ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 FEBRUARY 2021
ಹಾಲಿನ ಪುಡಿ ಘಟಕ ಮತ್ತು ಅತ್ಯಾಧುನಿಕ ಡೈರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಿವಮೊಗ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
ಇದನ್ನೂ ಓದಿ | ಇನ್ಮುಂದೆ ಹೈದರಾಬಾದ್ನಲ್ಲೂ ಸಿಗುತ್ತೆ ಶಿವಮೊಗ್ಗದ ಹಾಲು, ಮುತ್ತಿನ ನಗರಿಗೆ ಎಷ್ಟು ಲೀಟರ್ ಹೋಗುತ್ತೆ? ಮಾರಾಟ ಹೇಗೆ?
ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಶಿಮುಲ್ ಆಡಳಿತ ಮಂಡಳಿ, 145 ಕೋಟಿ ವೆಚ್ಚದ 30 ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಘಟಕ, ದಾವಣಗೆರೆ ಜಿಲ್ಲೆಯ ಎಚ್.ಕಲಪನಹಳ್ಳಿಯಲ್ಲಿ 3 ಲಕ್ಷ ಲೀಟರ್ ಸಾಮರ್ಥ್ಯದ ಅತ್ಯಾಧುನಿಕ ಡೈರಿ ನಿರ್ಮಾಣಕ್ಕೆ 174 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು.
ಒಕ್ಕೂಟ ಉಪಾಧ್ಯಕ್ಷ ಹೆಚ್.ಕೆ.ಬಸಪ್ಪ, ನಿರ್ದೇಶಕರಾದ ಜಗದೀಶಪ್ಪ ಬಣಕಾರ್, ಎನ್.ಎಚ್.ಶ್ರೀಪಾದರಾವ್, ಎಚ್.ಬಿ.ದಿನೇಶ್, ಜಿ.ಪಿ.ಯಶವಂತ ರಾಜು, ಎನ್.ಹೆಚ್.ಭಾಗ್ಯ, ಎಂ.ಸಿದ್ದಲಿಂಗಪ್ಪ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ಎಸ್.ಬಸವರಾಜ ಹಾಗೂ ಹಿರಿಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422