ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಎನ್ನುವಂತಿದೆ ಈ ರಸ್ತೆಯ ಡಿವೈಡರ್ ಮೇಲಿರುವ ಬೀದಿ ದೀಪಗಳ (Street Light) ಸ್ಥಿತಿ. ಮೆಸ್ಕಾಂನ ಕಾರ್ಯ ಮತ್ತು ಪಾಲನ ಕಚೇರಿ ಮುಂಭಾಗದಲ್ಲಿಯೆ ಇರುವ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ.
ಶಿವಮೊಗ್ಗದ ಸರ್ವಜ್ಞ ವೃತ್ತದಲ್ಲಿ ಬೀದಿ ದೀಪ ಬೆಳಗದೆ ತಿಂಗಳುಗಳೆ ಉರುಳಿವೆ. ವಾಹನಗಳ ಹೆಡ್ಲೈಟ್ನಿಂದಷ್ಟೆ ಈ ರಸ್ತೆಯಲ್ಲಿ ಬೆಳಕು ಕಾಣುತ್ತಿದೆ.
ಹಗಲು ರಾತ್ರಿ ವಾಹನ ಸಂಚಾರ
ಸರ್ವಜ್ಞ ವೃತ್ತ ಶಿವಮೊಗ್ಗದ ರೈಲ್ವೆ ನಿಲ್ದಾಣ, ಬಾಲರಾಜ ಅರಸ್ ರಸ್ತೆ, ಹೊನ್ನಾಳಿ ರಸ್ತೆ, ಶಂಕರಮಠ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಮುಖ ರಸ್ತೆಗಳು ಕೂಡುವುದರಿಂದ ಮತ್ತು ರೈಲ್ವೆ ನಿಲ್ದಾಣ ಇರುವುದಿಂದ ಇಲ್ಲಿ ರಾತ್ರಿ ವೇಳೆಯು ಜನ, ವಾಹನ ಸಂಚಾರ ಇರುತ್ತದೆ. ಆದರೆ ಈ ಸರ್ಕಲ್ ಮತ್ತು ರಸ್ತೆಯಲ್ಲಿ ಸಂಜೆಯಾಗುತ್ತಿದ್ದಂತೆ ಕಡು ಕತ್ತಲು ಅವರಿಸುತ್ತದೆ.

ಸರ್ವಜ್ಞ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಸಾಗುವ ಮಾರ್ಗದಲ್ಲಿ ಡಿವೈಡರ್ ಮೇಲಿರುವ ಬೀದಿ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸರ್ಕಲ್ನಿಂದ ಈ ರಸ್ತೆ ಶುರುವಿನಲ್ಲಿರುವ ಮೊದಲ ಕಂಬದಲ್ಲಿ ಬೆಳಕು ಕಾಣದೆ ತಿಂಗಳುಗಳೇ ಕಳೆದಿವೆ. ಇದರ ಅಡಿಯಲ್ಲೇ ರಸ್ತೆ ಗುಂಡಿಮಯವಾಗಿದೆ. ಕತ್ತಲಲ್ಲಿ ಗುಂಡಿಗಳ ಆಳ, ಅಗಲ ಅಂದಾಜಿಸುವುದು ವಾಹನ ಸವಾರರಿಗೆ ಸವಾಲಾಗಿದೆ. ವಾಹನದ ಹೆಡ್ ಲೈಟ್ ಗಟ್ಟಿ ಇದ್ದರೆ ಕೈ, ಕಾಲು ಗಟ್ಟಿಯಾಗಿ ಉಳಿಸಿಕೊಳ್ಳಬಹುದಾಗಿದೆ.
ಲೈಟ್ ಹಾಕದೆ ಇದ್ದ ಮೇಲೆ ಈ ಕಂಬಗಳು ಯಾಕೆ ನೆಟ್ಟಿದ್ದಾರೆ. ಗುಂಡಿಗಳನ್ನು ಮುಚ್ಚಲ್ಲ, ಲೈಟುಗಳನ್ನು ಹಾಕುವುದಿಲ್ಲ ಎಂದಾದರೆ ಈ ಅಧಿಕಾರಿಗಳ್ಯಾಕೆ ಬೇಕು. ರೈಲ್ವೆ ಸ್ಟೇಷನ್ಗೆ ರಾತ್ರಿ, ಬೆಳಗಿನ ಜಾವ ಪ್ರಯಾಣಿಕರು ನಡೆದು ಬರುತ್ತಾರೆ. ಏನಾದರು ಹೆಚ್ಚು ಕಡಿಮೆಯಾದರೆ ಜವಾಬ್ದಾರಿ ಯಾರು?
- ಇಕ್ಬಾಲ್, ಆಟೋ ಚಾಲಕ
![]()
ಕಳೆದ ಮೂರ್ನಾಲ್ಕು ದಿನದಿಂದ ಈ ರಸ್ತೆಯ ಎಲ್ಲ ಬೀದಿ ದೀಪಗಳು ಕಾರ್ಯ ನಿಲ್ಲಿಸಿವೆ. ನಿತ್ಯ ಸಾವಿರಾರು ಜನರು, ವಾಹನಗಳು ಓಡಾಡುವ ರಸ್ತೆಯಲ್ಲಿ ಇಂತಹ ದುಸ್ಥಿತಿ ಇರುವುದು ವಿಪರ್ಯಾಸ.



Street Light
LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು















