ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
SHIMOGA | ಕ್ರಿಮಿನಲ್ ಚಟುವಟಿಕೆ ಪತ್ತೆ ಹಚ್ಚಲು ಮತ್ತು ಅಪರಾಧಿಗಳನ್ನು ಮಟ್ಟಹಾಕಲು ಶಿವಮೊಗ್ಗ ಪೊಲೀಸರು ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಕ್ಷಣಮಾತ್ರದಲ್ಲಿ ಅಪರಾಧಿಗಳ ಕ್ರಿಮಿನಲ್ ಹಿಸ್ಟರಿ ಪೊಲೀಸರ ಕೈಸೇರುವಂತಹ ವಿನೂತನ ಪ್ರಯತ್ನ ಇದಾಗಿದೆ. (HITECH APP)
ಶಿವಮೊಗ್ಗ ಪೊಲೀಸರು ಅತ್ಯಾಧುನಿಕ ಮೊಬೈಲ್ ಕ್ರೈಮ್ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ ವರ್ಕ್ ಸಿಸ್ಟಂ (MCCTNS) ಬಳಕೆ ಆರಂಭಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಅವರ ಬೆರಳಚ್ಚು ಪಡೆದು, ತಕ್ಷಣಕ್ಕೆ ಅವರ ಕ್ರಿಮಿನಲ್ ಹಿನ್ನೆಲೆ ತಿಳಿಯಬಹುದಾಗಿದೆ. ಇದರಿಂದ ರಾತ್ರಿ ವೇಳೆ ಅಪರಾಧ ಚಟುವಟಿಕೆ ನಿಯಂತ್ರಣ ಸಾಧ್ಯವಾಗಲಿದೆ.
(HITECH APP)
ಹೇಗೆ ಕೆಲಸ ಮಾಡುತ್ತೆ MCCTNS?
ರಾತ್ರಿ ಗಸ್ತು ವೇಳೆ ಅನುಮಾನಾಸ್ಪದ ವ್ಯಕ್ತಿ ಕಂಡು ಬಂದರೆ ಈತನಕ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಹಿನ್ನೆಲೆ ಕೇಳಿ, ಮನೆಗೆ ತೆರಳುವಂತೆ ಸೂಚಿಸುತ್ತಿದ್ದರು. ಆದರೆ ಇನ್ಮುಂದೆ ವಿಚಾರಣೆ ನಡೆಸುವುದರ ಜೊತೆಗೆ ಅನುಮಾನಾಸ್ಪದ ವ್ಯಕ್ತಿಯ ಬೆರಳಚ್ಚು ಪಡೆಯಲಿದ್ದಾರೆ. ಇದಕ್ಕಾಗಿಯೇ ಬೆರಳಚ್ಚು ಸ್ಕ್ಯಾನಿಂಗ್ ಡಿವೈಸ್ ಒದಗಿಸಲಾಗಿದೆ. ಅಲ್ಲದೆ ಮೊಬೈಲ್ ಗೆ MCCTNS ಆ್ಯಪ್ ಅಳವಡಿಸಲಾಗಿದೆ.
ಬೆರಳು ಸ್ಕ್ಯಾನ್ ಮಾಡಿ, ಆ್ಯಪ್ ಮೂಲಕ ಸರ್ಚ್ ಮಾಡಿದರೆ ಸಾಕು. ಕ್ರಿಮಿನಲ್ ಹಿನ್ನಲೆಗಳಿದ್ದರೆ ಕ್ಷಣಮಾತ್ರದಲ್ಲಿ ಪೊಲೀಸರ ಮೊಬೈಲ್ ಪರದೆ ಮೇಲೆ ಪ್ರತ್ಯಕ್ಷವಾಗಲಿದೆ. ಆಗ ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಬಹುದು. ಅನುಮಾನಾಸ್ಪದವಾಗಿ ವರ್ತಿಸಿದರೆ ಪ್ರಕರಣವನ್ನು ದಾಖಲು ಮಾಡಬಹುದಾಗಿದೆ.
