SHIVAMOGGA LIVE NEWS | 19 AUGUST 2023
SHIMOGA : ತಳಿರು, ತೋರಣ, ಚಪ್ಪರದಿಂದ ಸಿಂಗಾರಗೊಂಡಿದ್ದ ಕಾಲೇಜು. ಸೀರೆ, ಪಂಚೆ, ಶಲ್ಯಗಳಿಂದ (TRADITIONAL DAY) ಕಂಗೋಳಿಸುತ್ತಿದ್ದ ವಿದ್ಯಾರ್ಥಿಗಳು. ಸಾಲು ಸಾಲು ಸಮೂಹ ನೃತ್ಯ ಪ್ರದರ್ಶನ. ಉಪನ್ಯಾಸಕರಿಂದ ರಾಂಪ್ ವಾಕ್.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ (ATNCC) ಆವರಣದಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ದಿನ (TRADITIONAL DAY) ಆಚಾರ್ಯ ಪರ್ವ – 2023 ಕಾರ್ಯಕ್ರಮದಲ್ಲಿ ಬಿಕಾಂ, ಬಿಬಿಎ ವಿದ್ಯಾರ್ಥಿಗಳು ಸಾಂಸ್ಕೃತಿಕ ವೇಷಭೂಷಣಗಳೊಂದಿಗೆ ಮಿಂಚಿದರು.
ಕೇರಳ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಂಗೊಳಿಸಿದರು. ವಿದ್ಯಾರ್ಥಿಗಳ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡುವಂತೆ ಉಪನ್ಯಾಸಕರು ರಾಂಪ್ ವಾಕ್ ಮಾಡಿದರು.
ಇದನ್ನೂ ಓದಿ – ಒಂದೇ ದಿನ ಯುಗಾದಿ, ದೀಪಾವಳಿ, ಕಾಲೇಜಿನಲ್ಲಿ ಕೊಠಡಿಗೊಂದು ಹಬ್ಬ, ವಿದ್ಯಾರ್ಥಿನಿಯರ ಸಂಭ್ರಮ