ಶಿವಮೊಗ್ಗದ ಬಿಜೆಪಿ ಸಮಾವೇಶದಲ್ಲಿ ತಮಿಳುನಾಡು ನಾಡಗೀತೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 27 APRIL 2023

ELECTION NEWS : ಬಿಜೆಪಿ ಸಮಾವೇಶದಲ್ಲಿ ತಮಿಳುನಾಡಿನ ನಾಡಗೀತೆ (State Anthem) ಪ್ರಸಾರ ಮಾಡಲಾಗಿದೆ. ಕೂಡಲೆ ಮಧ್ಯೆ ಪ್ರವೇಶಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮಿಳುನಾಡು ನಾಡಗೀತೆಯನ್ನು ಅರ್ಧಕ್ಕೆ ನಿಲ್ಲಿಸಿದರು.

Tamil-Anthem-Played-in-BJP-samavesha-at-Shimoga

ಶಿವಮೊಗ್ಗದ ಎನ್‌ಇಎಸ್‌ ಮೈದಾದನಲ್ಲಿ  ತಮಿಳು ಸಮುದಾಯದ ಸಮಾವೇಶ ಆಯೋಜಿಸಲಾಗಿತ್ತು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಾಮಾವೇಶ ಆರಂಭವಾಗುತ್ತಿದ್ದಂತೆ ತಮಿಳುನಾಡು ನಾಡಗೀತೆ (State Anthem) ಪ್ರಸಾರ ಮಾಡಲಾಯಿತು.

ಅರ್ಧಕ್ಕೆ ತಡೆದ ಈ‍ಶ್ವರಪ್ಪ

ಸಮಾವೇಶ ಆರಂಭವಾಗುತ್ತಿದ್ದಂತೆ ಆಯೋಜಕರು ನಾಡಗೀತೆ ಪ್ರಸರವಾಗಲಿದೆ ಎಂದು ಘೋಷಿಸಿದರು. ವೇದಿಕೆ ಮೇಲಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಎಸ್‌.ಎನ್.ಚನ್ನಬಸಪ್ಪ, ಸೇರಿದಂತೆ ಬಿಜೆಪಿ ಪಾದಾಧಿಕಾರಿಗಳು ಕೂಡ ಎದ್ದು ನಿಂತರು.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಏ.28ಕ್ಕೆ ಬರಲಿದೆ ವಿಶೇಷ ವಿಮಾನ, ಬರ್ತಿರೋದ್ಯಾರು?

ತಮಿಳುನಾಡು ನಾಡಗೀತೆ ಪ್ರಸಾರ ಮಾಡಲಾಯಿತು. ಕೂಡಲೆ ಈಶ್ವರಪ್ಪ ಅವರು ಮೈಕ್‌ ಬಳಿ ತೆರಳಿ, ತಮಿಳು ನಾಡಗೀತೆಯನ್ನು ನಿಲ್ಲಿಸುವಂತೆ ಸೂಚಿಸಿದರು. ಅಲ್ಲದೆ ಯಾರಾದರೂ ಬಂದ ನಾಡಗೀತೆ ಹಾಡಿ ಎಂದು ತಿಳಿಸಿದರು. ಬಳಿಕ ಕರ್ನಾಟಕದ ನಾಡಗೀತೆಯನ್ನು ಹಾಕಲಾಯಿತು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 27, 2023

Leave a Comment