ಶಿವಮೊಗ್ಗದಲ್ಲಿ ಹಾಡಹಗಲೆ ಗನ್ ತೋರಿಸಿ ಬೈಕ್ ಡೀಲರ್‌ಗೆ ಬೆದರಿಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 10 APRIL 2023

SHIMOGA : ಸಕೆಂಡ್ ಹ್ಯಾಂಡ್ ಬೈಕ್ ಡೀಲರ್ ‍ಒಬ್ಬರಿಗೆ ಗನ್ (Gun) ತೋರಿಸಿ ಬೆದರಿಕೆ ಒಡ್ಡಲಾಗಿದೆ. ಇಲಿಯಾಸ್ ನಗರದ ನ್ಯಾಮತ್ ಶಾದಿ ಮಹಲ್ ಬಳಿ ಘಟನೆ ಸಂಭವಿಸಿದೆ.

Crime-News-General-Image

ಸಕೆಂಡ್ ಹ್ಯಾಂಡ್ ಬೈಕ್ ಡೀಲರ್ ಮೊಹಮ್ಮದ್ ರಿಯಾಬ್ ‍ಎಂಬುವವರ ಬಳಿ ಅಜರ್ ಎಂಬಾತ 40 ಸಾವಿರ ರೂ.ಗೆ ಹೋಂಡಾ ಶೈನ್ ಬೈಕ್ ಖರೀದಿಸಿದ್ದ. ಸ್ವಲ್ಪ ಸಮಯದ ಬಳಿಕ ಹಣ ಕೊಡುವುದಾಗಿ ತಿಳಿಸಿದ್ದ. ಇಲಿಯಾಜ್ ನಗರದಲ್ಲಿ ಅಜರ್ ಸಿಕ್ಕಿದ್ದರಿಂದ ಮೊಹಮ್ಮದ್ ರಿಯಾಬ್ ಅವರು ಹಣ ಕೊಡು, ಇಲ್ಲವಾದಲ್ಲಿ ಬೈಕ್ ಹಿಂತಿರುಗಿಸು ಎಂದು ಕೇಳಿದ್ದಾರೆ. ಆಗ ಅಜರ್ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದ ಫ್ಲೈ ಓವರ್ ಬಳಿ ಅಪಘಾತ, ಲಾರಿ ಕೆಳಗೆ ಸಿಲುಕಿದ ಬೈಕ್ ಸವಾರ, ಚಾಲಕ ಎಸ್ಕೇಪ್

ತನ್ನ ಬಳಿ ಇದ್ದ ಗನ್ (Gun) ತೆಗೆದು ಅದರ ಹಿಂಬದಿಯಿಂದ ಮೊಹಮ್ಮದ್ ರಿಯಾಬ್ ಕಣ್ಣಿನ ಭಾಗಕ್ಕೆ ಹೊಡೆದಿದ್ದಾನೆ. ಅಲ್ಲದೆ ಶೂಟ್‍ ಮಾಡುವಂತೆ ಗನ್ ಹಿಡಿದು ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ತನ್ನ ಸ್ನೇಹಿತರು ಬರುತ್ತಿರುವುದನ್ನು ಗಮನಿಸಿ ಅಜರ್ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸಲಾಗುತ್ತಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 10, 2023

Leave a Comment