ಶಿವಮೊಗ್ಗದ ಸ್ಮಾರ್ಟ್‌ ಸಿಟಿ ಗಡಿಯಾರದಲ್ಲಿ ದಿಕ್ಕಿಗೊಂದು ಟೈಮ್‌

SHIVAMOGGA LIVE NEWS | 1 JANUARY 2023 (ಈ ಸುದ್ದಿಯನ್ನು ಇನ್ನು 45 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ನಗರದ ಉಷಾ ನರ್ಸಿಂಗ್‌ ಹೋಂ ಸರ್ಕಲ್‌ನಲ್ಲಿ ಸ್ಮಾರ್ಟ್‌ ಸಿಟಿ ವತಿಯಿಂದ ನಿರ್ಮಿಸಿರುವ ಗೋಪುರ ಗಡಿಯಾರ ದಿಕ್ಕಿಗೊಂದು ಸಮಯ ತೋರಿಸುತ್ತಿದೆ. ನಿರ್ವಹಣೆ ಕೊರತೆಯಿಂದ ಗೋಪುರದ ಗಡಿಯಾರಗಳಲ್ಲಿ ಸಮಯದಲ್ಲಿ ವ್ಯತ್ಯಾಸವಾಗಿದೆ.

ಉಷಾ ನರ್ಸಿಂಗ್‌ ಹೋಂನಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ನಾಲ್ಕು ದಿಕ್ಕಿಗು ಸಮಯ ತೋರಿಸಲು ಗಡಿಯಾರದ ಗೋಪುರ ಮತ್ತು ಸಣ್ಣ ಪಾರ್ಕ್‌ ನಿರ್ಮಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಈ ಕಾಮಗಾರಿ ನಡೆಸಲಾಗಿದೆ. ಆದರೆ ನಿರ್ವಹಣೆ ಕೊರತೆಯಿಂದಾಗಿ ಈ ಗಡಿಯಾರದಲ್ಲಿ ಒಂದೊಂದು ದಿಕ್ಕಿನಲ್ಲಿ ಒಂದೊಂದು ಸಮಯ ತೋರಿಸುತ್ತಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಪೂರ್ವ ಮತ್ತು ದಕ್ಷಿಣಕ್ಕೆ ಮುಖ ಮಾಡಿರುವ ಗಡಿಯಾರಗಳು ಒಂದೊಂದು ಸಮಯ ತೋರಿಸುತ್ತಿವೆ. ಇನ್ನು, ಪಶ್ಚಿಮ ಮತ್ತು ಉತ್ತರ ದಿಕ್ಕಿಗೆ ಮುಖ ಮಾಡಿರುವ ಗಡಿಯಾರಗಳು ಸರಿಯಾದ ಸಮಯವನ್ನು ತೋರಿಸುತ್ತಿವೆ. ರಾತ್ರಿ ವೇಳೆ ಗಡಿಯಾರದಲ್ಲಿ ಸಮಯ ಕಾಣಲಿ ಎಂದು ಒಳಭಾಗದಲ್ಲಿ ಲೈಟ್‌ ಹಾಕಲಾಗುತ್ತಿತ್ತು. ಈಗ ಗಡಿಯಾರದ ಒಳಗಿರುವ ಲೈಟ್‌ ಕೂಡ ಹಾಳಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

smart city clock near usha nursing home

smart city clock near usha nursing home

ಇದನ್ನೂ ಓದಿ – ಶಿವಮೊಗ್ಗದಲ್ಲಿ ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ, ಎಲ್ಲೆಲ್ಲಿ ಹೇಗಿತ್ತು ಸಂಭ್ರಮ?

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Shimoga-Smart-city-clock-in-usha-nursing-home-circle.

Leave a Comment