ಶಿವಮೊಗ್ಗ: ಇಂಟರ್‌ಸಿಟಿ ರೈಲಿನಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ ಎರಡು ಬಾಕ್ಸ್‌ಗಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಎರಡು ಟೆಡ್ಡಿ ಬೇರ್ (Teddy Bear) ಗೊಂಬೆಗಳು ಪತ್ತೆಯಾಗಿವೆ.
₹7,000 ಮೌಲ್ಯದ ಎರಡು ಟೆಡ್ಡಿ ಬೇರ್‌ಗಳನ್ನು ಒಪ್ಪಿಸಲಾಗಿದೆ ಎಂದು ರೈಲ್ವೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಯಶವಂತಪುರ – ಶಿವಮೊಗ್ಗ ಇಂಟರ್‌ಸಿಟಿ ರೈಲಿನಲ್ಲಿ ಪ್ರಯಾಣಿಕರು ಬಾಕ್ಸ್ ಮರೆತು ಹೋಗಿದ್ದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ವಾರಸುದಾರರಿಗೆ ತಲುಪಿತು ಹಳಿಗೆ ಬಿದ್ದ ಗೆಜ್ಜೆ
ತುಂಡಾಗಿ ಹಳಿ ಮೇಲೆ ಬಿದ್ದ ಗೆಜ್ಜೆಯನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು ವಾರಸುದಾರರಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಗೆಜ್ಜೆ ತುಂಡಾಗಿ ಹಳಿ ಮೇಲೆ ಬಿದ್ದಿತ್ತು. ರೈಲ್ವೆ ಪೊಲೀಸರು ₹4,500 ಮೌಲ್ಯದ ಗೆಜ್ಜೆಯನ್ನು ವಶಕ್ಕೆ ಪಡೆದು ವಾರಸುದಾರರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ » ಜೀವ ವಿಮೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಐದು ವಿಧದ ಇನ್ಷುರೆನ್ಸ್‌ಗಳ ವಿವರ