ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 2 ಮಾರ್ಚ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ನಗರದ ಕೊಳಚೆ ಪ್ರದೇಶಗಳಲ್ಲಿರುವ ಮನೆಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಕಾರ್ಪೊರೇಟರ್ ರಮೇಶ್ ಹೆಗ್ಡೆ, ಶಿವಮೊಗ್ಗ ನಗರದಲ್ಲಿ 54 ಕೊಳಚೆ ಪ್ರದೇಶಗಳಿವೆ. ಇದರಲ್ಲಿ ಸುಮಾರು 8 ಸಾವಿರ ಕುಟುಂಬಗಳು ಮನೆ ಕಟ್ಟಿಕೊಂಡಿದ್ದಾರೆ. ಈ ಪೈಕಿ 2012ರಲ್ಲಿ 2741 ಮನೆಗಲಿಗೆ ಸರ್ಕಾರದ ವತಿಯಿಂದ ಹಕ್ಕುಪತ್ರ ಕೊಡಲಾಗಿದೆ. ಉಳಿದ 3219 ಮನೆಗಳಿಗೆ ಈವರೆಗೂ ಹಕ್ಕು ಪತ್ರ ಕೊಟ್ಟಿಲ್ಲ. ಕೂಡಲೇ ಹಕ್ಕುಪತ್ರ ವಿತರಣೆ ಮಾಡಬೆಕು ಎಂದು ಆಗ್ರಹಿಸಿದರು.
ಖಾತೆ ಮಾಡಿ, ತೆರಿಗೆ ಕಟ್ಟಿಸಿಕೊಳ್ಳಿ
2012ರಲ್ಲಿ ಹಕ್ಕುಪತ್ರ ನೀಡಿರುವ ಮನೆಗಳಿಗೆ ಖಾತೆ ಮಾಡಿ, ಪಾಲಿಕೆ ವತಿಯಿಂದ ಆಸ್ತಿ ತೆರಿಗೆ ಕಟ್ಟಿಸಿಕೊಳ್ಳಬೇಕು. ಖಾಸಗಿ ಒಡೆತನದ ಜಾಗದಲ್ಲಿರುವ ಕೊಳಚೆ ಪ್ರದೇಶದ ಭೂ ಸ್ವಾಧೀನ ಮಾಡಿಕೊಂಡು, ಹಕ್ಕುಪತ್ರ ನೀಡಬೇಕು ಎಂದು ರಮೇಶ್ ಹೆಗ್ಡೆ ಸರ್ಕಾರವನ್ನು ಒತ್ತಾಯಿಸಿದರು.
ಅಮೀರ್ ಅಹಮದ್ ಕಾಲೋನಿ 2ನೇ ಹಂತದ 111 ಮನೆಗಳು, ಕರ್ಲಹಟ್ಟಿಯ 41 ಮನೆಗಳಿಗೆ ಕೂಡಲೇ ಪರಿಚಯ ಪತ್ರ ನೀಡಬೇಕು. ಇನ್ನು, ಹೊಸದಾಗಿ ಘೋಷಿಸಿರುವ ಡಾ.ಅಂಬೇಡ್ಕರ್ ಕಾಲೋನಿ, ಜನತಾ ಕಾಲೋನಿ, ಸತ್ಯಹರಿಶ್ಚಂದ್ರ ನಗರ, ಕೆಳಗಿನ ತುಂಗಾನಗರ 2ನೇ ಹಂತ, ಇಮಾಮ್ ಬಾಡ, ಸಿದ್ದೇಶ್ವರನಗರದ ಕೊಳಚೆ ಪ್ರದೇಶದ ಸುಮಾರು 600 ಮನೆಗಳಿಗೂ ಪರಿಚಯ ಪತ್ರ ನೀಡಬೇಕು ಎಂದರು.
ಸಾಲ ಮಂಜೂರಾತಿ ಮಾಡಿಸಿ
ಸುಭಾಷ್ ನಗರ, ಶಾಂತಿನಗರ ಮತ್ತು ಇತರೆ ಕೊಳಚೆ ಪ್ರದೇಶಗಳಲ್ಇಲ 650 ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಮಂಜೂರಾತಿ ಮಾಡಿಸಬೇಕು. ಅಲ್ಲದೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. 2019ರ ಆಗಸ್ಟ್ ತಿಂಗಳಿನ ಪ್ರವಾಹಕ್ಕೆ ಕೊಳಚೆ ಪ್ರದೇಶಗಳಲ್ಲಿ ಮನೆ ಕಳೆದುಕೊಂಡವರಿಗೆ ಅದನ್ನು ಅಧಿಕೃತ ಮನೆಗಳೆಂದು ಪರಿಗಣಿಸಿ 5 ಲಕ್ಷ ರೂ. ಮಂಜೂರು ಮಾಡಿಸಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೇಶ್, ಕಾರ್ಪೊರೇಟರ್ ಯಮುನಾ ರಂಗೇಗೌಡ, ಪ್ರಮುಖರಾದ ವಿಶ್ವನಾಥ ಕಾಶಿ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]