ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 13 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ವಿರುದ್ಧ ಜನರ ಅಸಮಾಧಾನ ಮುಂದುವರೆದಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಜನರಿಗೆ ಸಮಸ್ಯೆಗಳು ಶುರುವಾಗಿವೆ. ರಸ್ತೆ ಮಧ್ಯೆ ಅಳವಡಿಸಿರುವ ಸ್ಲಾಬ್‌ಗಳು ಕುಸಿಯುತ್ತಿದ್ದು ವಾಹನ ಸವಾರರಿಗೆ ದುಸ್ವಪ್ನದಂತೆ ಕಾಡುತ್ತಿದೆ.
ಶಿವಮೊಗ್ಗದ ಬಾಲರಾಜ ಅರಸ್ ರಸ್ತೆಯಲ್ಲಿ ಭೂಗತ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ಇವುಗಳಿಗೆ ಸ್ಲಾಬ್‌ಗಳನ್ನು ಹಾಕಲಾಗಿದೆ. ಈ ಸ್ಲಾಬ್‌ಗಳು ವಾಹನ ಸವಾರರ ಪಾಲಿಗೆ ಕಂಟಕವಾಗಿವೆ.
ಕುಸಿಯುತ್ತಿವೆ ಸ್ಲಾಬ್‌ಗಳು
ಬಾಲರಾಜ ಅರಸ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರ ಹೆಚ್ಚು. ಈ ಸ್ಲಾಬ್‌ಗಳು ರಸ್ತೆ ಮಧ್ಯದಲ್ಲಿವೆ. ಹಾಗಾಗಿ ಲಾರಿ, ಬಸ್ಸುಗಳು ಇದರ ಮೇಲೆ ಸಂಚರಿಸುತ್ತವೆ. ಅತಿಯಾದ ಭಾರದಿಂದ ಸ್ಲಾಬ್‌ಗಳು ಕುಸಿಯುತ್ತಿವೆ. ಸ್ಲಾಬ್‌ಗಳ ದುಸ್ಥಿತಿ ಗೊತ್ತಾಗದೆ ದ್ವಿಚಕ್ರ ವಾಹನ ಸವಾರರು ಇದರ ಮೇಲೆ ಸಂಚರಿಸಿದರೆ ಅಪಘಾತ ನಿಶ್ಚಿತ.
ಬ್ಯಾರಿಕೇಡ್ ಹಾಕಿ ಬಂದ್
ಬಾಲರಾಜ್ ಅರಸ್ ರಸ್ತೆಯಲ್ಲಿರುವ ಎರಡು ಸ್ಲಾಬ್‌ಗಳು ಅಪಾಯದ ಹಂತಕ್ಕೆ ತಲುಪಿವೆ. ಇವುಗಳ ಸುತ್ತಲು ಬ್ಯಾರಿಕೇಡ್ ಹಾಕಲಾಗಿದೆ. ಪಿಡಬ್ಲುಡಿ ಕಚೇರಿ ಮುಂಭಾಗ ಮತ್ತು ಬಸವನಗುಡಿಯ ತಿರುವಿನಲ್ಲಿ ಸ್ಲಾಬ್‌ಗೆ ಬ್ಯಾರಿಕೇಡ್ ಹಾಕಲಾಗಿದೆ. ರಾತ್ರಿ ವೇಳೆ ರಸ್ತೆ ಖಾಲಿ ಇರುವುದರಿಂದ ವಾಹನ ಸವಾರರು ಸಹಜವಾಗಿ ವೇಗವಾಗಿಯೇ ತೇರಳುತ್ತಾರೆ. ಇಂತಹ ಸಂದರ್ಭ ಸ್ವಲ್ಪ ಯಾಮಾರಿದರು ಅಪಘಾತ ಸಂಭವಿಸಲಿದೆ.
ಇಲ್ಲಿ ಮಾತ್ರವಲ್ಲ ಈ ಸಮಸ್ಯೆ
ಸ್ಲಾಬ್‌ಗಳ ಸಮಸ್ಯೆ ಬಾಲರಾಜ ಅರಸ್ ರಸ್ತೆಗೆ ಸೀಮಿತವಲ್ಲ. ನಗರದ ವಿವಿಧೆಡೆ ರಸ್ತೆ, ಸರ್ಕಲ್‌ಗಳಲ್ಲಿ ಸ್ಲಾಬ್‌ಗಳ ಸಮಸ್ಯೆ ಇದೆ. ಜೈಲ್ ಸರ್ಕಲ್, ಕುವೆಂಪು ರಸ್ತೆಯಲ್ಲೂ ಸ್ಲಾಬ್‌ಗಳು ಅಂಕು ಡೊಂಕಾಗಿವೆ. ದ್ವಿಚಕ್ರ ವಾಹನಗಳು, ಆಟೋ, ಕಾರುಗಳ ಚಾಲಕರಿಗೆ ಈ ಸ್ಲಾಬ್‌ಗಳು ದೊಡ್ಡ ಸವಾಲಾಗಿವೆ.
ಇದನ್ನೂ ಓದಿ – ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಸಸ್ಪೆಂಡ್, ಕಾರಣವೇನು?