ಶಿವಮೊಗ್ಗದ NH ಆಸ್ಪತ್ರೆಯಲ್ಲಿ ಸರ್ವೈವರ್ಸ್‌ ಕ್ಲಿನಿಕ್‌, ಜು.17ರಂದು ಕ್ಯಾನ್ಸರ್‌ ಬಗ್ಗೆ ಮಹತ್ವದ ಚರ್ಚೆ, ಏನಿದು ಕ್ಲಿನಿಕ್‌?

CLINIC

ಶಿವಮೊಗ್ಗ: ಕ್ಯಾನ್ಸರ್ ಗೆದ್ದವರಿಗಾಗಿ ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೆಡಿಕಲ್ ಅಂಕೂಲಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಅವರು ಸರ್ವೈವರ್ಸ್‌ ಕ್ಲಿನಿಕ್ (Clinic) ಆರಂಭಿಸಿದ್ದಾರೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ » ಸಿಗಂದೂರು ಲಾಂಚ್‌ಗಳು ಇನ್ಮುಂದೆ ತೇಲುವ ಹೊಟೇಲ್, ಯೋಜನೆ ಮಾಹಿತಿ ನೀಡಿದ ಎಂಎಲ್‌ಎ

ಜುಲೈ 17ರಂದು ಈ ಕ್ಲಿನಿಕ್ ನಡೆಯಲಿದೆ. ಮುಂದೆ ಪ್ರತಿ ತಿಂಗಳ 3ನೇ ಗುರುವಾರದಂದು ಕ್ಲಿನಿಕ್ ಇರಲಿದೆ. ಕ್ಯಾನ್ಸರ್ ರೋಗಿಗಳ ಚೇತರಿಕೆ ಹಾಗೂ ಆರೈಕೆ ದೃಷ್ಟಿಯಿಂದ ಕ್ಲಿನಿಕ್‌ ಆರಂಭಿಸಲಾಗಿದೆ. ಆರೋಗ್ಯಕರ ಜೀವನ, ಫಿಸಿಯೋಥೆರಪಿ ಮತ್ತು ಭಾವನಾತ್ಮಕ ಯೋಗಕ್ಷೇಮದಂತಹ ಪ್ರಮುಖ ವಿಷಯಗಳ ಕುರಿತು ತಜ್ಞರು ಮಾತನಾಡಲಿದ್ದಾರೆ.

Sahyadri-Narayana-Multispeciality-hospital-NH-Hospital.

ಜುಲೈ 17ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆವರಣದಲ್ಲಿ ಎಂಡೋಕ್ರೈನಾಲೋಜಿಸ್ಟ್ ಡಾ. ಸುಜನ್ ಆರ್.ಮುದದೇವಣ್ಣನವರ್, ‘ಕ್ಯಾನ್ಸರ್ ಚಿಕಿತ್ಸೆ ವೇಳೆ ಮಧುಮೇಹ ನಿರ್ವಹಣೆ: ಕ್ಯಾನ್ಸರ್ ಗೆದ್ದವರು ಮತ್ತು ರೋಗಿಗಳು ಏನು ತಿಳಿಯಬೇಕುʼ ಕುರಿತು ಮಾಹಿತಿ ನೀಡಲಿದ್ದಾರೆ. ಆಸಕ್ತರು ದೂರವಾಣಿ ಸಂಖ್ಯೆ 18003090309 ಸಂಪರ್ಕಿಸಿ ಅಥವಾ ಎನ್ ಎಚ್ ಕೇರ್ ಆಪ್ ಬಳಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Comment