ಶಿವಮೊಗ್ಗ ರಂಗಾಯಣಕ್ಕೆ ತಂತ್ರಜ್ಞರು, ಕಲಾವಿದರ ನೇಮಕಕ್ಕೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ: ರಂಗಾಯಣದ ಶಿವಮೊಗ್ಗ ವಿಭಾಗಕ್ಕೆ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ 3 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ತಾತ್ಕಾಲಿಕವಾಗಿ ನೇಮಕ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ತಂತ್ರಜ್ಞರ ನೇಮಕ ವಿವರ

ಸಂಗೀತ, ಧ್ವನಿ-ಬೆಳಕು ಮತ್ತು ರಂಗಸಜ್ಜಿಕೆ-ವಸ್ತ್ರ ವಿಭಾಗಕ್ಕೆ ಒಟ್ಟು 3 ಜನ ತಂತ್ರಜ್ಞರನ್ನು ನೇಮಿಸಿಕೊಳ್ಳಲಾಗುತ್ತದೆ. ಪ್ರತಿ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ರಂಗಾನುಭವ ಹಾಗೂ ಕನ್ನಡ ಭಾಷೆ ಓದುವ, ಬರೆಯುವ ಮತ್ತು ಗ್ರಹಿಸುವ ಸಾಮರ್ಥ್ಯವಿರಬೇಕು. ಶೈಕ್ಷಣಿಕ ಹಾಗೂ ರಂಗಶಿಕ್ಷಣದ ಅರ್ಹತೆ ಇದ್ದವರಿಗೆ ಆದ್ಯತೆ ನೀಡಲಾಗುತ್ತದೆ. ತಂತ್ರಜ್ಞರಿಗೆ ಮಾಸಿಕ ₹25,000 ಕ್ರೋಢಿಕೃತ ವೇತನ ನೀಡಲಾಗುತ್ತದೆ. ವಯಸ್ಸಿನ ಮಿತಿ ಇರುವುದಿಲ್ಲ.

Shimoga-Rangayana-Kannada-Samskruti-Bhavana

ಕಲಾವಿದರ ನೇಮಕ ಇಲ್ಲಿದೆ ಪಾಯಿಂಟ್ಸ್‌

ಒಟ್ಟು 12 ಜನ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಇದರಲ್ಲಿ ಕನಿಷ್ಠ 4 ಮಹಿಳೆಯರಿಗೆ ಹಾಗೂ 4 ಎಸ್‌ಸಿ/ಎಸ್‌ಟಿ ಕಲಾವಿದರಿಗೆ ಮೀಸಲಾತಿ ಇದೆ. ಶೇ.50ರಷ್ಟು ಹುದ್ದೆಗಳು ಪ್ರಾದೇಶಿಕ ವಲಯದ ಕಲಾವಿದರಿಗೆ ಮೀಸಲಾಗಿವೆ.

ಆಯ್ದ ಕಲಾವಿದರಿಗೆ ಮೊದಲ ವರ್ಷ ಮಾಸಿಕ ₹18,000 ಹಾಗೂ ಈಗಾಗಲೇ ರಂಗಾಯಣದಲ್ಲಿ ಕೆಲಸ ಮಾಡಿರುವವರಿಗೆ ₹20,000 ವೇತನ ನೀಡಲಾಗುತ್ತದೆ.

2026ರ ಆಗಸ್ಟ್‌ 7ಕ್ಕೆ ಅನ್ವಯವಾಗುವಂತೆ ಕಲಾವಿದರ ವಯಸ್ಸು ಕನಿಷ್ಠ 18 ಹಾಗೂ ಗರಿಷ್ಠ 32 ವರ್ಷ ಮೀರಿರಬಾರದು. ಪಾರಂಪರಿಕ ಕಲಾ ಕುಟುಂಬದವರಿಗೆ 5 ವರ್ಷ ಸಡಿಲಿಕೆ ಇದೆ ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ ಆಗಸ್ಟ್‌ 20ರ ಸಂಜೆ 5:30ರೊಳಗೆ ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಹೆಲಿಪ್ಯಾಡ್ ಹಿಂಭಾಗ, ಶಿವಮೊಗ್ಗ-577201 ವಿಳಾಸಕ್ಕೆ ಖುದ್ದಾಗಿ, ಅಂಚೆ ಮೂಲಕ ಅಥವಾ admn.rangayanashivamogga@gmail.com ಇ-ಮೇಲ್ ಮೂಲಕ ಸಲ್ಲಿಸಬಹುದು. ಫೇಸ್‌ಬುಕ್ ಅಥವಾ ವೆಬ್‌ಸೈಟ್ rangayanashivamogga.karnataka.gov.in ಮೂಲಕ ಗೂಗಲ್ ಫಾರ್ಮ್ ಡೌನ್‌ಲೋಡ್ ಮಾಡಿ ಆನ್‌ಲೈನ್ ಮೂಲಕವೂ ಅರ್ಜಿ ಹಾಕಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 08182-256353 ಅಥವಾ ಮೊಬೈಲ್ 7975229166 ಸಂಪರ್ಕಿಸಬಹುದು.