ಶಿವಮೊಗ್ಗದಲ್ಲಿ ರಾತ್ರಿ ಗಸ್ತು ವೇಳೆ ಇನ್ಸ್ ಪೆಕ್ಟರ್’ಗೆ ಲಾಂಗ್ ಬೀಸಿ, ಜೀವ ಬೆದರಿಕೆ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | CRIME | 16 ಮೇ 2022

ಶಿವಮೊಗ್ಗದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರಿಗೆ ಲಾಂಗ್ ತೋರಿಸಿ ಜೀವ ಬೆದರಿಕೆ ಒಡ್ಡಲಾಗಿದೆ. ರಾತ್ರಿ ಗಸ್ತು ವೇಳೆ ಈ ಘಟನೆ ಸಂಭವಿಸಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (CRIME)

ಟ್ರಾಫಿಕ್ ಠಾಣೆ ಇನ್ಸ್ ಪೆಕ್ಟರ್ ಸಿದ್ದೆಗೌಡ ಮತ್ತು ಗಸ್ತು ತಿರುಗುತ್ತಿದ್ದ ಸಿಬ್ಬಂದಿಗೆ ಲಾಂಗ್ ತೋರಿಸಿ ಬೆದರಿಕೆ ಒಡ್ಡಲಾಗಿದೆ.

ಏನಿದು ಘಟನೆ?

ಮೇ 12ರ ರಾತ್ರಿ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ಸಿದ್ದೇಗೌಡ ಅವರು ಶಿವಮೊಗ್ಗದ ಮಲವಗೊಪ್ಪ ಬಳಿ ಗಸ್ತು ತಿರುಗುತ್ತಿದ್ದರು. ಶುಗರ್ ಫ್ಯಾಕ್ಟರಿ ಎದುರಿನ ಬಸ್ ನಿಲ್ದಾಣದಲ್ಲಿ ಇಬ್ಬರು ಯುವಕರು ಮದ್ಯಪಾನ ಮಾಡುತ್ತಿದ್ದರು. ಇದನ್ನು ಕಂಡ ಪೊಲೀಸರು ಅಲ್ಲಿಂದ ತೆರಳುವಂತೆ ಯುವಕರಿಗೆ ಸೂಚಿಸಿದ್ದಾರೆ.

ಈ ಸಂದರ್ಭ ಸಚಿನ್ ಎಂಬಾತ ಇದನ್ನು ಕೇಳೋಕೆ ನೀವ್ಯಾರು ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಲಾಠಿ ಕಸಿದುಕೊಂಡು ಪೊಲೀಸ್ ಸಿಬ್ಬಂದಿ ಕೃಷ್ಣಪ್ಪ ಅವರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಸಚಿನ್ ಎಂಬಾತನನ್ನು ಪೊಲೀಸರು ಹಿಡಿದುಕೊಂಡಿದ್ದಾರೆ. ಜೊತೆಗಿದ್ದ ಪವನ್ ಎಂಬಾತ ಸಮೀಪದ ಪೊದೆಯೊಂದರ ಬಳಿಯಿಂದ ಲಾಂಗ್ ತೆಗೆದುಕೊಂಡು ಪೊಲೀಸರತ್ತ ತೋರಿಸಿದ್ದಾನೆ.

ಸಚಿನ್’ನನ್ನು ಬಿಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಪವನ್, ಪೊಲೀಸರಿಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಅಲ್ಲದೆ ಲಾಂಗ್ ಬೀಸಿದ್ದಾನೆ. ಈ ವೇಳೆ ಸಚಿನ್’ನನ್ನು ಕೈ ಬಿಟ್ಟು ಪೊಲೀಸರು ತಪ್ಪಿಸಿಕೊಂಡಿದ್ದಾರೆ.

Shimoga Nanjappa Hospital

ಆರೋಪಿಗಳಾದ ಮಲವಗೊಪ್ಪದ ಸಚಿನ್ ಮತ್ತು ಪವನ್ ಇಬ್ಬರು ತಪ್ಪಿಸಿಕೊಂಡಿದ್ದಾರೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ನಿಮ್ಮೂರು, ನಿಮ್ಮಾ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Leave a Comment