ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 30 MARCH 2021
ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ ಸೇರಿ ಹಿರಿಯ ಅಧಿಕಾರಿಗಳ ಬಂಗಲೆಗಳಿರುವ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲೇ ಎಂಜಿನಿಯರ್‍ಗಳು ಅವಾಂತರ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ, ಚರಂಡಿ ಕಾಮಗಾರಿ ನಡೆಯುತ್ತಿದೆ. ಅಧಿಕಾರಿಗಳು ಈ ಕಾಮಗಾರಿ ನಡೆಸಿದ ಪರಿ, ಅದರ ಗುಣಮಟ್ಟಕ್ಕೆ ಕೈಗನ್ನಡಿಯಾಗಿದೆ.
ಚರಂಡಿ ನಡುವೆ ವಿದ್ಯುತ್ ಕಂಬಗಳು
ಜಿಲ್ಲಾಧಿಕಾರಿ ಅವರ ಮನೆಗೆ ಹೋಗುವ ರಸ್ತೆಯಲ್ಲೆ ಸೈನಿಕ ಪಾರ್ಕ್ ಇದೆ. ಅದರ ಪಕ್ಕದಲ್ಲೇ ನಾಲ್ಕು ವಿದ್ಯುತ್ ಕಂಬಗಳಿವೆ. ಇದೆ ಕಂಬಗಳ ಮೂಲಕ ಜಿಲ್ಲಾಧಿಕಾರಿ, ಸಿಇಒ, ಪಿಡಬ್ಲುಡಿ ಎಂಜಿನಿಯರ್, ಕಮಿನಷರ್ ಅವರ ಬಂಗಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಕಂಬಗಳು ಈಗ ಚರಂಡಿ ನಡುವೆ ಬಂದಿವೆ.
ಮೊದಲು ಚರಂಡಿಯೇ ಇರಲಿಲ್ಲ
ಈ ಮೊದಲು ಈ ರಸ್ತೆಯಲ್ಲಿ ಚರಂಡಿಯೇ ಇರಲಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಜಯನಗರ ಬ್ಲಾಕ್‍ನ ಚರಂಡಿ ಕಾಮಗಾರಿ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ, ಸಿಇಒ ಅವರ ಬಂಗಲೆಗಳು ಇರುವ ಕಾರಣದಿಂದಲೋ ಏನೋ ಒಂದೇ ತಿಂಗಳಲ್ಲಿ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಅದರ ಮೇಲೆ ಸ್ಲಾಬ್ ಅಳವಡಿಸಲಾಗುತ್ತಿದೆ. ವಿಪರ್ಯಾಸ ಅಂದರೆ ಇಲ್ಲಿರುವ ನಾಲ್ಕು ವಿದ್ಯುತ್ ಕಂಬಗಳ ಪೈಕಿ ಮೂರು ಕಂಬಗಳು ಚರಂಡಿಯ ಮಧ್ಯದಲ್ಲಿವೆ. ಒಂದು ಕಂಬ ಚರಂಡಿಯಿಂದ ಹೊರಗಿದ್ದರು, ಅದಕ್ಕೆ ತಾಗಿಕೊಂಡೇ ಇದೆ.
ಕಂಬಗಳನ್ನು ಸೇರಿಸಿ ಕಾಂಕ್ರಿಟ್ ಹಾಕಿದ್ದಾರೆ
ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ಚರಂಡಿಯನ್ನು ನಿರ್ಮಿಸಬಹುದಿತ್ತು. ಆದರೆ ಅಧಿಕಾರಿಗಳು ಹಾಗೆ ಮಾಡದೆ, ಕಂಬಗಳನ್ನು ಸೇರಿಸಿಕೊಂಡು ಚರಂಡಿ ನಿರ್ಮಿಸಿದ್ದಾರೆ. ಜೋರು ಮಳೆಯಾದರೆ ನೀರು ಸರಾಗವಾಗಿ ಹರಿದು ಹೋಗಲು ಈ ಕಂಬಗಳೇ ಅಡ್ಡಿಯಾಗಲಿವೆ. ಒಂದು ವೇಳೆ ವಿದ್ಯುತ್ ಕಂಬಗಳ ಸ್ಥಳಾಂತರ ಅಥವಾ ತೆರವು ಮಾಡಬೇಕಿದ್ದರೆ ಈ ಚರಂಡಿಯನ್ನು ಒಡೆಯಬೇಕಾಗುತ್ತದೆ.
ಜನರ ಸಹಭಾಗಿತ್ವದಲ್ಲಿ ಸ್ಮಾಟ್ ಸಿಟಿ ಯೋಜನೆ ಕಾಮಗಾರಿ ನಡೆಯಬೇಕು ಎಂಬ ನಿಯಮವಿದೆ. ಆದರೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ನಡೆಸುತ್ತಿರುವುದರಿಂದ ಜನರು ಪ್ರತಿದಿನ ಹಲವು ಆರೋಪ ಮಾಡುತ್ತಿದ್ದಾರೆ. ಈಗ ಜಿಲ್ಲಾಧಿಕಾರಿ ಅವರ ಮನೆ ಮುಂದೆಯೇ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಇಂತಹ ಯಡವಟ್ಟಾಗಿದೆ.
ಮೊದಲು | ಈ ರಸ್ತೆಯಲ್ಲಿ ಚರಂಡಿ ಇರಲಿಲ್ಲ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422