ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 AUGUST 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಸಂಚಾರ ನಿಯಮ ಪಾಲಿಸಿದೆ (Traffic Rules) ಅಡ್ಡಾದಿಡ್ಡಿ ವಾಹನ ಚಲಾಯಿಸಿದ 655 ವಾಹನ ಮಾಲೀಕರಿಗೆ ಮೊದಲ ದಿನ ಎಸ್‌ಎಂಎಸ್ ಮೂಲಕ ನೊಟೀಸ್ (SMS Notice) ತಲುಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ನಗರದ ವಿವಿಧೆಡೆ ಅಳವಡಿಸಿರುವ ಸ್ಮಾರ್ಟ್ ಕ್ಯಾಮರಾಗಳನ್ನು (Smart Camera) ಬಳಸಿ ಅಡ್ಡಾದಿಡ್ಡಿ ವಾಹನ ಚಲಾಯಿಸುವವರಿಗೆ ನೊಟೀಸ್ ಜಾರಿ ಮಾಡುವ ವ್ಯವಸ್ಥೆ ಆ.28ರಿಂದ ಶಿವಮೊಗ್ಗ ನಗರದಲ್ಲಿ ಜಾರಿಗೆ ಬಂದಿದೆ. ಮೊದಲ ದಿನ ವಿವಿಧ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ನೊಟೀಸ್ ಕಳುಹಿಸಲಾಗಿದೆ.
ಯಾವ್ಯಾವ ನಿಯಮ ಉಲ್ಲಂಘನೆ?
ಸಿಗ್ನಲ್ ಜಂಪ್ ಮಾಡಿದ 613 ಪ್ರಕರಣ, ಅತಿ ವೇಗ 63 ಪ್ರಕರಣ, ಹೆಲ್ಮೆಟ್ ರಹಿತ ಚಾಲನೆ 4 ಪ್ರಕರಣ, ಸೀಟ್ ಬೆಲ್ಟ್ ಧರಿಸದೆ ಕಾರು ಚಾಲನೆ 1 ಪ್ರಕರಣ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ 1 ಪ್ರಕರಣವನ್ನು ಕ್ಯಾಮರಾದಲ್ಲಿ ಪತ್ತೆ ಮಾಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ವಾಹನ ಸವಾರರೆ ಹುಷಾರ್, ಇವತ್ತಿಂದ ಆಟೋಮ್ಯಾಟಿಕ್ ದಂಡ ಫಿಕ್ಸ್, ಪೊಲೀಸ್ ವಿಡಿಯೋ ವೈರಲ್