ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 NOVEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಅನುಮಾನಾಸ್ಪದ ಬಾಕ್ಸ್‌ಗಳಿಂದ ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಂಗಳೂರಿನಿಂದ ರಾತ್ರಿ 8 ಗಂಟೆಗೆ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿತು. ಅಲ್ಲಿಂದ ನಂತರ ಕಾರ್ಯಾಚರಣೆ (Operation) ಬಿರುಸಾಯಿತು.
ರಾತ್ರಿ ಹೇಗಿತ್ತು ಕಾರ್ಯಾಚರಣೆ?
ರಾತ್ರಿ 8.30ರ ಹೊತ್ತಿಗೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಪೋಟ ನಿರೋಧಕ ಸೂಟ್ ಧರಿಸಿ ಅನುಮಾನಾಸ್ಪದ ಬಾಕ್ಸ್ ಇರುವ ಸ್ಥಳಕ್ಕೆ ಆಗಮಿಸಿದರು. ಬಾಕ್ಸ್‌ಗಳ ಪರಿಶೀಲನೆ ನಡೆಸಿ ಮರಳಿದರು.
ರಾತ್ರಿ 9.30ರ ಹೊತ್ತಿಗೆ ಇನ್ನೊಂದೆರಡು ಬಾರಿ ಸ್ಥಳಕ್ಕೆ ಆಗಮಿಸಿ ಬಾಕ್ಸ್ ಪರಿಶೀಲಿಸಿದರು. ಬಾಂಬ್ ನಿಷ್ಕ್ರಿಯ ದಳದ ವಿಶೇಷ ಬಸ್‌ನಲ್ಲಿ ತರಲಾಗಿದ್ದ ಉಪಕರಣಗಳನ್ನು ಬಳಸಿ ಬಾಕ್ಸ್ ಪರಿಶೀಲಿಸಿದರು. ಬಾಕ್ಸ್‌ನಲ್ಲಿ ಸ್ಪೋಟಕವಿದೆಯೆ ಎಂದು ಚೆಕ್ ಮಾಡಿಕೊಳ್ಳಲು ಈ ಕ್ರಮ.
ರಾತ್ರಿ 10.30ರ ಹೊತ್ತಿಗೆ ಮಳೆ ಅಬ್ಬರಿಸಿತು. ಇದರಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು. ಅನುಮಾನಾಸ್ಪದ ಬಾಕ್ಸ್ ಒಳಗಿರುವ ವಸ್ತುಗಳ ಪರಿಶೀಲನೆಗೆ ಅಳವಡಿಸಿದ್ದ ಉಪಕರಣಗಳನ್ನು ತಕ್ಷಣ ವಾಪಸ್ ಕೊಂಡೊಯ್ದ ಸಿಬ್ಬಂದಿ.
ಇದನ್ನೂ ಓದಿ – ಅನುಮಾನಾಸ್ಪದ ಬಾಕ್ಸ್ ಕೇಸ್, ಒಳಗಿದ್ದ ವಸ್ತುಗಳ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?
ರಾತ್ರಿ 12 ಗಂಟೆವರೆಗೆ ಹಲವು ಬಾರಿ ಅನುಮಾನಾಸ್ಪದ ಬಾಕ್ಸ್ ಸ್ಕ್ಯಾನಿಂಗ್ ಮಾಡುವ ಪ್ರಕ್ರಿಯೆ ನಡೆಯಿತು. ಮಳೆ ಅಡ್ಡಿ, ಸ್ಕ್ಯಾನಿಂಗ್ ಪ್ರಕ್ರಿಯೆ ವೇಳೆ ತಾಂತ್ರಿಕ ಸಮಸ್ಯೆ ಸೇರಿದಂತೆ ನಾನಾ ಕಾರಣಕ್ಕೆ ಪ್ರಕ್ರಿಯೆ ವಿಳಂಬ.
