ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 APRIL 2023
SHIMOGA : ದಿನೇ ದಿನೆ ಬಿಸಿಲ ಝಳ ಹೆಚ್ಚುತ್ತಿದ್ದು ಮಲೆನಾಡು ಕಾದ ಕಾವಲಿಯಂತಾಗಿದೆ (Summer). ಜಿಲ್ಲೆಯ ವಿವಿಧೆಡೆ ಮಳೆಯಾದರೂ ತಾಪಮಾನ ತಗ್ಗಿಲ್ಲ. ಬಿಸಿಲು, ಧಗೆಯಿಂದ ಕಂಗೆಟ್ಟಿರುವುವ ಜನರು ತಂಪು ಪಾನಿಯಗಳ ಮೊರೆ ಹೋಗುತ್ತಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗುತ್ತಲೆ ಇದೆ. ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ರಿಂದ 39 ಡಿಗ್ರಿವರೆಗೆ ತಲುಪಿದೆ. ಬಿಸಿಲು ಇನ್ನಷ್ಟು ಹೆಚ್ಚಬಹುದು ಎಂಬ ಆತಂಕ ಜನರಲ್ಲಿದೆ. ಮನೆ, ಕಟ್ಟಡಗಳಿಂದ ಹೊರ ಬರಲು ಜನರು ಹೆದರುವಂತಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಶಿವಮೊಗ್ಗ ಚೆಕ್ಪೋಸ್ಟ್ನಲ್ಲಿ ಈತನಕ ಏನೆಲ್ಲ ಸೀಜ್ ಆಗಿದೆ? ಎಷ್ಟು ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ?
ವರುಣದೇವನಿಗೆ ಮೊರೆ
ಬಿಸಲ ಧಗೆ ಹೆಚ್ಚುತ್ತಿದ್ದಂತೆ ಬೇಸಿಗೆ (Summer) ಮಳೆಯಾಗಲಿದೆ. ಶಿವಮೊಗ್ಗ ಜಿಲ್ಲೆಯ ಕೆಲವು ಕಡೆ ಮಾತ್ರ ಕೆಲವು ಹೊತ್ತು ಮಳೆಯಾಗಿದೆ. ಹಾಗಾಗಿ ಉಷ್ಣಾಂಶ ಮತ್ತಷ್ಟು ಹೆಚ್ಚಾಗಿದೆ. ಗಾಳಿಯು ಬೀಸದಿರುವುದರಿಂದ ಧಗೆ ಇದೆ. ಜನರು ಫ್ಯಾನು, ಎಸಿ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ಮಳೆಯಾಗಲಿ ಎಂದು ದೇವರ ಪ್ರಾರ್ಥಿಸುತ್ತಿದ್ದಾರೆ.
ತಂಪು ಪಾನಿಯಗಳಿಗೆ ಡಿಮಾಂಡ್
ಬಿಸಿಲ ಧಗೆಗೆ ಕಂಗೆಟ್ಟಿರುವ ಜನರು ತಂಪು ಪಾನಿಯಗಳ ಮೊರೆ ಹೋಗಿದ್ದಾರೆ. ಕೂಲ್ ಡ್ರಿಂಗ್ಸ್, ಜ್ಯೂಸ್ ಸೆಂಟರ್, ಐಸ್ ಕ್ರೀಂ ಪಾರ್ಲರ್ಗಳಲ್ಲಿ ಹೆಚ್ಚು ಜನರನ್ನು ಕಾಣಬಹುದಾಗಿದೆ. ಎಳೆನೀರಿಗೆ ಫುಲ್ ಡಿಮಾಂಡ್ ಬಂದಿದೆ.