ಶಿವಮೊಗ್ಗ ನಂದನ್‌, ಶಶಿಧರ್‌ಗೆ ನುಡಿ ನಮನ, ಇಬ್ಬರ ಹೆಸರಿನಲ್ಲಿ ಸಸಿ ನೆಟ್ಟು ಗೌರವ

SHIVAMOGGA LIVE NEWS, 15 JANUARY 2025

ಶಿವಮೊಗ್ಗ : ಇಂಡಿಯನ್‌ ಎಕ್ಸ್‌ಪ್ರೆಸ್‌ನ ಛಾಯಾಗ್ರಾಹಕ ಶಿವಮೊಗ್ಗ ನಂದನ್‌ ಮತ್ತು ಪಬ್ಲಿಕ್‌ ಟಿವಿ ಶಿವಮೊಗ್ಗ ವರದಿಗಾರ (Reporter) ಶಶಿಧರ್‌ ಅವರಿಗೆ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿವಿಧ ಸಂಘಟನೆಗಳು, ರಾಜಕೀಯ ಪಕ್ಷದ ಪ್ರಮುಖರು, ಪತ್ರಕರ್ತರು ನುಡಿ ನಮನ ಸಲ್ಲಿಸಿದರು.

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಶಿವಮೊಗ್ಗ ನಂದನ್‌ ಮತ್ತು ಶಶಿಧರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ಪತ್ರಿಕಾ ಭವನದ ಆವರಣದಲ್ಲಿ ಇಬ್ಬರ ಹೆಸರಿನಲ್ಲಿ ಸಸಿ ನೆಡಲಾಯಿತು.

ಯಾರೆಲ್ಲ ಏನೆಲ್ಲ ಮಾತನಾಡಿದರು?

ಚಳವಳಿಗಳು, ಹೋರಾಟದ ಸಂದರ್ಭಗಳಲ್ಲಿ ಶಿವಮೊಗ್ಗ ನಂದನ್‌ ಸಿಗುತ್ತಿದ್ದರು. ಅನೇಕ ಚಳಿವಳಿ ಕುರಿತು ಚರ್ಚೆ ನಡೆಸುತ್ತಿದ್ದರು. ಅವರು ಹೋರಾಟಗಳನ್ನು ಮಾಡಿ ತಾರ್ಕಿಕ ಅಂತ್ಯ ಮುಟ್ಟಿಸುತ್ತಿದ್ದರು. ಇದರ ಜೊತೆಗೆ ಸ್ನೇಹಮಯಿಯಾಗಿದ್ದರು. ಪತ್ರಕರ್ತ ಶಶಿಧರ್‌ ಅವರು ಕೂಡ ಹಲವು ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದರು.

shraddanjali-to-shimoga-nandan-and-shashidhar-at-press-trust

– ಹೆಚ್.ಆರ್‌.ಬಸವರಾಜಪ್ಪ, ರೈತ ಸಂಘದ ರಾಜ್ಯಾಧ್ಯಕ್ಷ

RED-LINE-

Kalleshwara-Enterprises.webp

shraddanjali-to-shimoga-nandan-and-shashidhar-at-press-trust

ವ್ಯವಸ್ಥೆಯಲ್ಲಿನ ತಪ್ಪು ಸರಿಪಡಿಸುವ ತುಡಿತ ಶಶಿಧರ್ ಅವರಲ್ಲಿತ್ತು‌. ಫೋಟೊಗಳ ಮೂಲಕ ಶಿವಮೊಗ್ಗ ನಂದನ್ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದ್ದರು. ಸಾಂಸ್ಕೃತಿಕ, ಪರಿಸರ ಸಂರಕ್ಷಣೆ ವಿಚಾರದಲ್ಲಿ ಕಾಳಜಿ ಹೊಂದಿದ್ದರು. ಶಾಸಕನಾಗಿದ್ದಾಗಲು ನಂದನ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದೆ.

