ಶಿವಮೊಗ್ಗ: ಶಿವಮೊಗ್ಗ ವಕೀಲರ ಸಂಘಕ್ಕೆ ಜಿ.ಆರ್.ರಾಘವೇಂದ್ರ ಸ್ವಾಮಿ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ 516 ಮತಗಳನ್ನು ಪಡೆದು ರಾಘವೇಂದ್ರ ಸ್ವಾಮಿ ಎರಡನೇ ಅವಧಿಗೂ ಅಧ್ಯಕ್ಷರಾಗಿ ಮುಂದುವರಿದರು.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಕುತೂಹಲ ಕೆರಳಿಸಿದ್ದ ಜಿಲ್ಲಾ ವಕೀಲರ ಸಂಘದ 2026-28ನೇ ಸಾಲಿನ ಚುನಾವಣೆಯಲ್ಲಿ ರಾಘವೇಂದ್ರ ಸ್ವಾಮಿ ಅತ್ಯಧಿಕ ಮತ ಪಡೆದರೆ, 423 ಮತ ಪಡೆದ ವಿದ್ಯಾರಾಣಿ ಉಪಾಧ್ಯಕ್ಷರಾಗಿ, 364 ಮತ ಪಡೆದ ಶಾಂತರಾಜ್ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ 339 ಮತ ಪಡೆದ ಮಂಜುನಾಥ್ ಶೆಟ್ಟಿ ಖಜಾಂಚಿಯಾಗಿ ಆಯ್ಕೆಯಾದರು.

ಕೆ.ಎಸ್.ರಾಜಪ್ಪ (432), ಕೆ.ನಾಗರತ್ನ(454), ಸೌಮ್ಯಾ(428), ಪಿ.ಆರ್.ಸಂದೇಶ್ ಗಾಳಿ (382), ಎಚ್.ಎಂ.ಜನಾರ್ದನ(381), ಗೀತಾ ಮಾನೆ(344), ಚಂದ್ರಶೇಖರಪ್ಪ (331) ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಜಿ.ಆರ್.ರಾಘವೇಂದ್ರ ಸ್ವಾಮಿ ಅವರ ಸಹೋದ್ಯೋಗಿಗಳು ಸಂಭ್ರಮಾಚರಣೆ ಮಾಡಿದರು.