ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 JANUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ತೈಪೂಸಂ ಜಾತ್ರೆ ಅಂಗವಾಗಿ ಭಕ್ತರು ಶಿವಮೊಗ್ಗದಲ್ಲಿ ಹಾಲಿನ ಕೊಡ ಮತ್ತು ಕಾವಡಿ ಹೊತ್ತು ಮೆರವಣಿಗೆ ನಡೆಸಿದರು. ಗುಡ್ಡೇಕಲ್‌ನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ 1008 ಕೊಡ ಹಾಲಿನ ಅಭಿಷೇಕ ನೆರವೇರಿಸಲಾಯಿತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಹರಕೆ ಹೊತ್ತವರು ಶಿವಮೊಗ್ಗದ ಮೂರು ಭಾಗದಿಂದ ಗುಡ್ಡೇಕಲ್ ದೇಗುಲದವರೆಗೆ ಮೆರವಣಿಗೆ ನಡೆಸಿದರು. ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಸುಮಾರು 300 ಮಹಿಳೆಯರು, ಶುಭ ಮಂಗಳ ಕಲ್ಯಾಣ ಮಂದಿರದಿಂದ ಸುಮಾರು 500 ಮಹಿಳೆಯರು, ಶಿವಮೊಗ್ಗ ಗ್ರಾಮಾಂತರ ಭಾಗದಿಂದ ದೊಡ್ಡ ಸಂಖ್ಯೆಯ ಮಹಿಳೆಯರು ಹಾಲಿನ ಕೊಡ ಹೊತ್ತು ದೇಗುದವರೆಗೆ ಮೆರವಣಿಗೆ ನಡೆಸಿದರು.
ಇದನ್ನೂ ಓದಿ – ಎಲೆಚುಕ್ಕೆ ರೋಗ, ಕೆಎಫ್‌ಡಿ ಭೀತಿ, ಜಿಲ್ಲೆಯ ಸಮಸ್ಯೆಗಳ ಕುರಿತು ಮಹತ್ವದ ಚರ್ಚೆ, ಗ್ಯಾರಂಟಿಗಳನ್ನು ತಲುಪಿಸುವಂತೆ ಸೂಚನೆ
ಇನ್ನು, ಹರಕೆ ಹೊತ್ತ ಭಕ್ತರು ಕಾವಡಿಗಳನ್ನು ಹೊತ್ತು ವಾದ್ಯದ ಶಬ್ದಕ್ಕೆ ನೃತ್ಯ ಮಾಡುತ್ತ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ತೈಪೂಸಂ ಹಬ್ಬದಂದು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಗೆ ಹಾಲಿನ ಅಭಿಷೇಕ ನೆರವೇರಿಸಲಾಗುತ್ತದೆ. ತಮಿಳುನಾಡಿನಲ್ಲಿ ತೈಪೂಸಂ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ನೆಲೆಸಿರುವ ತಮಿಳು ಭಾಷಿಕರು ಇಲ್ಲಿ ಜಾತ್ರೆ ನೆರವೇರಿಸುತ್ತಾರೆ.