ಒಂದು ಕೈಯಲ್ಲಿ ಮೊಬೈಲ್‌, ಮತ್ತೊಂದರಲ್ಲಿ ಡ್ರೈವಿಂಗ್‌, ವಿಡಿಯೋ ಮಾಡಿ ಪೊಲೀಸರಿಗೆ ಕಳುಹಿಸಿದ ಪ್ಯಾಸೆಂಜರ್‌, ಮುಂದೇನಾಯ್ತು?

SHIVAMOGGA LIVE | 7 JULY 2023

SHIMOGA : ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್‌ ಚಾಲನೆ (Driving) ಮಾಡುತ್ತಿದ್ದ ಚಾಲಕನಿಗೆ ಸಂಚಾರ ಠಾಣೆ ಪೊಲೀಸರು ದಂಡ ವಿಧಿಸಿದ್ದಾರೆ. ಚಾಲಕ ಮೊಬೈಲ್‌ನಲ್ಲಿ ಮಾತನಾಡುವ ವಿಡಿಯೋವನ್ನು ಪ್ರಯಾಣಿಕರೊಬ್ಬರು ಚಿತ್ರೀಕರಣ ಮಾಡಿದ್ದರು.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Shimoga-Traffic-Police-fines-driver-for-speaking-on-mobile-while-driving

ಖಾಸಗಿ ಬಸ್‌ ಚಾಲಕ ಮನ್ಸೂರ್‌ ಅಲಿ ಎಂಬಾತ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತ ಬಸ್‌ ಚಾಲನೆ ಮಾಡಿದ್ದ. ಪ್ರಯಾಣಿಕರೊಬ್ಬರು ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ, ಸಂಚಾರ ಠಾಣೆ ಪೊಲೀಸರಿಗೆ ರವಾನಿಸಿ ಕ್ರಮಕ್ಕೆ ಆಗ್ರಹಿಸಿದ್ದರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೈಕ್ ಸವಾರನ ಕಾಲುಗಳ ಮೇಲೆ ಹರಿದ KSRTC ಬಸ್‌

ಪರಿಶೀಲನೆ ನಡೆಸಿದ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಕುಮಾರ್‌ ಅವರು ಚಾಲಕನನ್ನು ಪತ್ತೆ ಹಚ್ಚಿ 5 ಸಾವಿರ ರೂ. ದಂಡ ವಿಧಿಸಿದ್ದಾರೆ.

Leave a Comment