SHIVAMOGGA LIVE NEWS | 16 JULY 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SHIMOGA : ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊಳೆಗೆ ಹರಿಸಲಾಗುತ್ತಿದೆ. ಹಾಗಾಗಿ ಕೋರ್ಪಲಯ್ಯ ಛತ್ರ ಮಂಟಪ (Mantapa) ಮುಳುಗಿದೆ. ಇದನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧೆಡೆಯಿಂದ ಜನರು ನಿರಾಸೆಯಿಂದ ಹಿಂತಿರುಗುವಂತಾಗಿದೆ.
66 ಕ್ಯೂಸೆಕ್ ನೀರು
ಹಿನ್ನೀರು ಭಾಗದಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ತುಂಗಾ ಜಲಾಶಯ ಭರ್ತಿಯಾಗಿದೆ. ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಹಾಗಾಗಿ ಶಿವಮೊಗ್ಗದಲ್ಲಿ ತುಂಗಾ ನದಿಯ ಮೈದುಂಬಿ ಹರಿಯುತ್ತಿದೆ. ತುಂಗಾ ನದಿ ದಂಡೆ ಮೇಲಿರುವ ಕೋರ್ಪಲಯ್ಯ ಛತ್ರ ಮಂಟಪ ಸಂಪೂರ್ಣ ಭರ್ತಿಯಾಗಿದೆ.
ಕಣ್ತುಂಬಿಕೊಳ್ಳಲು ಬಂದವರಿಗೆ ನಿರಾಸೆ
ಪ್ರತಿ ಮಳೆಗಾಲದಲ್ಲಿ ಜಲಾಶಯದಿಂದ ನೀರು ಹೊರ ಬಿಡುತ್ತಿದ್ದಂತೆ ಶಿವಮೊಗ್ಗದ ಜನರು ಮಂಟಪದತ್ತ ಕಣ್ಣು ಹಾಯಿಸುವುದು ಸಾಮಾನ್ಯ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರು ‘ಶಿವಮೊಗ್ಗದವರು ಮಂಟಪ ಮುಳುಗಿತಾ’ ಎಂಬ ಕುತೂಹಲದಿಂದ ಕೇಳುತ್ತಾರೆ. ಮಂಟಪ ಮುಳುಗಿದಾಗ ನಗರದ ವಿವಿಧೆಡೆಯಿಂದ ಜನರು ನದಿ ದಂಡೆಗೆ ಬರುವುದು ಸಾಮಾನ್ಯ. ಮಂಟಪದ ಬಳಿ ಪೂಜೆ ಸಲ್ಲಿಸಿ, ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಾರೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಮಂಟಪ ಮುಳುಗಿರುವುದನ್ನು ನೋಡಲು ಟಿಕೆಟ್ ಖರೀದಿಸಬೇಕಿದೆ.

ಗೇಟ್ ಬಳಿ ಬಂದು ಜನರ ಆಕ್ರೋಶ
ಅಯ್ಯಪ್ಪ ಸ್ವಾಮಿ ಶಾಲೆ ಸಮೀಪದಲ್ಲಿ ಮಂಟಪದ ಬಳಿ ತೆರಳಲು ಇರುವ ಗೇಟ್ ಬಂದ್ ಮಾಡಲಾಗಿದೆ. ಹಿಂದಿ ಭಾಷಿಕ ಸೆಕ್ಯೂರಿಟಿಯನ್ನು ಇಲ್ಲಿ ನಿಲ್ಲಿಸಲಾಗಿದ್ದು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಎದುರಿಗೆ ಕಾಂಪೌಂಡ್ ನಿರ್ಮಿಸಲಾಗಿದೆ. ಹಾಗಾಗಿ ಮಂಟಪ ನೋಡಲು ಸಾಧ್ಯವಿಲ್ಲ. ಬೆಕ್ಕಿನ ಕಲ್ಮಠದ ಸಮೀಪ ವಿದ್ಯಾರ್ಥಿನಿಯರ ಸರ್ಕಾರಿ ಹಾಸ್ಟೆಲ್ ಕಡೆಯಿಂದ ಒಳ ಹೋಗಲು ಅವಕಾಶವಿದೆ. ಆದರೆ ಹಣ ತೆತ್ತು ಟಿಕೆಟ್ ಖರೀದಿಸಿ ಒಳ ಹೋಗಬೇಕಿದೆ.
ಮಕ್ಕಳಿಗೆ ರಜೆ ಇದೆ. ಮಂಟಪ ಮುಳುಗಿದೆ ಅಂದರು. ಮೊಮ್ಮಕ್ಕಳನ್ನು ಕರೆದುಕೊಂಡು ಬಂದೆ. ಇಲ್ಲಿ ಗೇಟ್ ತೆಗೆಯುತ್ತಿಲ್ಲ. ಆ ಕಡೆಯಿಂದ ಬನ್ನಿ ಅಂತಿದ್ದಾರೆ. ಮಳೆ ಬರುತ್ತಿದೆ. ಈ ಮಕ್ಕಳನ್ನು ಹಿಡಿದುಕೊಂಡು ಇಲ್ಲಿಂದ ಆ ಗೇಟ್‌ವರೆಗೆ ನಡೆದುಕೊಂಡು ಹೋಗಲು ಆಗುತ್ತಾ? ಎರಡು ಹೆಜ್ಜೆ ಒಳಗೆ ಬಿಟ್ಟರೆ ನೋಡಕೊಂಡು ಹೋಗುತ್ತೇವೆ. ಪ್ರತಿ ವರ್ಷ ನೋಡುತ್ತಿದ್ದ ಮಂಟಪಕ್ಕೆ ಈಗ ಟಿಕೆಟ್ ತೆಗೆದುಕೊಂಡು ನೋಡಿ ಅಂತಿರೋದು ಸರಿನಾ?ಲಕ್ಷ್ಮಮ್ಮ, ಶಿವಮೊಗ್ಗದ ನಿವಾಸಿ
ಗೇಟ್‌ನಲ್ಲಿಯೇ ನಿಂತು ಜನರು ಮಂಟಪ ವೀಕ್ಷಿಸಲಾಗದೆ ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕಿ ಹಿಂತಿರುಗುತ್ತಿದ್ದಾರೆ.

ಮಂಟಪ ನೋಡಲು ಅವಕಾಶ ಕಲ್ಪಿಸಬೇಕಿತ್ತು
ಮಳೆಗಾಲದಲ್ಲಿ ಒಂದೆರಡು ಬಾರಿ ಮಂಟಪ ಮುಳುಗಬಹುದು. ಮೊದಲ ಬಾರಿ ಮುಳುಗಿದಾಗ ಜನರು ಕುತೂಹಲದಿಂದ ಮಂಟಪದ ಬಳಿ ಬರುತ್ತಾರೆ. ತುಂಗೆಗೆ ಪೂಜೆ ಸಲ್ಲಿಸುತ್ತಾರೆ. ಕನಿಷ್ಠ ಮಂಟಪ ನೋಡಲು ಅವಕಾಶ ನೀಡಬೇಕಿತ್ತು ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ ⇓
ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ ಮಳೆ, ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ? ಇಲ್ಲಿದೆ ಡಿಟೇಲ್ಸ್
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





