ಶಿವಮೊಗ್ಗ – ಚೆನ್ನೈ ವಿಮಾನಯಾನ ಶುರು, ಹೇಗಿತ್ತು ಮೊದಲ ದಿನ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIMOGA NEWS, 10 OCTOBER 2024 : ಇಂದಿನಿಂದ ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಸ್ಪೈಸ್‌ ಜೆಟ್‌ ವಿಮಾನಯಾನ (Flight) ಸೇವೆ ಆರಂಭವಾಗಿದೆ. ಚೆನ್ನೈನಿಂದ ಶಿವಮೊಗ್ಗಕ್ಕೆ ಆಗಮಿಸಿದ ಮೊದಲ ಸ್ಪೈಸ್‌ ಜೆಟ್‌ ವಿಮಾನಕ್ಕೆ ವಾಟರ್‌ ಸಲ್ಯೂಟ್‌ ನೀಡಲಾಯಿತು.
➤ ಸುದ್ದಿಯ ಮುಂದಿನ 13 ಪ್ಯಾರಾಗಳು ಕೆಳಗಿವೆ.

ಚೆನ್ನೈನಲ್ಲಿ ದೀಪ ಬೆಳಗಿ ಉದ್ಘಾಟನೆ

ಚೆನ್ನೈ ವರದಿ : ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ ಜೆಟ್‌ ವಿಮಾನದ ಶಿವಮೊಗ್ಗ ಮಾರ್ಗಕ್ಕೆ ಚಾಲನೆ ನೀಡಲಾಯಿತು. ಚೆನ್ನೈ – ಶಿವಮೊಗ್ಗ ಮಾರ್ಗದ ಮೊದಲ ಟಿಕೆಟ್‌ ಖರೀದಿಸಿದ ಪ್ರಯಾಣಿಕರಿಂದಲೇ ದೀಪ ಬೆಳಗಿಸಿ ಹೊಸ ಮಾರ್ಗಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು, ವಿಮಾನದ ಸಿಬ್ಬಂದಿ ಹಾಜರಿದ್ದರು.

Spice jet flight in Shimoga Airport

ಶಿವಮೊಗ್ಗದಲ್ಲಿ ಕೇಕ್‌ ಕತ್ತರಿಸಿದ ಸಂಸದ

ಶಿವಮೊಗ್ಗ ವರದಿ : ಇತ್ತ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ ಜೆಟ್‌ ವಿಮಾನಯಾನ ಸೇವೆಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಕೇಕ್‌ ಕತ್ತರಿಸಿ ಮಕ್ಕಳಿಗೆ ತಿನ್ನಿಸಿ ವಿಮಾನಯಾನ ಸೇವೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಶಿವಮೊಗ್ಗ ವಿಮಾನ ನಿಲ್ದಾಣದ ವ್ಯವಸ್ಥಾಪಕ ಸಿ.ಶಮಂತ್‌, ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Spice jet flight in Shimoga Airport

ಮೊದಲ ವಿಮಾನಕ್ಕೆ ಅದ್ಧೂರಿ ಸ್ವಾಗತ

ಚೆನ್ನೈನಿಂದ ಬೆಳಗ್ಗೆ 10.40ಕ್ಕೆ ಹೊರಡಬೇಕಿದ್ದ ವಿಮಾನ ಇಂದು ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ಬೆಳಗ್ಗೆ 11.03ಕ್ಕೆ ಹಾರಾಟ ಆರಂಭಿಸಿತು. ಮಧ್ಯಾಹ್ನ ಶಿವಮೊಗ್ಗಕ್ಕೆ ಬಂದಿಳಿಯಿತು. ಈ ಸಂದರ್ಭ ಸ್ಪೈಸ್‌ ಜೆಟ್‌ ವಿಮಾನಕ್ಕೆ ಎರಡು ಬದಿಯಿಂದ ನೀರು ಹಾಯಿಸಿ ವಾಟರ್‌ ಕೆನಾನ್‌ ಸ್ವಾಗತ ನೀಡಲಾಯಿತು. ಇನ್ನು, ಶಿವಮೊಗ್ಗಕ್ಕೆ ಬಂದಿಳಿದ ಪ್ರಯಾಣಿಕರಿಗೆ ಸ್ಪೈಸ್‌ ಜೆಟ್‌ ಸಂಸ್ಥೆ ವತಿಯಿಂದ ವಿಶೇಷ ಸ್ವಾಗತ ನೀಡಲಾಯಿತು.

Spice jet flight in Shimoga Airport

ಹೈದರಾಬಾದ್‌ಗೆ ಪ್ರಯಾಣ, ಸಂಜೆ ಚೆನ್ನೈಗೆ

ಸ್ಪೈಸ್‌ ಜೆಟ್‌ ವಿಮಾನವು ಸದ್ಯ ಹೈದರಾಬಾದ್‌ಗೆ ಪ್ರಯಾಣ ಮಾಡಿದೆ. ಸಂಜೆ ಹೈದರಾಬಾದ್‌ನಿಂದ ಹಿಂತಿರುಗಲಿದೆ. ಶಿವಮೊಗ್ಗದಿಂದ ಪುನಃ ಚೆನ್ನೈಗೆ ತೆರಳಲಿದೆ. ಸ್ಪೈಸ್‌ ಜೆಟ್‌ ವಿಮಾನವು ಬೆಳಗ್ಗೆ 10.40ಕ್ಕೆ ಚೆನ್ನೈನಿಂದ ಹೊರಟು, ಮಧ್ಯಾಹ್ನ 12.10ಕ್ಕೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 12.35ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.05ಕ್ಕೆ ಹೈದರಾಬಾದ್‌ ತಲುಪಲಿದೆ. ಮಧ್ಯಾಹ್ನ 2.40ಕ್ಕೆ ಹೈದರಾಬಾದ್‌ನಿಂದ ಹೊರಟು ಸಂಜೆ 4  ಗಂಟೆಗೆ ಶಿವಮೊಗ್ಗ ತಲುಪಲಿದೆ. ಸಂಜೆ 4.25ಕ್ಕೆ ಶಿವಮೊಗ್ಗದಿಂದ ಹೊರಟು ಸಂಜೆ 5.55ಕ್ಕೆ ಚೆನ್ನೈ ತಲುಪಲಿದೆ.

Spice jet flight in Shimoga Airport

Spice jet flight in Shimoga Airport

Spice jet flight in Shimoga Airport

Spice jet flight in Shimoga Airport

Spice jet flight in Shimoga Airport

Spice jet flight in Shimoga Airport

ಇದನ್ನೂ ಓದಿ » ಶಿವಮೊಗ್ಗ ಡಿಸಿ ಕಚೇರಿ, ಯದ್ವತದ್ವ ಪಾರ್ಕಿಂಗ್‌ಗೆ ಲಗಾಮು, ವಾಹನ ನಿಲುಗಡೆಗೆ ಕಟ್ಟಬೇಕು ಫೀಸ್‌

Leave a Comment