GOOD NEWS – ಶಿವಮೊಗ್ಗದಿಂದ ಹೈದರಾಬಾದ್‌, ತಿರುಪತಿ, ಗೋವಾ ವಿಮಾನ ಹಾರಾಟಕ್ಕೆ ದಿನಾಂಕ ಫಿಕ್ಸ್‌, ಬುಕಿಂಗ್‌ ಶುರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 17 OCTOBER 2023

SHIMOGA : ಜಿಲ್ಲೆಯಿಂದ ಮತ್ತೊಂದು ವಿಮಾನ (Flight) ಸಂಚಾರ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಈಗಾಗಲೆ ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆ ಕೂಡ ಶುರುವಾಗಿದೆ. ಇನ್ಮುಂದೆ ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದರಾಬಾದ್‌ಗೆ ಅತ್ಯಂತ ವೇಗವಾಗಿ ತಲುಪಬಹುದಾಗಿದೆ.

ಶಿವಮೊಗ್ಗಕ್ಕೆ ಸ್ಟಾರ್‌ ಏರ್‌ಲೈನ್ಸ್‌

ಸ್ಟಾರ್‌ ಏರ್‌ಲೈನ್ಸ್‌ ವಿಮಾನಯಾನ (Flight) ಸಂಸ್ಥೆ ಶಿವಮೊಗ್ಗದಿಂದ ತನ್ನ ಕಾರ್ಯಾಚರಣೆ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್‌ಗೆ ವಾರದಲ್ಲಿ ಆರು ದಿನ ವಿಮಾನಯಾನ ಸೇವೆ ಆರಂಭಿಸುತ್ತಿದೆ. ನವೆಂಬರ್‌ 17ರಿಂದ ಸ್ಟಾರ್‌ ಏರ್‌ ತನ್ನ ಸೇವೆ ಆರಂಭಿಸುತ್ತಿದೆ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ರನ್‌ ವೇ ಕಾಣದೆ ಬೆಂಗಳೂರಿಗೆ ವಾಪಸ್‌ ತೆರಳಿದ ವಿಮಾನ

ಸ್ಟಾರ್‌ ಏರ್‌ ಟೈಮಿಂಗ್‌ ಏನು?

ಸ್ಟಾರ್‌ ಏರ್‌ ವಿಮಾನವು (Flight) ಬೆಳಗ್ಗೆ 9.30ಕ್ಕೆ ಹೈದರಾಬಾದ್‌ನಿಂದ ಹೊರಡಲಿದೆ. ಬೆಳಗ್ಗೆ 10.35ಕ್ಕೆ ಶಿವಮೊಗ್ಗ ತಲುಪಲಿದೆ. ಬೆಳಗ್ಗೆ 11ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12ಕ್ಕೆ ತಿರುಪತಿ ತಲುಪಲಿದೆ. ತಿರುಪತಿಯಿಂದ ಮಧ್ಯಾಹ್ನ 12.35ಕ್ಕೆ ಹೊರಟು ಮಧ್ಯಾಹ್ನ 1.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಮಧ್ಯಾಹ್ನ 1.55ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.45ಕ್ಕೆ ಗೋವಾ ತಲುಪಲಿದೆ. ಗೋವಾದಿಂದ ಮಧ್ಯಾಹ್ನ 3.15ಕ್ಕೆ ಹೊರಟು ಸಂಜೆ 4.05ಕ್ಕೆ ಶಿವಮೊಗ್ಗ ತಲುಪಲಿದೆ. ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೊರಟು ಸಂಜೆ 5.30ಕ್ಕೆ ಹೈದರಾಬಾದ್‌ ತಲುಪಲಿದೆ.

ಬುಕಿಂಗ್‌ ಆರಂಭವಾಗಿದೆ

ಸ್ಟಾರ್‌ ಏರ್‌ ಸಂಸ್ಥೆ ವಿಮಾನಯಾನ (Flight) ಸೇವೆ ಆರಂಭಕ್ಕೆ ದಿನಾಂಕ ಪ್ರಕಟಿಸುತ್ತಿದ್ದಂತೆ ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆ ಕೂಡ ಆರಂಭವಾಗಿದೆ. ಶುಭಂ ಹೊಟೇಲ್‌ ಸಮೀಪ ಇರುವ ಬ್ಲೂಬೆಲ್‌ ಹಾಲಿಡೇಸ್‌ನಲ್ಲಿ ಸ್ಟಾರ್‌ ಏರ್‌ ಟಿಕೆಟ್‌ ಬುಕಿಂಗ್‌ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ 8123002917, 9449502917 ಸಂಪರ್ಕಿಸಬಹುದು.

ಇದನ್ನೂ ಓದಿ – ಫೋಟೊಗಳಲ್ಲಿ ಶಿವಮೊಗ್ಗ ದಸರಾ ಉದ್ಘಾಟನಾ ಸಮಾರಂಭ, ಹೇಗಿತ್ತು ವೈಭವ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 17, 2023

Leave a Comment