ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 JULY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (DCC ಬ್ಯಾಂಕ್) ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಇವತ್ತು ಚುನಾವಣೆ ನಿಗದಿಯಾಗಿದೆ. ಆರ್.ಎಂ.ಮಂಜುನಾಥ ಗೌಡ ಮತ್ತೊಮ್ಮೆ ಅಧ್ಯಕ್ಷರಾಗುವುದು ಬಹುತೇಕ ನಿಶ್ಚಿತ. ಉಪಾಧ್ಯಕ್ಷ ಹುದ್ದೆ ಮೇಲೆ ಹಲವರು ಕಣ್ಣು ನೆಟ್ಟಿದ್ದಾರೆ ಎನ್ನಲಾಗಿದೆ. ಹಾಗಾಗಿ ಇವತ್ತು ನಡೆಯುವ ಮತದಾನದ ಕುರಿತು ತೀವ್ರ ಕುತೂಹಲವಿದೆ.
ಅಧ್ಯಕ್ಷ ಗಾದಿಗೆ ಮತ್ತೆ ಆರ್‌ಎಂಎಂ
ಈಚೆಗೆ ನಡೆದ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಆರ್.ಎಂ.ಮಂಜುನಾಥ ಗೌಡ ನೇತೃತ್ವದ ಬಣ ಬಹಪಾಲು ಸ್ಥಾನ ಪಡೆದಿದೆ. ಹಾಗಾಗಿ ಆರ್.ಎಂ.ಮಂಜುನಾಥ ಗೌಡ ಅನಾಯಾಸವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ಮಂಜುನಾಥ ಗೌಡ ದೀರ್ಘಾವಧಿ ಅಧ್ಯಕ್ಷರಾಗಿದ್ದರೆ. 1997ರಲ್ಲಿ ಮೊದಲ ಬಾರಿ ಮಂಜುನಾಥ ಗೌಡ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದರು. ಆಮೇಲೆ 1999 ರಿಂದ 2010ರವರೆಗೆ, 2011 ರಿಂದ 2014ರವರೆಗೆ, 2015ರಲ್ಲಿ ಪುನಃ ಅಧ್ಯಕ್ಷರಾಗಿದ್ದರು. 2020ರ ಜು.14ರಂದು ನಿರ್ದೇಶಕ ಸ್ಥಾನ ಅನರ್ಹಗೊಳಿಸಿದ್ದರಿಂದ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು. ಈ ಹಿನ್ನೆಲೆ ಎಂ.ಬಿ.ಚನ್ನವೀರಪ್ಪ ಅವರು ಅಧ್ಯಕ್ಷರಾಗಿದ್ದಾರೆ. 2023ರ ಜುಲೈನಲ್ಲಿ ಆರ್.ಎಂ.ಮಂಜುನಾಥ ಗೌಡ ಪುನಃ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಉಪಾಧ್ಯಕ್ಷ ಹುದ್ದೆಯತ್ತ ಕುತೂಹಲ
ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷರ ಹುದ್ದೆಯತ್ತ ಈಗ ಕುತೂಹಲ ಮೂಡಿದೆ. ಬ್ಯಾಂಕ್‌ನ ಹಿರಿಯ ನಿರ್ದೇಶಕ ದುಗ್ಗಪ್ಪ ಗೌಡ ಮತ್ತು ಜಿ.ಎನ್.ಸುಧೀರ್ ಅವರ ಹೆಸರು ಕೇಳಿ ಬರುತ್ತಿದೆ. ಇಬ್ಬರಲ್ಲಿ ಯಾರು ನಾಮಪತ್ರ ಸಲ್ಲಿಸಲಿದ್ದಾರೆ ಕಾದು ನೋಡಬೇಕಿದೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುವವರು ಇವತ್ತು ಬೆಳಗ್ಗೆ 8.30 ರಿಂದ 10.30ರ ಒಳಗೆ ನಾಮಪತ್ರ ಸಲ್ಲಿಸಬೇಕು. ಅಗತ್ಯವಿದ್ದಲ್ಲಿ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಮತದಾನ ನಡೆಯಲಿದೆ.
ಇದನ್ನೂ ಓದಿ – ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ, ಮಂಜುನಾಥ ಗೌಡ ಬಣಕ್ಕೆ ಭರ್ಜರಿ ಗೆಲುವು, ಯಾರೆಲ್ಲ ಎಷ್ಟು ಮತ ಗಳಿಸಿದ್ದಾರೆ?