ಕಾಗೋಡು ತಿಮ್ಮಪ್ಪ ರಾಜ್ಯೋತ್ಸವ ಪ್ರಶಸ್ತಿ ಹಿಂತಿರುಗಿಸಬೇಕು, ಮೇಘರಾಜ್‌ ಒತ್ತಾಯ

ಶಿವಮೊಗ್ಗ: ಮಾಜಿ ಸಚಿವ ಹಾಗೂ ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಸಂಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಮನವಿ ಮಾಡಿದರು. (ಈ ಸುದ್ದಿಯನ್ನು ಇನ್ನು 39 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗೋಡು ತಿಮ್ಮಪ್ಪ ಅವರ ಘನತೆ ಮತ್ತು ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ ತರುವಂತಿರಬೇಕು. ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಅವರನ್ನು ಭೇಟಿಯಾಗಿ ಪ್ರಶಸ್ತಿ ಹಿಂದಿರುಗಿಸುವಂತೆ ಮನವೊಲಿಸಬೇಕು. ಸರ್ಕಾರ ಅರ್ಹ ಇತರ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.

Kalluru-Megharaj-Press-meet-in-Shimoga

ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜ ಅರಸು ಪ್ರಶಸ್ತಿ ಹಾಗೂ ಇಕ್ಕೇರಿ ಕೃಷಿ ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ದೊರೆಯಲು ತಮ್ಮ ಸಂಘಟನೆಯೂ ಪ್ರಯತ್ನಿಸಿತ್ತು. ಅದರ ಫಲವಾಗಿ ಎರಡೂ ವಿಶ್ವವಿದ್ಯಾಲಯಗಳು ಏಕಕಾಲದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದವು ಎಂದು ತಿಳಿಸಿದರು.