ಶಿವಮೊಗ್ಗ: ಶಿವಮೊಗ್ಗ ದಸರಾ 2026ಕ್ಕೆ ಚಲನಚಿತ್ರ ನಟ ಶ್ರೀನಾಥ್ ಚಾಲನೆ ನೀಡಿದರು. ಇದಕ್ಕು ಮುನ್ನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅವರು, ಶಾಸಕ ಎಸ್.ಎನ್.ಚನ್ನಬಸಪ್ಪ ಅವರೊಂದಿಗೆ ಕಲಾ ತಂಡಗಳ ವಾದ್ಯಕ್ಕೆ ಹೆಜ್ಜೆ ಹಾಕಿದರು.
ನಟ ಶ್ರೀನಾಥ್ ಏನಂದ್ರು?
ಶಿವಮೊಗ್ಗ ದಸರಾ ಉತ್ಸವವನ್ನು ಉದ್ಘಾಟಿಸಿದ ನಂತರ ನಟ ಶ್ರೀನಾಥ್ ಅವರು ಮಾತನಾಡಿದರು. ಅವರು ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್


ಮೈಸೂರು ನಮ್ಮ ತಾಯಿಯ ತವರು. ಆದ್ದರಿಂದ ಪ್ರತಿ ದಸರಾಗೆ ನಾವು ಮೈಸೂರಿಗೆ ಹೋಗುತ್ತಿದ್ದೆವು. ನಾನು ಮೈಸೂರು ಹೊರತು ಬೇರೆಲ್ಲು ದಸರಾ ನಡೆಯುವುದಿಲ್ಲ ಎಂದು ಭಾವಿಸಿದ್ದೆ. ಆದರೆ ನನ್ನ ಅಜ್ಜಿ ಶಿವಮೊಗ್ಗದಲ್ಲಿಯು ವಿಜೃಂಭಣೆಯ ದಸರಾ ನಡೆಯಲಿದೆ ಎಂದು ಹೇಳಿದ್ದರು.

ಶಿವಮೊಗ್ಗ ದಸರಾವನ್ನು ಒಮ್ಮೆ ನೋಡಬೇಕು ಅಂದುಕೊಂಡಿದ್ದೆ. ಆದರೆ ದಿನಕ್ಕೆ ಮೂರು ಸಿನಿಮಾದಲ್ಲಿ ನಟಿಸುತ್ತಿದ್ದೆ. ಹಾಗಾಗಿ ಸಮಯ ಸಿಗದೆ ಎಲ್ಲಿಯೂ ಹೋಗಲು ಆಗುತ್ತಿರಲಿಲ್ಲ. ಆದರೆ ಸಮನ್ವಯ ಕಾಶಿ ಅವರು ಕರೆ ಮಾಡಿ ದಸರಾ ಉತ್ಸವದ ಉದ್ಘಾಟನೆಗೆ ಆಹ್ವಾನಿಸಿದರು. ಸಂಸದ ರಾಘವೇಂದ್ರ, ಶಾಸಕ ಚನ್ನಬಸಪ್ಪ, ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರ ಹೆಸರು ಹೇಳಿದರು. ನಾನು ಶಿವಮೊಗ್ಗ ದಸರಾವನ್ನು ನೋಡಬೇಕು ಅಂದುಕೊಂಡಿದ್ದೆ. ಆದರೆ ಉದ್ಘಾಟನೆಗೆ ಆಹ್ವಾನ ಬಂದಿದ್ದು ಚಾಮುಂಡೇಶ್ವರಿ ತಾಯಿಯ ಕೃಪೆ.

ನೀವು ಸಂಪ್ರದಾಯಬದ್ಧವಾಗಿ ದಸರಾ ಆಚರಿಸುತ್ತಿದ್ದೀರ. ಮೆರವಣಿಗೆಯಲ್ಲಿ ಅತ್ಯಂತ ಭಕ್ತಿಯಿಂದ ಎಲ್ಲರು ಭಾಗವಹಿಸಿದ್ದರು. ದೇವಿಯನ್ನು ನೋಡುವಾಗ, ಆರಾಧನೆಯನ್ನು ಕಣ್ತುಂಬಿಕೊಳ್ಳುವಾಗ ನನಗು ಹಾಡಬೇಕು ಅನಿಸಿತು. ವೈಭದ ದಸರಾ ಆಚರಣೆ ಸಹ್ಯಾದ್ರಿ ತಪ್ಪಲಲ್ಲಿ ಇರುವವರ ಮುಖದಲ್ಲಿ ನಗು, ಸಂತೋಷಕ್ಕೆ ಕಾರಣವಾಗಿದೆ. ಇದೇ ರೀತಿಯ ನಗು, ಸಂತೋಷ ಬೆಂಗಳೂರಿನಲ್ಲಿಯು ಕಾಣುವಂತಾಗಲಿ.
ಶಿವಮೊಗ್ಗ ದಸಾರ ಉದ್ಘಾಟನೆ ನನ್ನ ಜನ್ಮದ ಪುಣ್ಯ. ಉಡುತಡಿಯಲ್ಲಿ ಅಕ್ಕಮಹಾದೇವಿಯ ಪ್ರತಿಮೆ ಸ್ಥಾಪಿಸಲಾಗಿದೆ. ಅಲ್ಲಿ ಯಾವುದೇ ಕಾರ್ಯಕ್ರಮ ನಡೆದರು ನನ್ನನ್ನು ಆಹ್ವಾನಿ. ತಪ್ಪದೆ ಹಾಜರಾಗುತ್ತೇನೆ.
– ಶ್ರೀನಾಥ್, ಚಲನಚಿತ್ರ ನಟ
ಪ್ರಣಯರಾಜನ ಜೊತೆಗೆ ಫೋಟೊ
ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜನರು ಪ್ರಣಯರಾಜ ಶ್ರೀನಾಥ್ ಅವರ ಜೊತೆಗೆ ಫೋಟೊ, ಸೆಲ್ಫಿಗೆ ಮುಗಿಬಿದ್ದರು. ದೇವಸ್ಥಾನ ಪಕ್ಕದ ಹೋಮ ನಡೆಯುವ ಪ್ರಾಂಗಣದಲ್ಲಿ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ನಟ ಶ್ರೀನಾಥ್ ಅವರ ಜೊತೆಗೆ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದು ವಿಶೇಷ. ಇನ್ನು ಪ್ರತಿಯೊಬ್ಬರ ಜೊತೆಗೆ ನಟ ಶ್ರೀನಾಥ್ ಸಮಾಧಾನಚಿತ್ತದಿಂದ ಫೋಟೊ ತೆಗೆಸಿಕೊಂಡರು.