ಶಿವಮೊಗ್ಗದಲ್ಲಿ ಬೈಕ್‌ ನಂಬರ್‌ ಪ್ಲೇಟ್‌ಗೆ ಸ್ಟಿಕ್ಕರ್‌ ಅಂಟಿಸಿದ್ದರೂ ಬಿತ್ತು ಭಾರಿ ದಂಡ

ಶಿವಮೊಗ್ಗ: ಸಿಸಿಟಿವಿಗಳಲ್ಲಿ ಬೈಕ್‌ಗಳ ನಂಬರ್‌ ಪ್ಲೇಟ್‌ (number plates) ರೆಕಾರ್ಡ್‌ ಆಗುವುದನ್ನು ತಪ್ಪಿಸಲು ಯುವಕರು ಕಳ್ಳ ಹಾದಿ ಹಿಡಿದಿದ್ದಾರೆ. ಇತ್ತ ಪೊಲೀಸ್‌ ಇಲಾಖೆ ಇಂತಹ ಬೈಕ್‌ ಸವಾರರಿಗೆ ಬಿಸಿ ಮುಟ್ಟಿಸುವ ಕೆಲಸ ಶುರು ಮಾಡಿದೆ.   ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ : ವಿದೇಶದಿಂದ ಹಣದ ನೆರವಿನ ಭರವಸೆ, ಶಿವಮೊಗ್ಗ ಜಿಲ್ಲೆಯ ಮಹಿಳೆಗೆ ಲಕ್ಷ ಲಕ್ಷ ವಂಚನೆ

Shimoga-Traffic-Police-impose-fine-for-sticking-sticker-on-bike-Number-plate

ಸ್ಟಿಕ್ಕರ್‌ ತಂದ ಫಜೀತಿ

ನಂಬರ್‌ ಪ್ಲೇಟ್‌ನ ಸಂಖ್ಯೆ ಕಾಣದಂತೆ ಸ್ಟಿಕ್ಕರ್‌ ಅಂಟಿಸಿಕೊಂಡಿದ್ದ ಯುವಕನಿಗೆ ಶಿವಮೊಗ್ಗದಲ್ಲಿ ಇವತ್ತು ದಂಡ ವಿಧಿಸಲಾಗಿದೆ. ಈತ ಚಲಾಯಿಸುತ್ತಿದ್ದ ಬೈಕ್‌ನ ನಂಬರ್‌ ಪ್ಲೇಟ್‌ಗೆ ಸ್ಟಿಕ್ಕರ್‌ ಅಂಟಿಸಿರುವುದು ಸ್ಮಾರ್ಟ್‌ ಸಿಟಿ ಕಮಾಂಡ್‌ ಸೆಂಟರ್‌ನ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಕೂಡಲೆ ಶೋಧ ಕಾರ್ಯ ಬೈಕ್‌ ಪತ್ತೆ ಹಚ್ಚಿದ ಪೂರ್ವ ಸಂಚಾರ ಠಾಣೆ ಪೊಲೀಸರು ಮೋಟರ್‌ ವೆಹಿಕಲ್‌ ಕಾಯ್ದೆ ಅಡಿ ದಂಡ ವಿಧಿಸಿದ್ದಾರೆ. ಅಲ್ಲದೆ ಈತ ಎಲ್ಲೆಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ ಎಂಬುದನ್ನು ಪರಿಶೀಲಿಸಿ ಉದ್ದದ ದಂಡದ ರಶೀದಿ ಕೊಟ್ಟು ದಂಡ ಪಾವತಿಸಿಕೊಂಡಿದ್ದಾರೆ.

Shimoga-Traffic-Police-impose-fine-for-sticking-sticker-on-bike-Number-plate

ಇನ್ನಷ್ಟು ಬಿಗಿ ಕಾರ್ಯಾಚರಣೆ ಬೇಕು

ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಶಿವಮೊಗ್ಗ ನಗರದ ಮುಖ್ಯ ರಸ್ತೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಇವುಗಳ ಮೂಲಕವೆ ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ. ಆದರೆ ಕ್ಯಾಮರಾಗಳಲ್ಲಿ ವಾಹನಗಳ ನಂಬರ್‌ ದಾಖಲಾಗದಂತೆ ತಪ್ಪಿಸಿಕೊಳ್ಳಲು ಯುವಕರು ಕಳ್ಳ ಹಾದಿ ಹಿಡಿದಿದ್ದಾರೆ.

ಬೈಕ್‌ಗಳ ನಂಬರ್‌ ಪ್ಲೇಟ್‌ಗಳನ್ನೇ ತೆಗೆಸುವುದು, ನಂಬರ್‌ ಪ್ಲೇಟ್‌ನ ಒಂದು ಅಥವಾ ಎರಡು ಅಂಕಿಗಳು ಕಾಣದಂತೆ ಸ್ಟಿಕ್ಕರ್‌ ಅಂಟಿಸುವುದು, ಫೋಲ್ಡ್‌ ಮಾಡಬಹುದಾದ ನಂಬರ್‌ ಪ್ಲೇಟ್‌ ಬಳಕೆ ಮಾಡುವುದು ಸೇರಿ ನಾನಾ ಕಳ್ಳ ಹಾದಿ ಹಿಡಿದಿದ್ದಾರೆ. ಇಂತಹ ಬೈಕ್‌ ಸವಾರರೆ ವಾಹನಗಳನ್ನು ಅಡ್ಡಾದಿಡ್ಡಿ ಚಲಾಯಿಸಿ, ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ. ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ ಇಂತಹ ದ್ವಿಚಕ್ರ ವಾಹನ ಸವಾರರಿಗೆ ಮತ್ತಷ್ಟು ಬಿಸಿ ಮುಟ್ಟಿಸಬೇಕಿದೆ.

ಈ ಸುದ್ದಿಗಳನ್ನು ಓದಿ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment