SHIVAMOGGA LIVE NEWS | 8 MARCH 2023
SHIMOGA : ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಅಥ್ಲೇಟಿಕ್ ಚಾಂಪಿಯನ್ ಶಿಪ್ (Championship) ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ಕ್ರೀಡಾಶಾಲೆಯ ವಿದ್ಯಾರ್ಥಿನಿಯರು ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿದ್ದಾರೆ. ಫೆ. 20 ರಿಂದ 22ರವರೆಗೆ ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ಚಾಂಪಿಯನ್ ಶಿಪ್ ಆಯೋಜಿಸಲಾಗಿತ್ತು.
ಎತ್ತರ ಜಿಗಿತದಲ್ಲಿ 1.58 ಸೆ.ಮೀ. ಎತ್ತರ ಜಿಗಿದು ಗೌತಮಿ ಗೌಡ ತಮ್ಮ 6 ವರ್ಷ ಹಿಂದಿನ ದಾಖಲೆಯನ್ನು ಮುರಿದು ಪ್ರಥಮ ಸ್ಥಾನ ಗಳಿಸಿದ್ದಾರೆ. ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
100 ಮೀ ಹರ್ಡಲ್ಸ್ ನಲ್ಲಿ ಗೌರಾಂಗಿ ಗೌಡ ಪ್ರಥಮ ಮತ್ತು 400 ಮೀ ಹಾಗೂ 600 ಮೀ ಓಟದಲ್ಲಿ ಲಕ್ಷ್ಮೀ ಹೆಚ್.ಪಿ ಅವರು ತೃತೀಯ ಸ್ಥಾನಗಳಿಸಿ ಜಿಲ್ಲೆಗೆ ಗೌರವ (Championship) ತಂದುಕೊಟ್ಟಿದ್ದಾರೆ.
ಇದನ್ನೂ ಓದಿ – ಕೆಲಸ ಹುಡುಕುತ್ತಿರುವವರೆ ಹುಷಾರ್, ಕೆಲಸ ಕೊಡುವುದಾಗಿ ಶಿವಮೊಗ್ಗದ ಯುವಕನಿಗೆ ಲಕ್ಷ ಲಕ್ಷ ವಂಚನೆ, ಹೇಗಾಯ್ತು?
ಅಥ್ಲೆಟಿಕ್ ತರಬೇತುದಾರ ಬಾಳಪ್ಪ ಮಾನೆ ಅವರು ಕ್ರೀಡಾಪಟುಗಳಿಗೆ ತರಬೇತು ನೀಡಿದ್ದರು. ಈ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಎಂ.ಟಿ. ಹಾಗೂ ಸಿಬ್ಬಂದಿವರ್ಗದವರು ಶುಭ ಹಾರೈಸಿದ್ದಾರೆ.