ಶಿವಮೊಗ್ಗದ ಸುಬ್ಬಯ್ಯ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ನಿಧನ, ಗಣ್ಯರಿಂದ ಸಂತಾಪ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

NEWS HIGHLIGHTS
SHIMOGA NEWS, 5 NOVEMBER 2024 : ಸುಬ್ಬಯ್ಯ ಆಸ್ಪತ್ರೆಗಳ (Hospital) ಸಮೂಹದ ಅಧ್ಯಕ್ಷ ಟಿ.ಸುಬ್ಬರಾಮಯ್ಯ (88) ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ ಟಿ. ಸುಬ್ಬರಾಮಯ್ಯ ಅವರು ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಗುತ್ತಿಗೆದಾರರು, ಕೃಷಿಕರಾಗಿದ್ದ ಟಿ.ಸುಬ್ಬರಾಮಯ್ಯ 2003ರಲ್ಲಿ ಸುಬ್ಬಯ್ಯ ಟ್ರಸ್ಟ್‌ ಆರಂಭಿಸಿ, ಆಸ್ಪತ್ರೆಗಳನ್ನು ಶುರು ಮಾಡಿದ್ದರು. ಬಳಿಕ ಸುಬ್ಬಯ್ಯ ಮೆಡಿಕಲ್‌ ಕಾಲೇಜು, ಡೆಂಟಲ್‌ ಕಾಲೇಜು, ಮ್ಯಾಕ್ಸ್‌ ಆಸ್ಪತ್ರೆಗಳನ್ನು ಸ್ಥಾಪಿಸಿದ್ದರು. ಸುಬ್ಬರಾಮಯ್ಯ ಅವರ ಪುತ್ರ ಡಾ. ನಾಗೇಂದ್ರ ಅವರು ಸುಬ್ಬಯ್ಯ ಆಸ್ಪತ್ರೆಗಳ ಸಮೂಹದ ಎಂ.ಡಿ. ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

T.-Subbaramaiah-breathed-last-in-Shimoga-Subbaiah-Hospital

ಹಲವು ಗಣ್ಯರಿಂದ ಸಂತಾಪ

ಟಿ.ಸುಬ್ಬರಾಮಯ್ಯ ಅವರ ನಿಧನಕ್ಕೆ ಶಿವಮೊಗ್ಗದ ಪ್ರಮುಖರು, ರಾಜಕಾರಣಿಗಳು, ವೈದ್ಯರು ಸಂತಾಪ ಸೂಚಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ವೈದ್ಯಕೀಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ನಗರದ ಉದ್ಯಮ ವಲಯಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇವರ ಅಗಲಿಕೆಯಿಂದ ಶಿವಮೊಗ್ಗ ನಗರದಲ್ಲಿ ಒಬ್ಬ ಅತ್ಯುತ್ತಮ ಉದ್ಯಮಿಯನ್ನು ಕಳೆದುಕೊಂಡು ಉದ್ಯಮ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ.

ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

T.-Subbaramaiah-breathed-last-in-Shimoga-Subbaiah-Hospital

RED-LINE-

2003ರಲ್ಲಿ ತಡೀಕಲ್‌ ಸುಬ್ಬಯ್ಯ ಟ್ರಸ್ಟ್‌ ಆರಂಭಿಸಿ, ಅನೇಕ ವೈದ್ಯರಿಗೆ ಮಾರ್ಗದರ್ಶಕರಾಗಿದ್ದಾರೆ. ಸುಬ್ಬರಾಮಯ್ಯ ಅವರ ನಿಧನದಿಂದ ವೈದ್ಯಕೀಯ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ.

ಬಿ.ವೈ.ರಾಘವೇಂದ್ರ, ಸಂಸದ

RED-LINE-

ಇದನ್ನೂ ಓದಿ » ಕುಂಸಿ, ಆಯನೂರು ಸುತ್ತಮುತ್ತ ನಾಳೆ ಇಡೀ ದಿನ ಕರೆಂಟ್‌ ಇರಲ್ಲ

Subbaiah hospital chairman T. Subbaramaiah breathed last in Shimoga Maxx Hospital. 

Leave a Comment

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!