ಶಿವಮೊಗ್ಗ ಸಿಟಿಯಲ್ಲಿ ಜೋರು ಗಾಳಿ, ಗುಡುಗು ಸಹಿತ ಭಾರಿ ಮಳೆ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ನಗರದಲ್ಲಿ ಇಂದು ಸಂಜೆ ವೇಳೆಗೆ ಗುಡುಗು, ಮಿಂಚು ಸಹಿತ ಭಾರಿ ಮಳೆ (Heavy Rainfall) ಆರಂಭವಾಗಿದೆ.

ಸಂಜೆ ಆರು ಗಂಟೆ ಸುಮಾರಿಗೆ ಆರಂಭವಾದ ಮಳೆಯು, ಕ್ಷಣಕಾಲವೂ ಬಿಡುವು ನೀಡದೆ ನಿರಂತರವಾಗಿ (Continuous Rain) ಸುರಿಯುತ್ತಿದೆ. ಮಳೆಯ ಜೊತೆಗೆ ಗುಡುಗು, ಮಿಂಚು (Thunder and Lightning) ಹಾಗೂ ಜೋರು ಗಾಳಿ (Strong Wind) ಬೀಸುತ್ತಿದೆ.

Rainfall-in-Shimoga-city-in-the-evening.

ಕಳೆದ ಕೆಲವು ದಿನಗಳಿಂದ ಸೆಕೆಯಿಂದ ಕಂಗಾಲಾಗಿದ್ದ ನಗರದ ಜನತೆಗೆ ಇಂದು ಸಂಜೆಯ ಮಳೆ ತಂಪು ತಂದಿದೆ. ಮಳೆಯ ಆರ್ಭಟದಿಂದಾಗಿ ಶಿವಮೊಗ್ಗ ನಗರದಲ್ಲಿ ತಾಪಮಾನ ಇಳಿಕೆಯಾಗುವ (Temperature Drop) ಸಾಧ್ಯತೆ ಇದೆ. ಸದ್ಯ ನಗರದಲ್ಲಿ ತಂಪು ವಾತಾವರಣ (Cool Weather) ನಿರ್ಮಾಣವಾಗಿದೆ. ಪ್ರಸ್ತುತ ನಗರದಲ್ಲಿ 28 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ರಾತ್ರಿ ವೇಳೆಗೆ ಇದು ಇನ್ನಷ್ಟು ತಗ್ಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇನ್ನು, ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ರಸ್ತೆ ಬದಿಯ ಕಟ್ಟಡಗಳ ಕೆಳಗೆ ಆಶ್ರಯ (Shelter) ಪಡೆದುಕೊಂಡಿದ್ದಾರೆ. ದ್ವಿಚಕ್ರ ವಾಹನ ಸವಾರರು ಸಹ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ, ಮಳೆಯಂದ ಸುರಕ್ಷಿತ ಜಾಗಗಳಲ್ಲಿ ಆಶ್ರಯ ಪಡೆದಿರುವುದು ಕಂಡುಬಂದಿದೆ. ಮತ್ತೊಂದೆಡೆ ವೀಕೆಂಡ್‌ ವ್ಯಾಪಾರಕ್ಕು ಅಡಚಣೆಯಾಗಿದೆ.

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಮೇ 16, 2026