ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 27 FEBRURARY 2023
SHIMOGA : ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ನೆರೆಹೊರೆ ತಾಲೂಕು, ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಭಾರಿ ಸಂಖ್ಯೆಯ ವಾಹನಗಳು ಬಂದಿದ್ದರಿಂದ ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.

ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?
ಎಂ.ಆರ್.ಎಸ್ ಸರ್ಕಲ್ ನಿಂದ ವಿಮಾನ ನಿಲ್ದಾಣದವರೆಗೆ ಒಂದು ಬದಿಯಲ್ಲಿ ವಿಐಪಿ, ಅಧಿಕಾರಿಗಳ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದು ಬದಿಯಲ್ಲಿ ಇತರೆ ವಾಹನಗಳನ್ನು ಬಿಡಲಾಗಿದೆ. ಹಾಗಾಗಿ ಒಡ್ಡಿನಕೊಪ್ಪ, ಸಂತೆ ಕಡೂರು ಸೇರಿದಂತೆ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳಗಳೆಲ್ಲ ಸಂಪೂರ್ಣ ಜಾಮ್ (Traffic Jam) ಆಗಿದೆ.

ಇನ್ನು, ಬೈಪಾಸ್ ರಸ್ತೆ, ವಿದ್ಯಾನಗರ ರಸ್ತೆಗಳು ಸಂಪೂರ್ಣ ಜಾಮ್ ಆಗಿವೆ. ವಾಹನಗಳು, ಬಸ್ಸುಗಳಿಂದ ತುಂಬಿ ಹೋಗಿವೆ. ವಾಹನಗಳು ಒಂದಿನಿತು ಅಲುಗಾಡದೆ ನಿಂತಲ್ಲೆ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
ಇದನ್ನೂ ಓದಿ – ಪ್ರಧಾನಿಯಾದ ಮೇಲೆ ಶಿವಮೊಗ್ಗಕ್ಕೆ ಮೋದಿ ಎರಡನೇ ಭೇಟಿ

ಶಿವಮೊಗ್ಗದ ಬಿ.ಹೆಚ್.ರಸ್ತೆ, ಆಲ್ಕೊಳ ಸರ್ಕಲ್ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.



CLICK HERE TO JOIN SHIVAMOGGA LIVE WHATSAPP GROUP




