ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 FEBRUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ಸಭೆ ನಡೆಸಲಾಯಿತು. ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅಧಿಕಾರಿಗಳಿಗೆ ತಹಶೀಲ್ದಾರ್ ಗಿರೀಶ್ ಅವರು ವಿವಿಧ ಸೂಚನೆ ನೀಡಿದರು. ನಾಲ್ಕು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ.
ಪಲ್ಸ್ ಪೋಲಿಯೋ ಲಸಿಕೆ
ಮಾರ್ಚ್ 3 ರಂದು ಶಿವಮೊಗ್ಗ ತಾಲ್ಲೂಕಿನ 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು. ಒಟ್ಟು 37,829 ಮಕ್ಕಳಿದ್ದಾರೆ. ಗ್ರಾಮಾಂತರದಲ್ಲಿ 17,611 ಮಕ್ಕಳಿದ್ದಾರೆ. 106 ಬೂತ್ಗಳಲ್ಲಿ ಹಾಗೂ ನಗರ ಭಾಗದಲ್ಲಿ 20,218 ಮಕ್ಕಳಿದ್ದು 116 ಬೂತ್ಗಳಲ್ಲಿ ಪಲ್ಸ್ ಪೊಲೀಯೋ ಹನಿ ಹಾಕಲಾಗುವುದು ಎಂದು ತಹಶೀಲ್ದಾರ ಗಿರೀಶ್ ತಿಳಿಸಿದರು.
ರಸ್ತೆ ಕೆಲಸ, ಕಲ್ಲು ಕ್ವಾರೆ, ಕುರಿ ಕಾಯುವವರು, ಇಟ್ಟಿಗೆ ಗೂಡು, ವಲಸೆ ಬಂದವರು ಹೀಗೆ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು. ಈ ಬಗ್ಗೆ ಹೆಚ್ಚಿನ ಪ್ರಚಾರ ಮತ್ತು ಅರಿವು ಮೂಡಿಸಲು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕಸದ ವಾಹನಗಳಲ್ಲಿ, ಧ್ವನಿ ವರ್ಧಕಗಳ ಮುಖಾಂತರ ಜನರಲ್ಲಿ ಅರಿವು ಮಾಡಿಸುವಂತೆ ತಿಳಿಸಿದರು.
ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮ
ಫೆ.27 ರಂದು 1 ವರ್ಷದಿಂದ 19 ವರ್ಷದೊಳಗಿನ ಅಂಗನವಾಡಿ, ಶಾಲಾ-ಕಾಲೇಜು, ಹಾಗೂ ಶಾಲೆ ಬಿಟ್ಟ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುವುದು. ಜಂತುಹುಳು ನಿವಾರಕ ಮಾತ್ರೆ (ಆಲ್ಬೆಂಡಜಾಲ್) ನೀಡುವುದರಿಂದ ಮಕ್ಕಳಲ್ಲಿನ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟಬಹುದಾಗಿದೆ. ಜೊತೆಗೆ ವೈಯಕ್ತಿಕ ಸ್ವಚ್ಚತೆ, ಕೈ ತೊಳೆಯುವ ವಿಧಾನಗಳ ಬಗ್ಗೆ ಅಂಗನವಾಡಿ, ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ನೀಡುವಂತೆ ಎಲ್ಲಾ ಆರೋಗ್ಯ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಆಲ್ಬೆಂಡಜಾಲ್ ಮಾತ್ರೆ ವಿತರಣೆ ಮಾಡುವ ಸಮಯದಲ್ಲಿ ಅಂಗನವಾಡಿ ಶಾಲಾ, ಕಾಲೇಜು ಸಿಬ್ಬಂದಿಗಳು ನಿಗಾವಹಿಸಿ ತಮ್ಮ ಎದುರೇ ಮಾತ್ರೆ ನೀಡಬೇಕು ತಹಶೀಲ್ದಾರ್ ಗಿರೀಶ್ ಎಂದರು.
ತಂಬಾಕು ನಿಯಂತ್ರಣ ಕಾರ್ಯಕ್ರಮ
ತಾಲ್ಲೂಕಿನ ಶಾಲಾ ಕಾಲೇಜುಗಳ ಸುತ್ತಮುತ್ತ ನೂರು ಗಜ ಅಂತರದೊಳಗೆ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಅವರು ಸೂಚನೆ ನೀಡಿದರು.
ಕೋಟ್ಪಾ ಕಾಯ್ದೆಯ ಮಾರ್ಗಸೂಚಿಗಳನ್ನು ಪಾಲಿಸದೇ ಇರುವ ಅಂಗಡಿ ಮಾಲೀಕರಿಗೆ 100 ರೂ. ನಿಂದ 1000 ರೂ.ವರೆಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಶಾಲಾ, ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಯಂತ್ರಣದ ಬಗ್ಗೆ ಅರಿವು ಮೂಡಿಸುವಂತೆ ತಹಶೀಲ್ದಾರ್ ಗಿರೀಶ್ ತಿಳಿಸಿದರು.
ತಾಲೂಕಿನಲ್ಲಿ ಕೆಎಫ್ಡಿ ಮುಂಜಾಗ್ರತೆ
ಕೆಎಫ್ಡಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತಾಲ್ಲೂಕಿನಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ಆಶಾ ಕಾರ್ಯಕರ್ತೆಯರ ಕುಂದುಕೊರತೆ ಬಗ್ಗೆ ಆಲಿಸಿದರು.
29 ತಂಬಾಕು ದಾಳಿ, 405 ಕೇಸ್
ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಜಿ.ಬಿ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 29 ತಂಬಾಕು ದಾಳಿ ನಡೆಸಿ 405 ಪ್ರಕರಣಗಳಲ್ಲಿ 35,600 ರೂ.ಗಳನ್ನು ದಂಡ ವಸೂಲಿ ಮಾಡಲಾಗಿದೆ. ತಂಬಾಕು ವ್ಯಸನ ಬಿಡುವವರು ಮೆಗ್ಗಾನ್ ಆಸ್ಪತ್ರೆಯ ರೂಂ ನಂ.19 ರಲ್ಲಿರುವ ವ್ಯಸನ ಮುಕ್ತ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದರು.
ಸಭೆಯಲ್ಲಿ ಆರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
ಇದನ್ನೂ ಓದಿ – ಇನ್ಮುಂದೆ ಶಿವಮೊಗ್ಗದ ಜನರಿಗು ತಟ್ಟಲಿದೆ ಟೋಲ್ ಬಿಸಿ, 2 ಕಡೆ ಟೋಲ್ ಪ್ಲಾಜಾ ರೆಡಿ, ಎಲ್ಲೆಲ್ಲಿದೆ? ಪರಿಣಾಮಗಳೇನು?