ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 2 JUNE 2023
SHIMOGA : ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವಾಗ ವ್ಯಕ್ತಿಯೊಬ್ಬರು ಮೊಬೈಲ್ (Mobile) ಕಳೆದುಕೊಂಡಿದ್ದಾರೆ. ಅದೆ ದಿನ ಅವರ ಮೊಬೈಲ್ ಫೋನ್ನಲ್ಲಿರುವ ಫೋನ್ ಪೇ ಮೂಲಕ ಹಣ ಡ್ರಾ ಆಗಿದೆ. ಒಟ್ಟು 1.38 ಲಕ್ಷ ರೂ. ಹಣ ಡ್ರಾ ಆಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಮಹಿಳೆಗೆ ಇಂಗ್ಲೆಂಡ್ನಿಂದ ಫ್ರೆಂಡ್ ರಿಕ್ವೆಸ್ಟ್, ಏರ್ಪೋರ್ಟ್ನಿಂದ ಫೋನ್, ಕೊನೆಗೆ ಕಾದಿತ್ತು ಶಾಕ್
ನಿವೃತ್ತ ಉದ್ಯೋಗಿ ರಾಮಪ್ಪ ಎಂಬುವವರು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವಾಗ ಮೊಬೈಲ್ (Mobile) ಕಳೆದು ಹೋಗಿದೆ. ಆ ಮೊಬೈಲ್ನಲ್ಲಿ ಎರಡು ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಫೋನ್ ಪೇ ಬಳಸುತ್ತಿದ್ದರು. ಈ ಫೋನ್ ಪೇ ಮೂಲಕ ಎರಡು ಬ್ಯಾಂಕ್ ಖಾತೆಗಳಿಂದ ಮೂರು ಬಾರಿ ಡ್ರಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ನರ್ಸ್ಗೆ ಫೇಸ್ಬುಕ್ ಸ್ನೇಹಿತ ಕೊಟ್ಟ ಶಾಕ್, ಕಂಗಾಲಾಗಿ ಪೊಲೀಸ್ ಠಾಣೆಗೆ ದೌಡು
ಒಂದು ಬ್ಯಾಂಕ್ ಖಾತೆಯಿಂದ ಮೊದಲಿಗೆ 83 ಸಾವಿರ ರೂ. ಆಮೇಲೆ 8 ಸಾವಿರ ರೂ. ಎರಡನೇ ಬ್ಯಾಂಕ್ ಖಾತೆಯಿಂದ 47,500 ರೂ. ಹಣ ಡ್ರಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ರಾಮಪ್ಪ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್ಡೇಟ್

About The Editor
ನಿತಿನ್ ಆರ್.ಕೈದೊಟ್ಲು
