– ಕೆ.ಬಿ.ಪ್ರಸನ್ನ ಕುಮಾರ್, ಮಾಜಿ ಶಾಸಕ

RED-LINE-

ಶಿವಮೊಗ್ಗದ ಛಾಯಾಗ್ರಾಹಕರು, ವಿಡಿಯೋಗ್ರಾಫರ್‌ಗಳಿಗೆ ಸ್ಟಾರ್ ವ್ಯಾಲ್ಯು ತಂದು ಕೊಟ್ಟಿದ್ದು ನಂದನ್. ಜೊತೆಗೆ ಅವರಲೊಬ್ಬ ಹೋರಾಟಗಾರ, ಕಲಾವಿದನಿದ್ದ. ಸೃಜಶೀಲ ವ್ಯಕ್ತಿತ್ವದ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಹೆಸರಾಗಿದ್ದರು. ಶಶಿಧರ್ ಅವರು ಸರಳ ವ್ಯಕ್ತಿತ್ವದವರು.

ವೈದ್ಯನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ

RED-LINE-

Shraddanjali to Shimoga nandan and reporter Shashidhar

ಶಶಿಧರ್ ಅನಾರೋಗ್ಯದ ಸಂದರ್ಭದಲ್ಲು ಇಲ್ಲಿನ ಸಹೋದ್ಯೋಗಿಗಳು ಅವರಿಗೆ ನೆರವಾಗಿದ್ದರು. ದೃಶ್ಯ ಮಾಧ್ಯಮದ ಒತ್ತಡದ ಕೆಲಸದಿಂದ ವರದಿಗಾರರ ಆರೋಗ್ಯ ಹದಗೆಡುತ್ತಿದೆ. ಆರೋಗ್ಯದ ಕುರಿತು ಗಮನ ವಹಿಸಬೇಕು. ಶಿವಮೊಗ್ಗ ನಂದನ್ ಜೊತೆಗೆ ನನಗೆ 35 ವರ್ಷದ ಸಂಪರ್ಕ. ಹಲವು ಬಾರಿ ಜಗಳವಾಡಿದ್ದೇವೆ. ಅಷ್ಟೇ ಸ್ನೇಹಮಯಿ. ಪರಿಸರ ಪ್ರೇಮಿ. ಪತ್ರಕರ್ತರಿಗೆ ಸೊಸೈಟಿ ಮಾಡಬೇಕು ಅನ್ನುವುದಕ್ಕೆ ಇತ್ತೀಚೆಗೆ ನನ್ನೊಂದಿಗೆ ಜಗಳವಾಡಿ, ಒತ್ತಡ ಹೇರಿದ್ದರು. ಹೋರಾಟಕ್ಕಿಳಿದರೆ ಅವರದ್ದು ಒಂಟಿ ಸಲಗದಂತಿದ್ದರು.

– ಎನ್.ಮಂಜುನಾಥ್, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ

RED-LINE-

ಮೆಗ್ಗಾನ್ ಆಸ್ಪತ್ರೆಯ ಕೆಲಸಗಾರರ ಪರ ಶಿವಮೊಗ್ಗ ನಂದನ್ ಅತಿ ಹೆಚ್ಚು ಕಾಳಜಿ ಹೊಂದಿದ್ದರು‌. ಕಾರ್ಮಿಕರ ಸಮಸ್ಯೆಗಳ ವಿರುದ್ಧ ಧ್ವನಿಯಾಗಿ ಬರುತ್ತಿದ್ದರು. ಶಶಿಧರ್ ತನ್ನೆಲ್ಲ ಆರೋಗ್ಯ ಸಮಸ್ಯೆಯ ನಡುವೆಯು ಸೌಮ್ಯ ಮಾತಿನ ಮೂಲಕ ಕೆಲಸ ಮಾಡುತ್ತಿದ್ದರು‌. ಪತ್ರಕರ್ತರು ಆರೋಗ್ಯದತ್ತ ಹೆಚ್ಚು ಗಮನ ವಹಿಸಬೇಕು. ಭಾರತ ಮಧುಮೇಹದ ಕ್ಯಾಪಿಟಲ್ ಆಗುತ್ತಿದೆ.

