ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 24 SEPTEMBER 2024 : ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್‌ಗೆ ಸ್ಪೈಸ್ ಜೇಟ್ ವಿಮಾನಯಾನ (Flight) ಸಂಸ್ಥೆ ಸೇವೆ ಆರಂಭಿಸುತ್ತಿದೆ. ಇದರ ನಡುವೆ ಮತ್ತೆರಡು ಮಹಾನಗರಗಳಿಗೆ ಶಿವಮೊಗ್ಗದಿಂದ ವಿಮಾನ ಸೇವೆ ಒದಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ, ಉಡಾನ್ ಯೋಜನೆ ಅಡಿ ದೆಹಲಿಗೆ ವಿಮಾನಯಾನಕ್ಕೆ ನಿರ್ಧಾರವಾಗಿದೆ. ಇದಕ್ಕೆ ಟೆಂಡರ್ ಆಗಿದೆ. ಸದ್ಯದಲ್ಲೇ ಈ ಮಾರ್ಗದಲ್ಲಿ ವಿಮಾನ ಹಾರಾಟ ಶುರುವಾಗಲಿದೆ. ಮುಂಬೈಗೆ ಸಂಪರ್ಕ ಕಲ್ಪಿಸುವ ಪ್ರಯತ್ನವಾಗುತ್ತಿದೆ. ಆದರೆ ಮುಂಬೈನಲ್ಲಿ ನಿತ್ಯ ಸಾವಿರ ವಿಮಾನಗಳ ಹಾರಾಟ ನಡೆಸುತ್ತಿವೆ. ಟ್ರಾಫಿಕ್ ಕ್ಲಿಯರೆನ್ಸ್ ಸಿಗುತ್ತಿಲ್ಲ. ಅದರೂ ಪ್ರಯತ್ನವಾಗುತ್ತಿದೆ ಎಂದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇನ್ನು, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯು ಅ.10ರಂದು ಚೆನ್ನೈ ಮತ್ತು ಹೈದರಾಬಾದ್‌ಗೆ ಸೇವೆ ಆರಂಭಿಸಲಿದೆ. ಇನ್ನೊಂದೆಡೆ ಶಿವಮೊಗ್ಗ – ಗೋವಾ, ತಿರುಪತಿ ಮಾರ್ಗದಲ್ಲಿ ಸ್ಥಗಿತವಾಗಿದ್ದ ವಿಮಾನಯಾನ ಸೇವೆ ಪುನಾರಂಭವಾಗಲಿದೆ. ಭವಿಷ್ಯದಲ್ಲಿ ಇದು ಮಧ್ಯ ಕರ್ನಾಟಕದಲ್ಲಿ ಪ್ರಮುಖ ವಿಮಾನ ನಿಲ್ದಾಣವಾಗಲಿದೆ. ವಾಣಿಜ್ಯೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ » ಶಿವಮೊಗ್ಗ ಏರ್‌ಪೋರ್ಟ್ ಲೈಸೆನ್ಸ್ ವಿಚಾರ, ಎಂಪಿ ಮಹತ್ವದ ಹೇಳಿಕೆ