ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 JUNE 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಲೋಕಾಯುಕ್ತ ಅಧಿಕಾರಿಗಳ ತಂಡ ಇವತ್ತು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ದಿಢೀರ್ ಪರಿಶೀಲನೆ (Sudden Checking) ನಡೆಸಿತು. ಎಲ್ಲೆಂದರಲ್ಲಿ ಕಸ, ಡ್ರೈನೇಜ್ ನೀರು ನಿಂತಿರುವುದನ್ನು ಕಂಡು ಲೋಕಾಯುಕ್ತ ಅಧಿಕಾರಿಗಳು ಸ್ವಚ್ಛತೆ ಮಾಡಿಸುವಂತೆ ಸೂಚನೆ ನೀಡಿದರು.
ಎಲ್ಲೆಲ್ಲಿ ಪರಿಶೀಲನೆ ನಡೆಸಿದರು?
ಶಿವಮೊಗ್ಗದ ಬುದ್ದನಗರ, ಆರ್.ಎಂ.ಎಲ್ ನಗರ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ಹರಕೆರೆ, ನ್ಯೂ ಮಂಡ್ಲಿ, ಊರುಗಡೂರು, ಮದಾರಿ ಪಾಳ್ಯ, ವಿದ್ಯಾನಗರ, ರಾಜೀವ್ ಗಾಂಧಿ ಬಡಾವಣೆ, ಟ್ಯಾಂಕ್ ಮೊಹಲ್ಲಾ, ಶಾಂತಿನಗರ, ರಾಗಿಗುಡ್ಡ, ಶಾಂತಿನಗರ, ನವುಲೆ ಮುಖ್ಯ ರಸ್ತೆ ಚಾನೆಲ್ ಬಳಿ, ಮ್ಯಾಕ್ಸ್ ಆಸ್ಪತ್ರೆ ಪಕ್ಕದಲ್ಲಿರುವ ಕನ್ಸರ್‌ವೆನ್ಸಿ ರಸ್ತೆ ಹಾಗೂ ಇತರೆಡೆ ಪರಿಶೀಲಿಸಿದರು. ನಂತರ ಸಾಗರ ರಸ್ತೆ ಬಿ.ಎಸ್.ಎನ್.ಎಲ್ ಕಛೇರಿ ಬಳಿ ಇರುವ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಮತ್ತು ನಗರ ಸ್ವಚ್ಚತೆ ಬಗ್ಗೆ ಪರಿಶೀಲಿಸಿದರು.
ಎಲ್ಲೆಂದರಲ್ಲಿ ಕಸ, ಡ್ರೈನೇಜ್ ನೀರು
ಪರಿಶೀಲನೆ ವೇಳೆ ಎಲ್ಲೆಂದರಲ್ಲಿ ಡ್ರೈನೇಜ್ ನೀರು ಸಂಗ್ರಹವಾಗಿರುವುದು. ರಸ್ತೆಯ ಅಕ್ಕಪಕ್ಕದಲ್ಲಿ ರಾಶಿ ರಾಶಿ ಕಸ ಬಿದ್ದಿರುವುದು, ಖಾಲಿ ಜಾಗದಲ್ಲಿ ಗಿಡ ಬೆಳೆದು ಹಂದಿಗಳು ವಾಸ ಮಾಡಿಕೊಂಡು ಗಲೀಜು ಮಾಡಿರುವುದು. ಹಲವು ದಿನದಿಂದ ರಸ್ತೆಗಳಲ್ಲಿ ಬಿದ್ದಿ ಕಸ ತೆರವು ಮಾಡದಿರುವುದು ಕಂಡು ಲೋಕಾಯುಕ್ತ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೆ ಇವೆಲ್ಲವನ್ನು ಸ್ವಚ್ಛಗೊಳಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಮಂಜುನಾಥ್ ಚೌದರಿ ಎಲ್ಲೆಡೆ ಪರಿಶೀಲಿಸಿದರು. ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ಈಶ್ವರ ನಾಯ್ಕ, ನಿರೀಕ್ಷಕರಾದ ಸುರೇಶ್ ಹೆಚ್.ಎಸ್, ಪ್ರಕಾಶ್, ವೀರಬಸಪ್ಪ ಎಲ್ ಕುಸಲಾಪುರ ಮತ್ತು ಸಿಬ್ಬಂದಿ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು. ಮಹಾನಗರ ಪಾಲಿಕೆ ಕಮಿಷನರ್ ಮಾಯಣ್ಣಗೌಡ, ಅಧಿಕಾರಿ, ಸಿಬ್ಬಂದಿ, ಇಂಜಿನಿಯರ್‌ಗಳು, ವಾರ್ಡ್ ಆರೋಗ್ಯ ನಿರೀಕ್ಷಕರು ಇದ್ದರು.
ಇದನ್ನೂ ಓದಿ – ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣ ವೇಳಾಪಟ್ಟಿ ಪ್ರಕಟ, ಯಾವಾಗ ನಡೆಯುತ್ತೆ ಮತದಾನ?