| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE NEWS | SHIMOGA | 11 ಜೂನ್ 2022 LOAN
ಪಿಗ್ಮಿ ಕಟ್ಟಿಸಿಕೊಂಡು ಹಣವನ್ನು ಹಿಂತಿರುಗಿಸದೆ ಫೈನಾನ್ಸ್ ಸಂಸ್ಥೆಗೆ ಬೀಗ ಹಾಕಲಾಗಿದೆ. ಈ ಸಂಬಂಧ ಗ್ರಾಹಕರೊಬ್ಬರು ಪೊಲೀಸ್ ಠಾಣೆ ಮಟ್ಟಿಲು ಹತ್ತಿದ್ದಾರೆ.
ಸಿಂಧೂದರ ಎಂಬ ಉದ್ಯಮಿಯೊಬ್ಬರು ಶಿವಮೊಗ್ಗದ ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಪಿಗ್ಮಿ ಕಟ್ಟುತ್ತಿದ್ದರು. ಪ್ರತಿ ದಿನ 500 ರೂ. ಪಿಗ್ಮಿ ಹಣವನ್ನು ಪಾವತಿ ಮಾಡಿದ್ದರು.
ಖಾತೆಯಲ್ಲಿ 1.03 ಲಕ್ಷ ರೂ. ಹಣ ಸಂಗ್ರಹವಾಗಿತ್ತು. ತುರ್ತಾಗಿ ಹಣದ ಅವಶ್ಯಕತೆ ಇದ್ದಿದ್ದರಿಂದ, ಸಿಂಧೂದರ ಅವರು ಫೈನಾನ್ಸ್ ಸಂಸ್ಥೆಗೆ ಹೋಗಿ ಹಣ ಕೇಳಿದ್ದಾರೆ. ಆಗ 60,770 ರೂ.ಗೆ ಚಿಕ್ ನೀಡಿದ ಸಂಸ್ಥೆಯ ಪ್ರಮುಖರು, ಉಳಿದ ಹಣವನ್ನು ಕೆಲವೆ ದಿನದಲ್ಲಿ ನಗದಾಗಿ ಕೊಡುವುದಾಗಿ ತಿಳಿಸಿದರು.
ಆದರೆ ಬ್ಯಾಂಕಿನಲ್ಲಿ ಚೆಕ್ ಬೌನ್ಸ್ ಆಗಿದೆ. ಹಲವು ಭಾರಿ ಹಣ ಕೇಳಿದರೂ ಕೊಟ್ಟಿಲ್ಲ. ಕೊನೆಗೆ ಫೈನಾನ್ಸ್ ಸಂಸ್ಥೆಗೆ ಬೀಗ ಹಾಕಲಾಗಿದೆ. ಹಾಗಾಗಿ ಸಿಂಧೂದರ ಅವರು ನಾಗರಾಜ ಮತ್ತು ಸಂತೋಷ್ ಎಂಬುವವರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ತಾಲೂಕು ಕಚೇರಿ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ್ದ ಬೈಕ್ ಇಲ್ಲ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ
- ಯಡೇಹಳ್ಳಿ ಕ್ರಾಸ್ ಬಳಿ ಅರಣ್ಯ ಸಂಚಾರಿ ದಳದ ದಾಳಿ, ಕಾರಾವಾರದ ವ್ಯಕ್ತಿ ಅರೆಸ್ಟ್
- ಅಡಿಕೆ ಎಲೆಚುಕ್ಕಿ ರೋಗ, ಬಾಕಿ ಹಣ ಬಿಡುಗಡೆಗೆ ಸಿಎಂ ಸೂಚನೆ
- ಕಿತ್ತೂರು ರಾಣಿ ಚನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ
- ಸಾಗರ ನಗರಸಭೆ ಎಚ್ಚರಿಕೆ, ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಮುಖ ಪ್ರಕಟಣೆ
- ‘ಶಿವಮೊಗ್ಗ ಮಹಾನಗರ ಪಾಲಿಕೆಗೆ ಜನವರಿ 2ರವರೆಗೆ ಗಡುವುʼ
- ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಜೋರು, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?
- ಬಾವಿಗೆ ಬಿದ್ದ ಗೂಳಿ, ಹರಸಾಹಸ ಮಾಡಿ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ, ಆಗಿದ್ದೆಲ್ಲಿ?
![]()