ರಾತ್ರಿ ಹೊತ್ತು ಮನೆಗಳ ಮೇಲೆ ಬೀಳುತ್ತಿವೆ ಕಲ್ಲು, ಕೋರ್ಟ್ ಮೊರೆ ಹೋದ ಮಹಿಳೆ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | 17 MAY 2023

SHIMOGA : ಕತ್ತಲಾಗುತ್ತಿದ್ದಂತೆ ಕಿಡಿಗೇಡಿಗಳ ಮನೆಗಳ ಮೇಲೆ ಕಲ್ಲು (Stone) ತೂರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸೂಕ್ತ ತನಿಖೆಗೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಶಿವಮೊಗ್ಗದ ಮಾರ್ನಮಿಬೈಲ್‌ನ ಜೆ.ಸಿ.ನಗರದಲ್ಲಿ ಕತ್ತಲಾಗುತ್ತಿದ್ದಂತೆ ಮನೆಗಳ ಮೇಲೆ ಕಲ್ಲು (Stone) ತೂರಲಾಗುತ್ತಿದೆ. ಇದರಿಂದ ಹಲವು ಮನೆಗಳ ಹೆಂಚು, ಶೀಟ್‌ ಹಾನಿಯಾಗಿದೆ. ರಿಪೇರಿ ಮಾಡಿಸಿ ಮನೆಯವರು ಹೈರಾಣಾಗಿದ್ದಾರೆ. ಕಲ್ಲು ತೂರಾಟದಿಂದಾಗಿ ಮನೆಯಲ್ಲಿರುವವರು  ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಅಂದಾನಮ್ಮ ಎಂಬುವವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಎಫ್‌ಐಆರ್‌ ದಾಖಲಿಸುವಂತೆ ಆದೇಶಿಸಲಾಗಿದೆ.

ಇದನ್ನೂ ಓದಿ – ಹೊಸಮನೆಯಲ್ಲಿರುವ ಮಗನ ಮನೆಯಲ್ಲಿ ರಾತ್ರಿ ಉಳಿದಿದ್ದ ತಂದೆ, ಬೆಳಗೆದ್ದು ಬಾಗಿಲು ತೆಗೆದಾಗ ಕಾದಿತ್ತು ಶಾಕ್

ದೊಡ್ಡಪೇಟೆ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ‌

Leave a Comment