ಶಿವಮೊಗ್ಗ LIVE
ಶಿವಮೊಗ್ಗ: ಹೊಸ ವರ್ಷವನ್ನು (New Year) ಶಿವಮೊಗ್ಗದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಹಾಡು, ಡಾನ್ಸು, ಪಾರ್ಟಿಗಳ ಮೂಲಕ ನೂತನ ಕ್ಯಾಲೆಂಡರ್ ವರ್ಷಕ್ಕೆ ಅದ್ಧೂರಿ ವೆಲ್‌ಕಮ್ ನೀಡಲಾಯಿತು.

ಎಲ್ಲೆಲ್ಲಿ ಹೇಗಿತ್ತು ಸಂಭ್ರಮ?
ಕ್ಲಬ್, ಹೋಂ ಸ್ಟೇ, ಪಾರ್ಟಿ ಹಾಲ್: ಶಿವಮೊಗ್ಗ ನಗರದ ಎಲ್ಲ ಕ್ಲಬ್‌ಗಳಲ್ಲು ರಾತ್ರಿ ಔತಣಕೂಟ, ಪಾರ್ಟಿಗಳನ್ನು ಆಯೋಜಿಸಲಾಗಿತ್ತು. ಡಿಸೆಂಬರ್ 31ರ ಸಂಜೆ 7 ಗಂಟೆಯಿಂದಲೇ ಎಲ್ಲೆಡೆ ಹಾಡು, ಡಾನ್ಸು, ಪಾರ್ಟಿಗಳು ಆರಂಭವಾಗಿದ್ದವು. 12 ಗಂಟೆಯಾಗುತ್ತಿದ್ದಂತೆ ಸಂಭ್ರಮಾಚರಣೆ ಜೋರಾಯಿತು. ಪೊಲೀಸ್ ಇಲಾಖೆ ಈ ಮೊದಲೆ ಸೂಚನೆ ನೀಡಿದ್ದರಿಂದ 12.30ರ ಹೊತ್ತಿಗೆ ಪಾರ್ಟಿಗಳನ್ನು ಬಂದ್ ಮಾಡಲಾಯಿತು.

ಪಟಾಕಿ ಸಿಡಿಸಿ ಸಂಭ್ರಮ: ಕ್ಲಬ್, ರೆಸಾರ್ಟ್, ಹೋಂ ಸ್ಟೇಗಳಲ್ಲಿ ರಾತ್ರಿ 12 ಗಂಟೆಗೆ ಪಟಾಕಿ ಸಿಡಿಸಲಾಯಿತು. ಇತ್ತ ಮನೆಗಳಲ್ಲು ಜನರ ಸಂಭ್ರಮಾಚರಣೆ ಮಾಡಿದರು. ರಾತ್ರಿ ಕೇಕ್ ಕತ್ತರಿಸಿ ಖುಷಿಪಟ್ಟರು. ನಗರದ ಹಲವೆಡೆ ರಾತ್ರಿ ಪಟಾಕಿ ಸಿಡಿಸಿ ಜನರು ನೂತನ ವರ್ಷನ್ನು ಖುಷಿಯಿಂದ ಸ್ವಾಗತಿಸಿದರು.

ಪೊಲೀಸರಿಂದ ಸಂಭ್ರಮಾಚರಣೆ: ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಪೊಲೀಸರು ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಮೀರ್ ಅಹಮದ್ ಸರ್ಕಲ್‌ನಲ್ಲಿ ರಾತ್ರಿ ಕೇಕ್ ಕತ್ತರಿಸಿದ ಪೊಲೀಸರು ಕೇಕ್ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಜನವರಿ 1ರ TOP NEWS, ಓದಲು ಇಲ್ಲಿ ಕ್ಲಿಕ್ ಮಾಡಿ
ಚರ್ಚ್‌ನಲ್ಲಿ ಮಿಡ್ ನೈಟ್ ಪ್ರಾರ್ಥನೆ: ಹೊಸ ವರ್ಷದ ಹಿನ್ನೆಲೆ ಶಿವಮೊಗ್ಗದ ಎಲ್ಲ ಚರ್ಚ್‌ಗಳಲ್ಲಿಯು ಪ್ರಾರ್ಥನೆ ನೆರವೇರಿತು. ನೂತನ ವರ್ಷ ಎಲ್ಲರಿಗು ಶುಭ ತರಲಿ ಎಂದು ಪ್ರಾರ್ಥನೆ ಮಾಡಲಾಯಿತು. ನ್ಯೂ ಇಯರ್ ಹಿನ್ನೆಲೆ ಚರ್ಚ್‌ಗಳಿಗೆ ವಿದ್ಯು ದೀಪಾಲಂಕಾರ ಮಾಡಲಾಗಿತ್ತು.
LATEST NEWS
- ಕುತ್ತಿಗೆ ಹಿಸುಕಿ ಹೆಂಡತಿಯನ್ನು ಕೊಂದ ಗಂಡ, ಎಲ್ಲಿ? ಕಾರಣವೇನು?

- ಮತ್ತೆ 91 ಸಾವಿರಕ್ಕೆ ತಲುಪಿದ ಅಡಿಕೆ ರೇಟ್ | 12 ಜನವರಿ 2026 | ಅಡಿಕೆ ಧಾರಣೆ

- ನಿಯಂತ್ರಣ ತಪ್ಪಿದ ರಾಯಲ್ ಎನ್ಫೀಲ್ಡ್ ಬೈಕ್, ಅಪಘಾತ, ಸವಾರ ಸ್ಥಳದಲ್ಲೇ ಸಾವು

- ವೈನ್ ಶಾಪ್ನಲ್ಲಿ ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದ ವ್ಯಕ್ತಿ, ಕಾರಣವೇನು?

- ‘ಇಡೀ ದೇಶವೇ ಸ್ವಾಗತಿಸಿದೆ, ಕಾಂಗ್ರೆಸ್ ನಾಯಕರು ಮಾತ್ರ ಹಗುರ ಮಾತಾಡುತ್ತಿದ್ದಾರೆ’, ಏನಿದು?

About The Editor
ನಿತಿನ್ ಆರ್.ಕೈದೊಟ್ಲು





