ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 JANUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಯುವನಿಧಿ ಯೋಜನೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಚಪ್ಪಾಳೆ, ಘೋಷಣೆಗಳು ಜೋರಾಗಿದ್ದವು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಡಿಕೆ.. ಡಿಕೆ.. ಘೋಷಣೆ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮದ ವೇದಿಕೆಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಡಿಕೆ, ಡಿಕೆ ಎಂದು ಘೋಷಣೆ ಆರಂಭಿಸಿದರು. ವಿದ್ಯಾರ್ಥಿಗಳು ಕೂಡ ಇದನ್ನು ಅನಸುರಿಸಿ ಜೋರಾಗಿ ಘೋಷಣೆ ಕೂಗಿದರು. ಎಲ್ಲರತ್ತ ಕೈ ಬೀಸಿ ಡಿ.ಕೆ. ಶಿವಕುಮಾರ್ ವಂದನೆ ಸಲ್ಲಿಸಿದರು. ಇನ್ನು, ಅವರು ಭಾಷಣಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಪುನಃ ಘೋಷಣೆ ಮೊಳಗಿಸಿದರು.
ಸಂಸದ ರಾಘವೇಂದ್ರಗೆ ಅಚ್ಚರಿ
ಯುವನಿಧಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನೋಡಲು, ಭಾಷಣ ಕೇಳಲು ಜನ ಸೇರಿದ್ದರು. ಹಾಗಾಗಿ ಕಾರ್ಯಕ್ರಮ ಸಂಪೂರ್ಣ ಕಾಂಗ್ರೆಸ್‌ಮಯವಾಗಿತ್ತು. ಆದರೂ ಸ್ವಾಗತದ ವೇಳೆ ಸಂಸದ ರಾಘವೇಂದ್ರ ಅವರ ಹೆಸರು ಹೇಳುತ್ತಿದ್ದಂತೆ ಸಭೆಯಲ್ಲಿ ಯುವಕರು ಜೋರಾಗಿ ಕೂಗಿ, ಚಪ್ಪಾಳೆ ತಟ್ಟಿದ್ದರು. ಇದನ್ನು ಗಮನಿಸಿ ಸಂಸದ ರಾಘವೇಂದ್ರ ಅಚ್ಚರಿಗೊಂಡರು.
ಇದನ್ನೂ ಓದಿ – ಸಿಎಂ ಬರುವ ಮುನ್ನ ವಿದ್ಯಾರ್ಥಿಗಳಿಂದ ಭರ್ಜರಿ ಡಾನ್ಸ್, ಪುನೀತ್ ರಾಜ್‌ಕುಮಾರ್‌ಗೆ ಟಾರ್ಚ್ ಲೈಟ್ ಸಲ್ಯೂಟ್