ರಾತ್ರಿ 12.50ಕ್ಕೆ ಬಾಂಬ್ ನಿಷ್ಕ್ರಿಯ ದಳದ ಹಲವು ಸಿಬ್ಬಂದಿ ಒಟ್ಟಿಗೆ ಬಾಕ್ಸ್ ಬಳಿ ಆಗಮನ, ಪರಿಶೀಲನೆ. ಬಳಿಕ ತಮ್ಮ ಬೇಸ್‌ಗೆ ಹಿಂತಿರುಗಿದ ಸಿಬ್ಬಂದಿ. ಸಣ್ಣ ಪ್ರಮಾಣದ ಸ್ಪೋಟಕ ಬಳಸಿ ಬಾಕ್ಸ್ ಓಪನ್ ಮಾಡುವ ಕುರಿತು ತೀರ್ಮಾನ.
ರಾತ್ರಿ 2.15ರ ಬಳಿಕ ಅನುಮಾನಾಸ್ಪದ ಬಾಕ್ಸ್‌ನ ಲಾಕ್ ಮೇಲೆ ಸ್ಪೋಟಕ ಇರಿಸಿ, ಕೇಬಲ್ ಅಳವಡಿಸಿ ಹಿಂತಿರುಗಿದ ಬಾಂಬ್ ನಿಷ್ಕ್ರಿಯ ದಳ. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು, ಮಾಧ್ಯಮ ಸಿಬ್ಬಂದಿ, ಸಾರ್ವಜನಿಕರನ್ನು ಬಾಕ್ಸ್‌ನಿಂದ ನೂರು ಮೀಟರ್ ದೂರಕ್ಕೆ ಕಳುಹಿಸಲಾಯಿತು. ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮನ.
ಇದನ್ನೂ ಓದಿ – ರೈಲ್ವೆ ನಿಲ್ದಾಣದ ಮುಂದೆ ಎರಡು ಸ್ಪೋಟ, ರಾತ್ರಿ 2.40ಕ್ಕೆ ಮೊದಲ ಬ್ಲಾಸ್ಟ್, 3.24ಕ್ಕೆ ಎರಡನೇ ಸ್ಪೋಟ, ಕಾರಣವೇನು?
ರಾತ್ರಿ 2.40ಕ್ಕೆ ಮೊದಲ ಸ್ಪೋಟ. ಬಾಕ್ಸ್ ಇದ್ದ ಸ್ಥಳದಲ್ಲಿ ದಟ್ಟ ಹೊಗೆ. ಕೆಲ ಕ್ಷಣದ ಬಳಿಕ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮನ. ಬಾಕ್ಸ್‌ನಲ್ಲಿರುವ ವಸ್ತುಗಳ ಪರಿಶೀಲನೆ. ಬಾಕ್ಸ್‌ನಲ್ಲಿ ನ್ಯೂಸ್ ಪೇಪರ್ ಪತ್ತೆ. ಅದರ ಕೆಳಗೆ ಚೀಲದಲ್ಲಿ ಬಿಳಿ ಪೌಡರ್ ಇದ್ದ ವಸ್ತು ಪತ್ತೆ.
ರಾತ್ರಿ 3.15ಕ್ಕೆ ಮತ್ತೊಂದು ಬಾಕ್ಸ್‌ಗೆ ಸ್ಪೋಟಕ ಅಳವಡಿಕೆ ಪ್ರಕ್ರಿಯೆ ಆರಂಭ. ರಾತ್ರಿ 3.24ಕ್ಕೆ ಎರಡನೆ ಬಾಕ್ಸ್‌ನ ಲಾಕ್ ಸ್ಪೋಟ. ದಟ್ಟ ಹೊಗೆ ಮರೆಯಾದ ಮೇಲೆ ತಜ್ಞರ ತಂಡ ಭೇಟಿ, ಪರಿಶೀಲನೆ.
ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಎರಡು ಬಾಕ್ಸ್‌ಗಳನ್ನು ಕೊಂಡೊಯ್ದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ. ಅನುಮಾನಾಸ್ಪದ ಬಾಕ್ಸ್ ಪತ್ತೆಯಾದ ಸ್ಥಳದ ಸುತ್ತಲು ಬ್ಯಾರಿಕೇಡ್ ಹಾಕಿ ಬಂದೋಬಸ್ತ್.