ಶಿವಮೊಗ್ಗ ನಗರದ ಇವತ್ತಿನ 10 ಫಟಾಫಟ್‌ ಸುದ್ದಿಗಳು – ಓದಲು ಇಲ್ಲಿ ಕ್ಲಿಕ್‌ ಮಾಡಿ

ಕ್ರಿಕೆಟ್‌ ಪಂದ್ಯಾವಳಿ, ಮೊದಲ ಬಹುಮಾನ 50 ಸಾವಿರ ರೂ. (ಈ ಸುದ್ದಿಯನ್ನು ಇನ್ನು 38 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

Cricket

SHIVAMOGGA LIVE NEWS | 14 JANUARY 2024

FATAFAT-NEWS-1SHIMOGA : ಟೀಮ್‌ ಮಾಧ್ಯಮದಿಂದ ಜ.26 ರಿಂದ 28ರವರೆಗೆ ನಗರದ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಕ್ರೀಡಾಂಗಣದಲ್ಲಿ ಅಂತರ ಜಿಲ್ಲಾ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಮಾಧ್ಯಮ ಕಪ್‌ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಶಿ.ಜು.ಪಾಶ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ತಂಡಕ್ಕೆ 5 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಮೊದಲ ಬಹುಮಾನ 50 ಸಾವಿರ ರೂ. ನಗದು, ಎರಡನೇ ಬಹುಮಾನ 25 ಸಾವಿರ ರೂ., ಸಮಿ ಫೈನಲ್‌ನಲ್ಲಿ ಸೋತ ಎರಡು ತಂಡಗಳಿಗೆ ತಲಾ 7 ಸಾವಿರ ರೂ. ನಗದು ಬಹುಮಾನ, ಟ್ರೋಫಿ ನೀಡಲಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಟೀಮ್‌ ಮಾಧ್ಯಮದಲ್ಲಿ ಎಸ್‌.ಕೆ. ಗಜೇಂದ್ರ ಸ್ವಾಮಿ, ಜಿ.ಚಂದ್ರಶೇಖರ್‌, ಜಿ.ಪದ್ಮನಾಭ, ಸುಧೀರ್‌ ಇದ್ದರು.

ಮುಂದಿನ ಸುದ್ದಿ ಓದಲು ಕೆಳಗಿರುವ NEXT  ಒತ್ತಿ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

SHIMOGA-NEWS-FATAFAT.webp

Leave a Comment