ಶಿವಮೊಗ್ಗ ಲೈವ್‌ ವರದಿ ಇಂಪ್ಯಾಕ್ಟ್‌, ಜೈಲ್‌ ಸರ್ಕಲ್‌ನಲ್ಲಿ ಕಾಮಗಾರಿ ಶುರು, ಡಾ.ಅಂಬೇಡ್ಕರ್‌ ನಾಮಫಲಕ ಪುನರ್‌ ಸ್ಥಾಪನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 17 MAY 2023

SHIMOGA : ಸ್ಮಾರ್ಟ್‌ ಸಿಟಿ (Smart City) ಯೋಜನೆಯ ಅಪೂರ್ಣ ಕಾಮಗಾರಿ, ಡಾ. ಅಂಬೇಡ್ಕರ್‌ ಅವರ ನಾಮಫಲಕವನ್ನು ಚರಂಡಿಗೆ ಹಾಕಿದ್ದ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬೆಳಗ್ಗೆಯಿಂದಲೇ ಜೈಲ್‌ ವೃತ್ತದಲ್ಲಿ ಕಾಮಗಾರಿ ಆರಂಭವಾಗಿದೆ.

Shivamogga-Live-Impact-Smart-City-Work-begins-at-Jail-Circle

ಜೈಲ್‌ ಸರ್ಕಲ್‌ನ ಒಂದು ಬದಿಯಲ್ಲಿ ಸ್ಮಾರ್ಟ್‌ ಸಿಟಿ (Smart City) ಕಾಮಗಾರಿ ಅಪೂರ್ಣವಾಗಿತ್ತು. ಪೊಲೀಸ್‌ ಚೌಕಿ ನಿರ್ಮಿಸಿ ಅದರ ಪಕ್ಕದಲ್ಲಿ ರಸ್ತೆ ಮೇಲೆ ಜೆಲ್ಲಿ ಹಾಕಿ ಹಾಗೆ ಬಿಡಲಾಗಿತ್ತು. ಇದರಿಂದ ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸುತ್ತಿರುವ ಕುರಿತು ಶಿವಮೊಗ್ಗ ಲೈವ್.ಕಾಂ ಮೇ 16ರಂದು ಮಧ್ಯಾಹ್ನ ವರದಿ ಪ್ರಕಟಿಸಿತ್ತು.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಇನ್ನು, ಇಲ್ಲಿ ಚರಂಡಿ ಕಾಮಗಾರಿಯು ಪೂರ್ಣವಾಗಿಲ್ಲ. ಡಾ. ಅಂಬೇಡ್ಕರ್‌ ವೃತ್ತದ ನಾಮಫಲಕವನ್ನೇ ಚರಂಡಿಗೆ ಸ್ಲ್ಯಾಬ್‌ ಮಾಡಲಾಗಿತ್ತು. ಈ ಕುರಿತು ಶಿವಮೊಗ್ಗ ಲೈವ್.ಕಾಂ ವರದಿಯಲ್ಲಿ ಪ್ರಸ್ತಾಪಿಸಿತ್ತು. ಹಾಗಾಗಿ ಸ್ಮಾರ್ಟ್‌ ಸಿಟಿ ಅಧಿಕಾರಿಗಳ ವಿರುದ್ಧ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ಇದನ್ನೂ ಓದಿ – ಜೈಲ್‌ ಸರ್ಕಲ್‌ನಲ್ಲಿ ಸ್ವಲ್ಪ ಯಾಮಾರಿದ್ರು ಬೈಕ್‌ ಸವಾರರಿಗೆ ಅಪಾಯ ಫಿಕ್ಸ್‌

ಕಾಮಗಾರಿ ಆರಂಭಿಸಿದ ಸ್ಮಾರ್ಟ್‌ ಸಿಟಿ

ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಜೈಲ್‌ ವೃತ್ತಕ್ಕೆ ದೌಡಾಯಿಸಿದ್ದಾರೆ. ಕಾಮಗಾರಿ ಪುನಾರಂಭವಾಗಿದೆ. ಡಾ. ಅಂಬೇಡ್ಕರ್‌ ಅವರ ಹೆಸರಿನ ನಾಮಫಲಕವನ್ನು ಪುನರ್‌ ಸ್ಥಾಪಿಸಲಾಗಿದೆ. ರಸ್ತೆ ಬದಿಯಲ್ಲಿ ಅಪೂರ್ಣ ಕಾಮಗಾರಿಯನ್ನು ಮತ್ತೆ ಶುರು ಮಾಡಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಚರಂಡಿಗೆ ಸ್ಲ್ಯಾಬ್‌ ಬದಲು ಡಾ. ಅಂಬೇಡ್ಕರ್‌ ನಾಮಫಲಕದ ಹೊದಿಕೆ, ಕ್ರಮಕ್ಕೆ ಒತ್ತಾಯ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment