Live) ವೀಕ್ಷಿಸಬಹುದಾಗಿದೆ. ಇದಕ್ಕಾಗಿ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲಿ ನ್ಯಾಯಾಲಯದಲ್ಲಿನ ವಿಚಾರಣೆಗಳನ್ನು ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದಾಗಿದೆ.
ಶಿವಮೊಗ್ಗ ನ್ಯಾಯಾಲಯದ ಮೂರು ಕೋರ್ಟ್ ಹಾಲ್‌ಗಳಲ್ಲಿನ ವಿಚಾರಣೆಯನ್ನು ನೇರ ಪ್ರಸಾರ ಮಾಡಲಾಗುತ್ತದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕೊಠಡಿ, ಮುಖ್ಯ ನ್ಯಾಯಿಕ ನ್ಯಾಯಾಧೀಶರ ಹಾಲ್ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರ ಹಾಲ್‌ನ ಕಲಾಪಗಳನ್ನು ನೇರ ಪ್ರಸಾರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಲೈವ್‌ಗೆ ಸಿದ್ಧತೆ ಹೇಗಿದೆ?
ಮೂರು ಕೊಠಡಿಗಳಲ್ಲಿ ನೇರ ಪ್ರಸಾರಕ್ಕೆ ಅಗತ್ಯವಿರುವ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಟಿವಿ, ಕ್ಯಾಮರಾ, ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಲೈವ್ ಸ್ಟ್ರೀಮಿಂಗ್‌ಗೆ ಲಿಂಕ್ ಮಾಡುವುದು ಬಾಕಿ ಇದೆ.

ನೇರ ಪ್ರಸಾರಕ್ಕೆ ನಮ್ಮ ಕೊಠಡಿಯಲ್ಲಿ ಅಗತ್ಯ ಸಿದ್ಧತೆ ಮಾಡಲಾಗಿದೆ. ಈಗಾಗಲೆ ಉಪಕರಣಗಳನ್ನು ಅಳವಡಿಸಿದ್ದಾರೆ. ಸದ್ಯದಲ್ಲೆ ಕಲಾಪ ನೇರ ಪ್ರಸಾರ ಆರಂಭವಾಗಲಿದೆ.
– ನ್ಯಾ. ಮಂಜುನಾಥ್ ನಾಯಕ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು
ನೇರ ಪ್ರಸಾರ ವೀಕ್ಷಣೆ ಹೇಗೆ?
ಕರ್ನಾಟಕ ಹೈಕೋರ್ಟ್ ಕಲಾಪಗಳು ಈಗಾಗಲೇ ಯುಟ್ಯೂಬ್‌ನಲ್ಲಿ ಲೈವ್ ಪ್ರಸಾರವಾಗುತ್ತಿದೆ. ಇದೇ ಲಿಂಕ್‌ನಲ್ಲಿಯೇ ಜಿಲ್ಲಾ ಕೋರ್ಟುಗಳ ಕಲಾಪಗಳು ಕೂಡ ನೇರ ಪ್ರಸಾರ ಮಾಡಲು ಯೋಜಿಸಲಾಗಿದೆ. ಲೈವ್ ಲಿಂಕ್ ಸ್ಥಾಪನೆ ಮಾಡಿ ನೇರ ಪ್ರಸಾರ ಮಾಡುವುದು ಬಾಕಿ ಇದ್ದು, ಸದ್ಯದಲ್ಲೇ ಶಿವಮೊಗ್ಗ ಕೋರ್ಟ್ ಕಲಾಪಗಳು ಲೈವ ಸ್ಟ್ರೀಮ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ » ರಾಜ್ಯದಲ್ಲಿ ANF ವಿಸರ್ಜನೆ, ನಕ್ಸಲ್ ಪೀಡಿತ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200