70 ಕಿ.ಮೀ ದೂರದಿಂದ ಬಂದು ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಕನ್ನಡ ಶಿಕ್ಷಕರನ್ನು ಒದಗಿಸಿ ಎಂದು ಆಗ್ರಹಿಸಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು (Students) 70 ಕಿ.ಮೀ ದೂರದಿಂದ ಬಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕನ್ನಡ, ಇಂಗ್ಲೀಷ್‌ ಬರೆಯಲು ಬಾರದ ಉರ್ದು ಶಿಕ್ಷಕರಿಂದ ಕನ್ನಡ ಪಾಠ ಮಾಡಿಸಲು ಮುಂದಾಗಿರುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹೊಸನಗರದ ಜೂನಿಯರ್‌ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಿದರು.

ವಿದ್ಯಾರ್ಥಿಗಳ ಮನವಿಯಲ್ಲಿ ಏನಿದೆ?

ಶಾಲೆಯಲ್ಲಿ 365 ವಿದ್ಯಾರ್ಥಿಗಳು ಇದ್ದೇವೆ. ಇಬ್ಬರು ಕನ್ನಡ ಶಿಕ್ಷಕರು, ಒಬ್ಬರು ಉರ್ದು ಶಿಕ್ಷಕರಿದ್ದಾರೆ. ಹೆಚ್ಚುವರಿ ಹುದ್ದೆ ಎಂದು ಒಬ್ಬ ಕನ್ನಡ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತಿದೆ. ಉರ್ದು ಶಿಕ್ಷಕರಿಂದಲೇ ಕನ್ನಡ ಮತ್ತು ಇಂಗ್ಲೀಸ್‌ ಮಾಧ್ಯಮಕ್ಕೆ ಪಾಠ ಮಾಡಿಸಲು ಯೋಜಿಸಲಾಗಿದೆ. ಉರ್ದು ಶಿಕ್ಷಕರಿಗೆ ಕನ್ನಡ ಮತ್ತು ಇಂಗ್ಲೀಷ್‌ ಬರುವುದಿಲ್ಲ. ಇದರಿಂದ ನಮಗೆ ಸಮಸ್ಯೆಯಾಗಲಿದೆ ಎಂದು ವಿದ್ಯಾರ್ಥಿಗಳು ಮನವಿಯಲ್ಲಿ ತಿಳಿಸಿದ್ದಾರೆ.

Hosanagara-Students-protest-in-Shimoga

ಜಿಲ್ಲಾಧಿಕಾರಿ ಹೇಳಿದ್ದೇನು?

ವಿದ್ಯಾರ್ಥಿಗಳ ಮನವಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆಗೆ ಚರ್ಚೆ ನಡೆಸಲಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಅವರಿಗೆ ಯಾವೆಲ್ಲ ಸಹಾಯ ಮಾಡಲು ಸಾಧ್ಯವಿದೆಯೊ ಎಲ್ಲವನ್ನು ಮಾಡಲಿದ್ದೇವೆ ಎಂದರು.

Prashanth-Loan-Advertisement.

ಇದನ್ನೂ ಓದಿ » ವಾಹನ ಡಿಕ್ಕಿಯಾಗಿ ಏಳು ತಿಂಗಳ ಚಿರತೆ ಸಾವು, ಎಲ್ಲಿ?

Students protest for kannada teachers

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 11, 2025

Leave a Comment