(HITECH APP)
ಪ್ರತಿ ಠಾಣೆಯ ಇಬ್ಬರ ಮೊಬೈಲ್ ಗೆ ಆ್ಯಪ್
ಶಿವಮೊಗ್ಗ ಜಿಲ್ಲೆಯಾದ್ಯಂತ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ MCCTNS ತಂತ್ರಜ್ಞಾನ ಬಳಕೆಗೆ ಬಂದಿದೆ. ಪ್ರತಿ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯ ಮೊಬೈಲ್ ಗೆ MCCTNS ಆ್ಯಪ್ ಅಳವಡಿಸಲಾಗಿದೆ. ವಿಶೇಷವಾಗಿ ರಾತ್ರಿ ಗಸ್ತು ಸಿಬ್ಬಂದಿಯ ಮೊಬೈಲ್ ಗಳಿಗೆ ಈ ಆ್ಯಪ್ ಇನ್ ಸ್ಟಾಲ್ ಮಾಡಲಾಗಿದ್ದು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕೂಡ ಒದಗಿಸಲಾಗಿದೆ.
ಅಪರಾಧ ಪ್ರಮಾಣ ತಗ್ಗುವ ನಿರೀಕ್ಷೆ
ಜಿಲ್ಲೆಯಲ್ಲಿ ರಾತ್ರಿ ವೇಳೆ ಅಪರಾಧ ಚಟುವಟಿಕೆ ಹೆಚ್ಚು. ಇತ್ತೀಚೆಗೆ ಸೀಗೆಹಟ್ಟಿಯಲ್ಲಿ ಅವಾಚ್ಯವಾಗಿ ಕೂಗಿಕೊಂಡು ಬೈಕಿನಲ್ಲಿ ತೆರಳಿದ್ದು, ಭರ್ಮಪ್ಪ ನಗರದಲ್ಲಿ ಯುವಕನ ಮೇಲೆ ಇಟ್ಟಿಗೆ ಬೀಸಿದ್ದು, ವೆಂಕಟೇಶನಗರದಲ್ಲಿ ಯುವಕನ ಕೊಲೆ ಪ್ರಕರಣಗಳು ನಡೆದಿದ್ದು ರಾತ್ರಿ ವೇಳೆಯಲ್ಲೆ. ಹಾಗಾಗಿ ರಾತ್ರಿ ಗಸ್ತು ಸಂದರ್ಭ MCCTNS ತಂತ್ರಜ್ಞಾನ ಬಳಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಇದರಿಂದ ಅಪರಾಧ ಚುವಟಿಕೆಗೆ ತಗ್ಗುವ ಸಾಧ್ಯತೆ ಇದೆ.
ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ
ಮಿಥುನ್ ಕುಮಾರ್ ಅವರು ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲಾಖೆಯಲ್ಲಿ ಹಲವು ಬದಲಾವಣೆ ತಂದಿದ್ದಾರೆ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಬ್ರೀಫಿಂಗ್ ಸಿಸ್ಟಂ ಜಾರಿಗೊಳಿಸಿದ್ದಾರೆ. ಇದು ಸಾರ್ವಜನಿಕ ಮೆಚ್ಚುಗೆ ಪಡೆದಿದೆ. ಈಗ ಮೊಬೈಲ್ ಕ್ರೈಮ್ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ ವರ್ಕ್ ಸಿಸ್ಟಂ ಜಾರಿಗೊಳಿಸಲಾಗಿದೆ.
ಏನಂತಾರೆ ಜಿಲ್ಲಾ ರಕ್ಷಣಾಧಿಕಾರಿ?
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ರಕ್ಷಣಾಧಿಕಾರ ಮಿಥುನ್ ಕುಮಾರ್ ಅವರು, ಅಪರಾಧ ತಡೆಗೆ ಮೊಬೈಲ್ ಟ್ರ್ಯಾಕಿಂಗ್ ಆ್ಯಪ್ ಅನುಷ್ಠಾನಗೊಳಿಸಲಾಗಿದೆ. ಅನುಮಾನಾಸ್ಪದವಾಗಿ ವರ್ತಿಸುವವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೆ ಆ್ಯಪ್ ಮೂಲಕ ತಕ್ಷಣಕ್ಕೆ ಪತ್ತೆ ಹಚ್ಚಬಹುದು. ಇದರಿಂದ ರಾತ್ರಿ ವೇಳೆ ನಡೆಯುವ ಹಲವು ಅಪರಾಧ ಕೃತ್ಯಗಳನ್ನು ಮಟ್ಟಹಾಕಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. (HITECH APP)
ಕ್ಲಿಕ್ ಮಾಡಿ ಇದನ್ನೂ ಓದಿ | ಕಲ್ಲು ಹೊಡೆದ ಆರೋಪಿಗಳ ಫೋಟೊ ರಿಲೀಸ್, ಈವರೆಗು ಏನೇನಾಯ್ತು? ಇಲ್ಲಿದೆ 10 ಪಾಯಿಂಟ್
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422