– ಡಾ. ಶ್ರೀಧರ್, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ

RED-LINE-

Shraddanjali to Shimoga nandan and reporter Shashidhar

ಶಿವಮೊಗ್ಗ ನಂದನ್ ಅವರು ಮೇಲ್ನೋಟಕ್ಕೆ ರೆಬಲ್ ಅನಿಸಿದರು ಆಂತರ್ಯದಲ್ಲಿ ಆತ್ಯಂತ ಪ್ರೀತಿಪಾತ್ರರು.  ಪ್ರಾಣಿ ಪ್ರೀತಿ, ಪರಿಸರ ಕಾಳಜಿ ಹೊಂದಿದ್ದರು. ಶಶಿಧರ್ ಮೃದು ಮಾತಿನ ಮಧುರ ಸ್ನೇಹಿತ. ಇಬ್ಬರು ಆರೋಗ್ಯ ಸಮಸ್ಯೆಯಿಂದ ವಿಧಿವಶರಾಗಿದ್ದಾರೆ. ಪತ್ರಕರ್ತರು ಆರೋಗ್ಯದತ್ತ ಕಾಳಜಿ ವಹಿಸಬೇಕು.

– ಎನ್.ರವಿಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರತಿನಿಧಿ

RED-LINE-

Shraddanjali to Shimoga nandan and reporter Shashidhar

ಹೊಸ ವರ್ಷದ ಆರಂಭ ಶಿವಮೊಗ್ಗ ಪತ್ರಕರ್ತರ ಪಾಲಿಗೆ ನೋವು ತಂದಿದೆ. ಶಶಿಧರ್ ಸೌಮ್ಯ ಸ್ವಭಾವದವರು. ಶಿವಮೊಗ್ಗ ನಂದನ್ ಅವರದ್ದು ಹೋರಾಟದ ಸ್ವಭಾವ. ಅವರು ಬೆಂಗಳೂರಿನಲ್ಲಿ ಇದ್ದಿದ್ದರೆ ಇನ್ನಷ್ಟು ದೊಡ್ಡ ಹೆಸರು ಮಾಡಬಹುದಿತ್ತು. ಪತ್ರಕರ್ತರು ಆರೋಗ್ಯದ ಕಡೆ ಗಮನ ವಹಿಸಬೇಕಿದೆ‌.

– ಆರಗ ರವಿ, ವಿಜಯ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕ

RED-LINE-

Abhishek-padavidhara-sahakara-sanga

ಶಿಕಾರಿಪುರದ ಗಾಮಾದಲ್ಲಿ ಹುಲಿ ಪ್ರತ್ಯಕ್ಷವಾಗಿತ್ತು. ಅವತ್ತು ಹುಲಿ ತಮ್ಮತ್ತ ಓಡಿ ಬರುವಾಗ ಎದುರಿಗೆ‌ ನಿಂತು ಫೋಟೊ ಕ್ಲಿಕ್ಕಿಸಿದ್ದರು ಶಿವಮೊಗ್ಗ ನಂದನ್. ಅಷ್ಟು ಧೈರ್ಯಶಾಲಿ ವ್ಯಕ್ತಿತ್ವ.

– ರಾಮಚಂದ್ರ ಗುಣಾರಿ, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಹಿರಿಯ ವರದಿಗಾರ‌

RED-LINE-

ನಂದನ್ ಅವರು ವರದಿಗಾರರಿಂದ ಸಂಪಾದಕರವರೆಗೆ ಎಲ್ಲರ ಜೊತೆಗೆ ಜಗಳ ಆಡಿದ್ದರು. ಆದರೆ ಅದೆಲ್ಲ ವೃತ್ತಿಗೆ ಸೀಮಿತವಾಗಿದ್ದವು. ಅವರು ಎಲ್ಲರೊಂದಿಗು ಪ್ರೀತಿಪಾತ್ರರಾಗಿದ್ದರು. ಅವರೊಬ್ಬ ಸಾಹಸಿಗನಾಗಿದ್ದರು. ಇನ್ನು, ಶಶಿಧರ್ ಅತ್ಯಂತ ಕ್ರಿಯಾಶೀಲವಾಗಿದ್ದರು.

– ಹೊನ್ನಾಳಿ ಚಂದ್ರಶೇಖರ್, ಕನ್ನಡ ಮೀಡಿಯಂ

RED-LINE-

ಇದನ್ನೂ ಓದಿ » ಶಿವಮೊಗ್ಗ ನಂದನ್‌ ಇನ್ನಿಲ್ಲ, ಅವರ ಬಗ್ಗೆ ಗೊತ್ತಿರಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment